ಖಂಡವಾ (ಮಧ್ಯಪ್ರದೇಶ): ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಯೋರ್ವಳು ವಾಂತಿ ಮಾಡಲೆಂದು ಕಿಟಕಿಯಿಂದ ತಲೆ ಹೊರಹಾಕಿದ್ದು, ಆಕೆಯ ಪ್ರಾಣಕ್ಕೆ ಎರವಾಗಿದೆ. ಟ್ರಕ್ವೊಂದು ತಲೆಗೆ ಬಡಿದು ರುಂಡ, ಮುಂಡ ಬೇರೆ ಬೇರೆಯಾಗಿದೆ.
![bus window in khandwa](https://etvbharatimages.akamaized.net/etvbharat/prod-images/11224845_twdfdfdfdf.jpg)
ಕುಟುಂಬದೊಂದಿಗೆ ಸೇರಿ ಬಸ್ನಲ್ಲಿ ಕುಳಿತುಕೊಂಡಿದ್ದ ಬಾಲಕಿ ಇಂದೋರ್ಗೆ ಪ್ರಯಾಣ ಬೆಳೆಸಿದ್ದಳು. ಖಂಡವಾದಿಂದ 20 ಕಿಲೋ ಮೀಟರ್ ದೂರು ಪ್ರಯಾಣಿಸಿದ ವೇಳೆ ಆಕೆಗೆ ವಾಂತಿ ಬಂದಿದ್ದು, ಈ ವೇಳೆ ಬಸ್ ಕಿಟಕಿಯಿಂದ ತಲೆ ಹೊರಹಾಕಿದ್ದಾಳೆ. ಈ ವೇಳೆ ಎದುರುಗಡೆಯಿಂದ ಬರುತ್ತಿದ್ದ ಟ್ರಕ್ ಆಕೆಯ ತಲೆಗೆ ಜೋರಾಗಿ ಹೊಡೆದಿರುವ ಕಾರಣ ತಲೆ ಕತ್ತರಿಸಿ ರುಂಡ, ಮುಂಡ ಬೇರೆ ಬೇರೆಯಾಗಿವೆ.
ಇದನ್ನೂ ಓದಿ: ಕೃಷಿ ಕಾಯ್ದೆಗಳ ಪರಿಶೀಲನೆ: ಸುಪ್ರೀಂಕೋರ್ಟ್ ರಚಿತ ಸಮಿತಿಯಿಂದ ವರದಿ ಸಲ್ಲಿಕೆ
ಘಟನೆ ನಡೆಯುತ್ತಿದ್ದಂತೆ ಟ್ರಕ್ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕಾಗಮಿಸಿದ ಪೊಲೀಸರು ಮೃತ ಬಾಲಕಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.