ಚಮೋಲಿ (ಉತ್ತರಾಖಂಡ): ಚಮೋಲಿಯ ರಿಷಿಗಂಗಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ರಕ್ಷಣಾ ಪಡೆಗಳು ತಾತ್ಕಾಲಿಕವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿವೆ.
ಸುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಲಾಗಿದ್ದು, ಭಯಭೀತರಾಗದಿರಲು ಮನವಿ ಮಾಡಲಾಗಿದೆ ಎಂದು ಚಮೋಲಿ ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವುದರಿಂದ ಜೋಶಿಮಠದ ತಪೋವನ ಸುರಂಗದಿಂದ ಯಂತ್ರಗಳು, ಉಪಕರಣಗಳೊಂದಿಗೆ ರಕ್ಷಣಾ ಸಿಬ್ಬಂದಿ ನಿರ್ಗಮಿಸುತ್ತಿದ್ದಾರೆ.
ಇದನ್ನೂ ಓದಿ: ಚಮೋಲಿ ಹಿಮ ದುರಂತ: ಮೃತರ ಸಂಖ್ಯೆ 35ಕ್ಕೆ ಏರಿಕೆ.. ಸುರಂಗದಲ್ಲಿ ಡ್ರಿಲ್ಲಿಂಗ್ ಆಪರೇಶನ್
ಫೆಬ್ರವರಿ 7ರಂದು ಉತ್ತರಾಖಂಡದ ಚಮೋಲಿಯಲ್ಲಿ ಹಿಮಸ್ಫೋಟಿಸಿ ಉಂಟಾದ ಪ್ರವಾಹದಲ್ಲಿ ಈವರೆಗೆ 35 ಮಂದಿ ಮೃತಪಟ್ಟಿದ್ದು, 204 ಮಂದಿ ನಾಪತ್ತೆಯಾಗಿದ್ದಾರೆ. ಕಳೆದ ಐದು ದಿನಗಳಿಂದ ಸುರಂಗ ಸೇರಿದಂತೆ ಹಿಮಪ್ರವಾಹ ಪೀಡಿತ ಪ್ರದೇಶದಲ್ಲಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿತ್ತು.