ಇಂದೋರ್: ಮಧ್ಯಪ್ರದೇಶದ ಇಂದೋರ್ ಮೂಲದ ಕೊರೊನಾ ವಾರಿಯರ್ ಒಬ್ಬರು ಆಕ್ಸಿಜನ್ ಇಲ್ಲದೆಯೂ ಸಹ ಹೇಗೆ ಪ್ರಾಣ ರಕ್ಷಿಸಿಕೊಳ್ಳಬಹುದು ಎಂಬುದನ್ನು ವಿಡಿಯೋ ಮಾಡಿ ತೋರಿಸಿಕೊಟ್ಟಿದ್ದಾರೆ.
ಕೊರೊನಾ ಸೋಂಕಿತರು ಈ ವಿಧಾನ ಅನುಸರಿಸುವ ಮೂಲಕ ಆಕ್ಸಿಜನ್ ಸಮಸ್ಯೆಯಿಂದ ಪಾರಾಗಬಹುದು ಅನ್ನೋದು ಇವರ ಅಭಿಮತ. ಇಂದೋರ್ ಮೂಲದ ರುಚಿ ಖಾಂಡೇಲ್ಕರ್ ಎಂಬ ಮಹಿಳೆ ತಮ್ಮದೇ ವಿಶಿಷ್ಟ ವಿಧಾನ ಅನುಸರಿಸುವ ಮೂಲಕ ಕೋವಿಡ್‌ನಿಂದ ಪ್ರಾಣ ರಕ್ಷಿಸಿಕೊಂಡರಂತೆ. ಮೊದಲಿಗೆ ಈ ವಿಡಿಯೋ ವೀಕ್ಷಿಸಿ..
ರುಚಿ ಖಂಡೇಲ್ವಾಲ್ ಕೋವಿಡ್ ಸೋಂಕು ತಗುಲಿದ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಶೇ. 85ರಷ್ಟು ಶ್ವಾಸಕೋಶ ತೊಂದರೆಯಿತ್ತಂತೆ. ಆದ್ರೂ ಸಹ ತಾನು ಆಕ್ಸಿಜನ್ ಪೈಪ್ ಇಲ್ಲದೆ ಉಸಿರಾಟದ ವ್ಯಾಯಾಮ ಮಾಡುವ ಮೂಲಕ ಬದುಕಿ ಬಂದೆ ಎಂದು ಅವರು ಹೇಳುತ್ತಾರೆ.
'ನಿಮಗೆ ಕೋವಿಡ್ ಸೋಂಕಿದೆ ಎಂದು ಯಾವತ್ತೂ ತಿಳಿಯಬೇಡಿ. ಕೊರೊನಾ ಇದೆ ಎಂದು ನೀವು ಭಾವಿಸಲೇ ಬೇಡಿ. ಈ ವಿಷಯದ ಬಗ್ಗೆ ಯಾರೊಂದಿಗೂ ಚರ್ಚಿಸುವುದೂ ಬೇಡಿ. ಈ ಬಗ್ಗೆ ನೀವು ಹೆಚ್ಚು ಚರ್ಚಿಸಿದ್ರೆ, ಅದು ನಿಮ್ಮನ್ನು ಮಾನಸಿಕ, ದೈಹಿಕವಾಗಿ ತಿಂದು ಹಾಕುತ್ತೆ' ಎಂದು ರುಚಿ ಹೇಳುತ್ತಾರೆ.
ಕೊರೊನಾ ವಿರುದ್ಧ ಈ ರೀತಿ ಹೋರಾಡಿ...
ನಾನು ಕಳೆದ ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಜೊತೆಗೆ Prone ventilation ಸಹ ಮಾಡುತ್ತಿದ್ದೇನೆ. ಇದೇನಿದು Prone ventilation ಅಂತೀರಾ?, ಹೌದು. ಎರಡು ದಿಂಬುಗಳನ್ನು ತೆಗೆದುಕೊಳ್ಳಿ, ಅದನ್ನು ಬೆಡ್ ಮೇಲಿಡಿ. ಬೆಡ್ ಮೇಲೆ ಉಲ್ಟಾ ಮಲಗಿ ದೀರ್ಘವಾಗಿ ಉಸಿರನ್ನೆಳೆದುಕೊಳ್ಳಿ. 10 ರಿಂದ 15 ಕ್ಕೂ ಹೆಚ್ಚು ಬಾರಿ ನೀವು ಈ ರೀತಿ ಮಾಡುವುದರಿಂದ ಉಸಿರಾಟದ ಸಮಸ್ಯೆ ಕಡಿಮೆಯಾಗುತ್ತೆ.
ಈ ವಿಧಾನದಿಂದ ಆಕ್ಸಿಜನ್ ಸಿಲಿಂಡರ್ಗಾಗಿ ನಾವು ಕಾಯಬೇಕಾಗಿಲ್ಲ. ಈಗ ದೇಶದೆಲ್ಲೆಡೆ ಆಕ್ಸಿಜನ್ ಕೊರತೆ ಉಂಟಾಗುತ್ತಿದೆ. ಇದರಿಂದ ನಿಮ್ಮನ್ನು ನೀವು ಕಾಪಾಡುವುದರ ಜೊತೆ ಕೊರೊನಾ ವಿರುದ್ಧ ಗೆಲ್ಲಬಹುದು ಎಂದು ಕೊರೊನಾ ವಾರಿಯರ್ ರುಚಿ ಖಂಡೇಲ್ವಾಲ್ ಸಲಹೆ ಕೊಡುತ್ತಾರೆ.
ಆರಂಭದಲ್ಲಿ ನನ್ನ ಆಕ್ಸಿಜನ್ ಲೆವಲ್ 78, 79 ಗಿಂತ ಕಡಿಮೆ ಆಗಿತ್ತು. ಆಗ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯೂ ಉಲ್ಬಣವಾಗಿತ್ತು. ನಾನು ಮಾಡುವ ಈ ವಿಧಾನದಿಂದ ನನ್ನ ಆಕ್ಸಿಜನ್ ಲೆವಲ್ ದಿನದಿಂದ ದಿನಕ್ಕೆ ಹೆಚ್ಚಾಯ್ತು. 85, 86 ಹೀಗೆ 93ರವರೆಗೂ ಆಕ್ಸಿಜನ್ ಲೆವೆಲ್ ಏರಿಸಿಕೊಂಡೆ. ಈ ಮೂಲಕ ಆರೋಗ್ಯ ಕಾಪಾಡಿಕೊಂಡಿದ್ದೇನೆ ಎಂದು ಅವರು ಹೇಳುತ್ತಾರೆ.