ಸೋನಿಪತ್(ಹರಿಯಾಣ): ಕನಿಷ್ಠ ಬೆಂಬಲ ಬೆಲೆ ವಿಚಾರವಾಗಿ ಕೇಂದ್ರ ಸರ್ಕಾರದೊಂದಿಗೆ ಸಂಯುಕ್ತ ಕಿಸಾನ್ ಮೋರ್ಚಾ ಮಹತ್ವದ ಸಭೆ ನಡೆಸಲಿದೆ. ಡಿಸೆಂಬರ್ 7ರಂದು ಸಭೆ ನಿರ್ಧಾರಗೊಂಡಿದೆ ಎಂದು ರೈತ ಸಂಘಟನೆ ಮುಖ್ಯಸ್ಥ ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆಗಳನ್ನ ಈಗಾಗಲೇ ಮೋದಿ ಸರ್ಕಾರ ಹಿಂಪಡೆದುಕೊಂಡಿದ್ದು, ಸಂಸತ್ ಅಧಿವೇಶನದಲ್ಲೂ ಈ ಮಸೂದೆ ಅಂಗೀಕಾರವಾಗಿದೆ. ಆದರೆ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಇನ್ನಿತ್ತರ ಬೇಡಿಕೆಯೊಂದಿಗೆ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ಇದರ ಬೆನ್ನಲ್ಲೇ ಇಂದು ಮಹತ್ವದ ಸಭೆ ನಡೆಯಿತು.
-
SKM has formed a 5-member committee to talk to the Govt of India. It'll be the authorised body to talk to the Govt. The committee will have Balbir Singh Rajewal, Shiv Kumar Kakka, Gurnam Singh Charuni, Yudhvir Singh & Ashok Dhawale. Next meeting of SKM on 7th Dec: Rakesh Tikait pic.twitter.com/h6LKfrHywl
— ANI (@ANI) December 4, 2021 " class="align-text-top noRightClick twitterSection" data="
">SKM has formed a 5-member committee to talk to the Govt of India. It'll be the authorised body to talk to the Govt. The committee will have Balbir Singh Rajewal, Shiv Kumar Kakka, Gurnam Singh Charuni, Yudhvir Singh & Ashok Dhawale. Next meeting of SKM on 7th Dec: Rakesh Tikait pic.twitter.com/h6LKfrHywl
— ANI (@ANI) December 4, 2021SKM has formed a 5-member committee to talk to the Govt of India. It'll be the authorised body to talk to the Govt. The committee will have Balbir Singh Rajewal, Shiv Kumar Kakka, Gurnam Singh Charuni, Yudhvir Singh & Ashok Dhawale. Next meeting of SKM on 7th Dec: Rakesh Tikait pic.twitter.com/h6LKfrHywl
— ANI (@ANI) December 4, 2021
ನವೆಂಬರ್ 29ರಂದು ಟ್ರ್ಯಾಕ್ಟರ್ ಮಾರ್ಚ್ ನಡೆಸಲು ಮುಂದಾಗಿದ್ದ ರೈತ ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ ಡಿಸೆಂಬರ್ 4ರವರೆಗೆ ಕಾಲಾವಕಾಶ ನೀಡಿ ಪತ್ರ ಬರೆದಿತ್ತು. ಇದೇ ಕಾರಣಕ್ಕಾಗಿ ಟ್ರ್ಯಾಕ್ಟರ್ ಮೆರವಣಿಗೆ ಮುಂದೂಡಿಕೆ ಮಾಡಿ, ಇಂದು ಮಹತ್ವದ ಸಭೆ ನಡೆಸಲು ನಿರ್ಧರಿಸಿತ್ತು. ಇಂದು ನಡೆದ ಸಭೆಯಲ್ಲಿ ಭಾಗಿಯಾಗಿ ಚರ್ಚೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ರಾಕೇಶ್ ಟಿಕಾಯತ್ ಮಾತನಾಡಿದರು.
ಐವರು ಸದಸ್ಯರ ಸಮಿತಿಯೊಂದಿಗೆ ಇದೀಗ ಕೇಂದ್ರ ಸರ್ಕಾರ ಮಾತುಕತೆ ನಡೆಸಲಿದ್ದು, ಇದರಲ್ಲಿ ಬಲ್ಬೀರ್ ಸಿಂಗ್ ರಾಜೆವಾಲ್, ಶಿವಕುಮಾರ್ ಕಾಕಾ, ಗುರ್ನಾಮ್ ಸಿಂಗ್ ಯದುವೀರ್ ಸಿಂಗ್ ಹಾಗೂ ಅಶೋಕ್ ದಾವ್ಲೆ ಇದ್ದಾರೆ ಎಂದು ತಿಳಿಸಿದೆ. ಕನಿಷ್ಠ ಬೆಂಬಲ ಬೆಲೆ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರೈತ ಸಂಘಟನೆ ಜೊತೆ ಮಾತುಕತೆ ನಡೆಸಲಿದ್ದಾರೆಂದು ತಿಳಿದು ಬಂದಿದೆ.
-
Leaders of all farmer orgs said that they won't go back unless cases against farmers are withdrawn. Today a clear cut signal has been sent out to Govt that we're not going to take back the agitation unless all cases against farmers are taken back: Farmer leader Darshan Pal Singh pic.twitter.com/E2Zv25giyE
— ANI (@ANI) December 4, 2021 " class="align-text-top noRightClick twitterSection" data="
">Leaders of all farmer orgs said that they won't go back unless cases against farmers are withdrawn. Today a clear cut signal has been sent out to Govt that we're not going to take back the agitation unless all cases against farmers are taken back: Farmer leader Darshan Pal Singh pic.twitter.com/E2Zv25giyE
— ANI (@ANI) December 4, 2021Leaders of all farmer orgs said that they won't go back unless cases against farmers are withdrawn. Today a clear cut signal has been sent out to Govt that we're not going to take back the agitation unless all cases against farmers are taken back: Farmer leader Darshan Pal Singh pic.twitter.com/E2Zv25giyE
— ANI (@ANI) December 4, 2021
ಇದನ್ನೂ ಓದಿರಿ: ಇಂದು ಸಿಂಘು ಗಡಿಯಲ್ಲಿ SKM ಸಭೆ : ರೈತರ ಆಂದೋಲನದ ಕುರಿತು ಮುಂದಿನ ಕ್ರಮ ಸಾಧ್ಯತೆ
ಇದೇ ವೇಳೆ ಮಾತನಾಡಿರುವ ದರ್ಶನ್ ಪಾಲ್ ಸಿಂಗ್, ರೈತರ ಮೇಲೆ ಕೇಂದ್ರ ಸರ್ಕಾರ ಹಾಕಿರುವ ಎಲ್ಲ ಪ್ರಕರಣ ಹಿಂಪಡೆದುಕೊಳ್ಳಬೇಕು. ಅಲ್ಲಿಯವರೆಗೆ ನಾವು ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆದುಕೊಳ್ಳಲ್ಲ ಎಂದಿದ್ದಾರೆ.