ETV Bharat / bharat

ಎರಡು ಕೊರೊನಾ ಲಸಿಕೆ ಸಿದ್ಧ: ಶುಕ್ರವಾರ ಎರಡನೇ ಹಂತದ ಡ್ರೈ ರನ್!?

author img

By

Published : Jan 6, 2021, 7:17 PM IST

ತುರ್ತು ಬಳಕೆಗಾಗಿ ದೇಶದಲ್ಲಿ ಈಗಾಗಲೇ ಎರಡು ಲಸಿಕೆಗಳು ಸಿದ್ಧಗೊಂಡಿವೆ. ಹೀಗಾಗಿ ಬರುವ ಶುಕ್ರವಾರ ಮತ್ತೊಂದು ಹಂತದ ಡ್ರೈ ರನ್​ ನಡೆಸಲು ಕೇಂದ್ರ ಸಜ್ಜುಗೊಂಡಿದೆ ಎನ್ನಲಾಗುತ್ತಿದೆ.

Second dry run for COVID-19
Second dry run for COVID-19

ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ವಿರುದ್ಧ ದೇಶದಲ್ಲಿ ಎರಡು ಲಸಿಕೆಗಳು ಸಿದ್ಧಗೊಂಡಿದ್ದು, ಇದೀಗ ಕೇಂದ್ರ ಸರ್ಕಾರ ಮತ್ತೊಂದು ಹಂತದ ಡ್ರೈ ರನ್​ ನಡೆಸಲು ಸಿದ್ಧವಾಗಿದೆ. ಈಗಾಗಲೇ ಜನವರಿ 2ರಂದು ಮೊದಲನೇ ಹಂತದ ಡ್ರೈ ರನ್​ ನಡೆದಿದ್ದು, ಇದರ ಬೆನ್ನಲ್ಲೇ ಶುಕ್ರವಾರ ಎರಡನೇ ಹಂತದ ಡ್ರೈ ರನ್​ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಎಲ್ಲಾ ರಾಜ್ಯಗಳಲ್ಲೂ ಈ ಡ್ರೈ ರನ್​ ನಡೆಯಲಿದ್ದು, ದೇಶದ ಜನರಿಗೆ ಕೋವಿಡ್​-19 ಲಸಿಕೆ ಹಾಕಿಸುವ ಪೂರ್ವ ಪ್ರಯೋಗ–ಡ್ರೈ ರನ್ ಇದಾಗಿದೆ. ಶುಕ್ರವಾರ ದಿನವಿಡೀ ಡ್ರೈ ರನ್ ನಡೆಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ಕೋವಿಡ್​ ಲಸಿಕೆ ಜನಸಾಮಾನ್ಯರಿಗೆ ವಿತರಣೆ ಮಾಡುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿರುವ ಕಾರಣ, ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ದೇಶದಲ್ಲಿ ಮೊದಲ ದಿನದ ಲಸಿಕೆ ನೀಡಿಕೆಯ ಪೂರ್ವ ಪ್ರಯೋಗ–ಡ್ರೈ ರನ್ ಯಶಸ್ವಿಯಾಗಿದೆ. ದೇಶದಲ್ಲಿ ಈಗಾಗಲೇ ಕೋವಿಶಿಲ್ಡ್ ಹಾಗೂ ಕೋವ್ಯಾಕ್ಸಿನ್​ ಲಸಿಕೆ ತುರ್ತು ಬಳಕೆಗೆ ಭಾರತದ ಔಷಧ ಮಹಾನಿಯಂತ್ರಕ(ಡಿಸಿಜಿಐ) ಅನುಮತಿ ನೀಡಿದೆ.

ನಾಳೆ ಎಲ್ಲ ರಾಜ್ಯದ ಆರೋಗ್ಯ ಸಚಿವರೊಂದಿಗೆ ಸಭೆ

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಾಳೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್​ ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ. ನಾಳೆ 12:30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಯಲಿದ್ದು, ಡ್ರೈ ರನ್​ ನಡೆಸುವ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.