ಮುಂಬೈ: ಟಿಲಿಕಾಂ ಇಂಡಸ್ಟ್ರಿಯಲ್ಲಿ ಹೊಸ ಛಾಪು ಮೂಡಿಸಿರುವ ರಿಲಯನ್ಸ್ ಜಿಯೋ ಇದೀಗ ಗ್ರಾಹಕರಿಗೆ ಮತ್ತೊಂದು ಹೊಸ ಯೋಜನೆ ಘೋಷಣೆ ಮಾಡಿದ್ದು, ಬಳಕೆದಾರರಿಗೆ ಅನ್ಲಿಮಿಟೆಡ್ ಸೌಲಭ್ಯ ಲಭ್ಯವಾಗಲಿದೆ.
ಹೊಸ ಗ್ರಾಹಕರು ಜಿಯೋ ಫೋನ್ ಡಿವೈಸ್ ಜೊತೆಗೆ ಅನ್ಲಿಮಿಟೆಡ್ ವಾಯ್ಸ್ ಕಾಲ್ ಹಾಗೂ ಡೇಟಾ(ಪ್ರತಿ ತಿಂಗಳು 2 ಜಿಬಿ ಇಂಟರ್ನೆಟ್) ಲಭ್ಯವಾಗಲಿದೆ. ಇದಕ್ಕಾಗಿ ಎರಡು ವರ್ಷಕ್ಕಾಗಿ ಗ್ರಾಹಕರು 1,999 ರೂ. ವ್ಯಯ ಮಾಡಬೇಕಾಗುತ್ತದೆ.
ಇದನ್ನೂ ಓದಿ: ಮೋದಿ - ಶಾ ಅನುಕೂಲಕ್ಕೆ ತಕ್ಕಂತೆ ಪ. ಬಂಗಾಳದಲ್ಲಿ ಚುನಾವಣೆ: ಮಮತಾ ವಾಗ್ದಾಳಿ
ಇಂದೇ ಈ ಯೋಜನೆ ಘೋಷಣೆ ಮಾಡಲಾಗಿದ್ದು, ಅದಕ್ಕಾಗಿ '2ಜಿ ಮುಕ್ತ ಭಾರತ' ಎಂದು ಹೆಸರಿಡಲಾಗಿದೆ. ರಿಲಯನ್ಸ್ ಜಿಯೋ ಡೈರೆಕ್ಟರ್ ಆಕಾಶ್ ಅಂಬಾನಿ ಇದರ ಬಗ್ಗೆ ಮಾಹಿತಿ ನೀಡಿದ್ದು, ದೇಶದಲ್ಲಿ ಈಗಲೂ 300 ಮಿಲಿಯನ್ ಬಳಕೆದಾರರು 2ಜಿ ಇಂಟರ್ನೆಟ್ ಬಳಕೆ ಮಾಡ್ತಿದ್ದು, ಹಲವು ತೊಂದರೆ ಅನುಭವಿಸುತ್ತಿದ್ದಾರೆ. ಅದಕ್ಕಾಗಿ ಈ ಹೊಸ ಯೋಜನೆ ಘೋಷಣೆ ಮಾಡಲಾಗಿದೆ ಎಂದಿದ್ದಾರೆ.
ಹೊಸ ಯೋಜನೆ ಪ್ರಕಾರ ಗ್ರಾಹಕರು ಹೊಸ ಮೊಬೈಲ್ ಫೋನ್ ಪಡೆದುಕೊಳ್ಳಲಿದ್ದು, ಅದಕ್ಕಾಗಿ 1,999 ರೂ. ನೀಡಿದ್ರೆ ಸಾಕು. ಮುಂದಿನ 2 ವರ್ಷಗಳ ಕಾಲ ಯಾವುದೇ ಹಣ ಸಂದಾಯ ಮಾಡಬೇಕಾಗಿಲ್ಲ ಎಂದಿದ್ದಾರೆ.