ETV Bharat / bharat

ಪೆಟ್ರೋಲ್​ ಬಂಕ್​ ಮಾಲೀಕನಿಗೆ 15 ಬಾರಿ ಇರಿದು ಕೊಂದು, ಹಣ ದರೋಡೆ; ಅರ್ಧಗಂಟೆಯಲ್ಲಿ ಆರೋಪಿಗಳು ಸೆರೆ

ಪೆಟ್ರೋಲ್​ ಬಂಕ್​ ಮಾಲೀಕನಿಗೆ ಚೂರಿಯಿಂದ ಇರಿದು ಹತ್ಯೆ ಮಾಡಿ ಬಳಿಕ ಬಂಕ್​ನಲ್ಲಿದ್ದ ಸುಮಾರು 1.34 ಲಕ್ಷ ರೂಪಾಯಿ ದೋಚಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

robbers-kill-petrol-pump-owner-in-nagpur-district-arrested-within-30-minutes-after-chase
ಪೆಟ್ರೋಲ್​ ಬಂಕ್​ ಮಾಲೀಕನಿಗೆ ಚೂರಿ ಇರಿದು ಹತ್ಯೆ ಮಾಡಿ ದರೋಡೆ
author img

By

Published : May 18, 2023, 8:07 AM IST

ನಾಗ್ಪುರ (ಮಹಾರಾಷ್ಟ್ರ) : ಮೂವರು ದರೋಡೆಕೋರರು ಪೆಟ್ರೋಲ್ ಬಂಕ್​ ಮಾಲೀಕನನ್ನು ಚೂರಿ ಇರಿದು ಕೊಂದು ಹಣ ಎಗರಿಸಿ ಪರಾರಿಯಾಗಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಬುಧವಾರ ನಡೆದಿದೆ. ಘಟನೆ ನಡೆದ ಕೇವಲ 30 ನಿಮಿಷಗಳಲ್ಲೇ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ನಾಗ್ಪುರದ ಭಿವಾಪುರದಲ್ಲಿರುವ ಪೆಟ್ರೋಲ್​ ಬಂಕ್​ನಲ್ಲಿ ಘಟನೆ ನಡೆದಿದೆ. ಪೆಟ್ರೋಲ್​ ಬಂಕ್​ ಮಾಲೀಕ ಮತ್ತು ಸಿಬ್ಬಂದಿಯೋರ್ವ ಸಂಗ್ರಹವಾದ ಹಣ ಎಣಿಕೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಮೂವರು ದರೋಡೆಕೋರರು ಚಾಕುವಿನಿಂದ ಪೆಟ್ರೋಲ್​ ಬಂಕ್​ ಮಾಲೀಕ ಮತ್ತು ಸಿಬ್ಬಂದಿಗೆ ಇರಿದಿದ್ದಾರೆ. ಆರೋಪಿಗಳು ಮಾಲೀಕರಿಗೆ ಸುಮಾರು 15 ಬಾರಿ ಇರಿದಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟರು. ಸಿಬ್ಬಂದಿಗೂ ಗಾಯವಾಗಿದೆ ಎಂದು ತಿಳಿಸಿದ್ದಾರೆ.

ಆರೋಪಿಗಳು ಪೆಟ್ರೋಲ್​ ಬಂಕ್​ನಲ್ಲಿದ್ದ ಸುಮಾರು 1.34 ಲಕ್ಷ ರೂಪಾಯಿಯೊಂದಿಗೆ ಪರಾರಿಯಾಗಿದ್ದಾರೆ. ಘಟನೆ ತಿಳಿದು ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ಬೆನ್ನಟ್ಟಿ ಉಮ್ರೇಡ್​​ ಎಂಬಲ್ಲಿ ಸೆರೆ ಹಿಡಿದಿದ್ದಾರೆ. ಕೊಲೆ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ಮುಂದುವರೆದಿದೆ.

ಇದನ್ನೂ ಓದಿ : ರಜೆ ಅರ್ಜಿ ಸಲ್ಲಿಸಿ ಶಾಲೆಯಿಂದ ಬರುತ್ತಿದ್ದ ವಿದ್ಯಾರ್ಥಿ ಮೇಲೆ ಹರಿದ ಟಿಪ್ಪರ್.. ಬಾಲಕ ಸ್ಥಳದಲ್ಲೇ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.