ETV Bharat / bharat

ಶಬರಿಮಲೆ ದೇವಸ್ಥಾನಕ್ಕೆ ತೆರಳಲು ಮಕ್ಕಳಿಗೆ ಆರ್​ಟಿ-ಪಿಸಿಆರ್​ ಕಡ್ಡಾಯವಲ್ಲ: ಕೇರಳ ಸರ್ಕಾರ - ಶಬರಿಮಲೆಗೆ ತೆರಳಲು ಮಕ್ಕಳಿಗೆ ಆರ್​​ಟಿಪಿಸಿಆರ್​

ವಿಶ್ವಪ್ರಸಿದ್ಧ ಶಬರಿಮಲೆ ದೇವಸ್ಥಾನಕ್ಕ ಭೇಟಿ ನೀಡುವ ಮಕ್ಕಳಿಗೆ ಆರ್​ಟಿಪಿಸಿಆರ್​ ಕಡ್ಡಾಯವಲ್ಲ ಎಂದು ಕೇರಳ ಸರ್ಕಾರ ಇದೀಗ ಹೊಸ ಅಧಿಸೂಚನೆ ಹೊರಡಿಸಿದೆ.

Sabarimala pilgrimage
Sabarimala pilgrimage
author img

By

Published : Nov 27, 2021, 7:23 PM IST

ತಿರುವನಂತಪುರಂ(ಕೇರಳ): ಮಹಾಮಾರಿ ಕೊರೊನಾ ವೈರಸ್​​ ಹಾವಳಿ ಕಡಿಮೆಯಾಗಿರುವ ಕಾರಣ ಈಗಾಗಲೇ ಭಕ್ತರ ದರ್ಶನಕ್ಕಾಗಿ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಓಪನ್​​ ಆಗಿದೆ. ಇಲ್ಲಿಗೆ ಭೇಟಿ ನೀಡುವ ಭಕ್ತರಿಗೆ ಆರ್​​ಟಿ-ಪಿಸಿಆರ್​ ಹಾಗೂ ಕೋವಿಡ್​ನ ಎರಡು ಡೋಸ್ ಲಸಿಕೆ ಪಡೆದಿರುವುದು ಕಡ್ಡಾಯಗೊಳಿಸಲಾಗಿದೆ. ಆದರೆ ಇದೀಗ ಮಕ್ಕಳಿಗೆ ವಿನಾಯಿತಿ ನೀಡಿ ಕೇರಳ ಸರ್ಕಾರ ಮಹತ್ವದ ನಿರ್ಧಾರ ಪ್ರಕಟಿಸಿದೆ.

ಶಬರಿಮಲೆಯಲ್ಲಿ ನವೆಂಬರ್​​ 16ರಿಂದ ವಾರ್ಷಿಕ ಜಾತ್ರೆ ಆರಂಭಗೊಂಡಿದ್ದು, ಪ್ರತಿದಿನ ಸಾವಿರಾರು ಭಕ್ತರು ಅಯ್ಯಪ್ಪ ಸ್ವಾಮಿ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ಪೋಷಕರೊಂದಿಗೆ ಇಲ್ಲಿಗೆ ಬರುವ ಮಕ್ಕಳಿಗೆ ಇದೀಗ ಆರ್​​ಟಿ-ಪಿಸಿಆರ್ ಕಡ್ಡಾಯವಾಗಿಲ್ಲ ಎಂದು ಕೇರಳ ಸರ್ಕಾರ ತಿಳಿಸಿದೆ. ಆದರೆ ಮಕ್ಕಳು ಕಡ್ಡಾಯವಾಗಿ ಸೋಪ್, ಸ್ಯಾನಿಟೈಸ್ ಹಾಗೂ ಮಾಸ್ಕ್​​ ಧರಿಸುವುದು ಕಡ್ಡಾಯ ಎಂದಿದೆ.

ಇದನ್ನೂ ಓದಿರಿ: ಮಹಾರಾಷ್ಟ್ರದಲ್ಲಿ 'ಓಮಿಕ್ರೋನ್​​' ಭಯ: ದೇಶಿ ಪ್ರಯಾಣಿಕರಿಗೆ RT-PCR ಪರೀಕ್ಷೆ, ಎರಡು ಡೋಸ್​ ಲಸಿಕೆ ಕಡ್ಡಾಯ

ಆದರೆ ವಯಸ್ಕ ಭಕ್ತಾಧಿಗಳಿಗೆ ಎರಡು ಡೋಸ್ ಕೋವಿಡ್ ಲಸಿಕೆ ಅಥವಾ 72 ಗಂಟೆಯೊಳಗೆ ಮಾಡಿಸಿರುವ ಕೋವಿಡ್​ನ ಆರ್​​ಟಿ-ಪಿಸಿಆರ್​​ ವರದಿ ಕಡ್ಡಾಯ ಎಂದಿದೆ. ಮಕ್ಕಳೊಂದಿಗೆ ಇರುವ ಪೋಷಕರು ಸಾಮಾಜಿಕ ಅಂತರ, ಸ್ಯಾನಿಟೈಸ್ ಬಳಕೆ ಸೇರಿದಂತೆ ಕೋವಿಡ್​ ಮಾರ್ಗಸೂಚಿ ಪಾಲಿಸುವುದು ಕಡ್ಡಾಯಗೊಳಿಸಿದೆ. ಇಲ್ಲಿಗೆ ಭೇಟಿ ನೀಡುವ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಅದಕ್ಕೆ ಪೋಷಕರು ಕಾರಣವಾಗಿರುತ್ತಾರೆಂದು ತಿಳಿಸಲಾಗಿದೆ.

ನವೆಂಬರ್​ 16ರಿಂದ ಆರಂಭಗೊಂಡಿರುವ ವಾರ್ಷಿಕ ಜಾತ್ರೆ ಎರಡು ತಿಂಗಳ ಕಾಲ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಆನ್​ಲೈನ್​ ಮೂಲಕ ಟಿಕೆಟ್​​ ಪಡೆದುಕೊಂಡು ದೇವರ ದರ್ಶನ ಮಾಡಬಹುದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.