ಮುಂಬೈ (ಮಹಾರಾಷ್ಟ್ರ): ಸ್ಕಾರ್ಪೀನ್ ದರ್ಜೆಯ ಜಲಾಂತರ್ಗಾಮಿ ಐಎನ್‌ಎಸ್ ಕರಂಜ್ ಅನ್ನು ಮುಂಬೈನ ಭಾರತೀಯ ನೌಕಾಪಡೆಗೆ ಇಂದು ನಿಯೋಜಿಸಲಾಯಿತು. ಸಮಾರಂಭದಲ್ಲಿ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಮತ್ತು ಅಡ್ಮಿರಲ್ (ನಿವೃತ್ತ) ವಿ.ಎಸ್. ಶೇಖಾವತ್ ಉಪಸ್ಥಿತರಿದ್ದರು.
ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ನೌಕಾಪಡೆಯ ಮುಖ್ಯಸ್ಥರು, ಪ್ರಧಾನಿ ನರೇಂದ್ರ ಮೋದಿಯವರ 'ಆತ್ಮನಿರ್ಭರ ಭಾರತ' (ದೇಶೀಕರಣ)ದ ದೂರದೃಷ್ಟಿಯನ್ನು ಶ್ಲಾಘಿಸಿದರು.
ಇದನ್ನು ಓದಿ: ವಿಜ್ಞಾನಿ ಯು.ಆರ್. ರಾವ್ ಜನ್ಮದಿನದಂದು ಗೂಗಲ್ ಡೂಡಲ್ ಗೌರವ
"ಆತ್ಮನಿರ್ಭರ ಭಾರತ ಅಥವಾ ದೇಶೀಕರಣಕ್ಕೆ ಪ್ರಚೋದನೆಯು ಭಾರತೀಯ ನೌಕಾಪಡೆಯ ಬೆಳವಣಿಗೆಯ ಕಥೆ. ಮತ್ತು ಭವಿಷ್ಯದ ಪಥದ ಮೂಲ ಸಿದ್ಧಾಂತವಾಗಿದೆ" ಎಂದು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಹೇಳಿದರು.
ಕಳೆದ ಏಳು ದಶಕಗಳಲ್ಲಿ ಭಾರತೀಯ ನೌಕಾಪಡೆ ದೇಶೀಕರಣ ಮತ್ತು ರಕ್ಷಣೆಯಲ್ಲಿ ಸ್ವಾವಲಂಬನೆಯ ಪ್ರಬಲ ಪ್ರತಿಪಾದಕವಾಗಿದೆ ಎಂದರು. "ಪ್ರಸ್ತುತ, 42 ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳಲ್ಲಿ 40 ಭಾರತದಲ್ಲಿ ನಿರ್ಮಿಸಲಾಗುತ್ತಿದೆ" ಎಂದು ನೌಕಾಪಡೆಯ ಮುಖ್ಯಸ್ಥರು ಇದೇ ವೇಳೆ ಮಾಹಿತಿ ನೀಡಿದರು.