ಅಹಮದಾಬಾದ್: ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಅಹಮದಾಬಾದ್ನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಂದರ್ಭದಲ್ಲಿ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯುದ್ಧವೀರ್ ಸಿಂಗ್ ಮತ್ತು ಇತರ 8 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸುದ್ದಿಗೋಷ್ಠಿಯನ್ನು ನಡೆಸಲು ಅನುಮತಿ ಪಡೆಯದ ಕಾರಣ ಅವರನ್ನು ಬಂಧಿಸಲಾಗಿದೆ ಎನ್ನಲಾಗಿದ್ದು, ಪೊಲೀಸರ ಕ್ರಮವನ್ನು ಭಾರತೀಯ ಕಿಸಾನ್ ಯೂನಿಯನ್‌ನ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಖಂಡಿಸಿದ್ದಾರೆ.
ಇದನ್ನೂ ಓದಿ: ಸ್ಟೋಕ್ಸ್, ಬೇರ್ಸ್ಟೋ ಸ್ಫೋಟಕ ಬ್ಯಾಟಿಂಗ್, ಟೀಂ ಇಂಡಿಯಾ ವಿರುದ್ಧ ಇಂಗ್ಲೆಂಡ್ಗೆ ಗೆಲುವು
ಈ ಕುರಿತು ವಿಡಿಯೋವೊಂದನ್ನು ಟಿಕಾಯತ್ ಹರಿಬಿಟ್ಟಿದ್ದು, ಗುಜರಾತ್ ರಾಜ್ಯವು ಈವರೆಗೆ ಸ್ವತಂತ್ರವಾಗಿಲ್ಲ. ಗುಜರಾತ್‌ಗೆ ಸ್ವಾತಂತ್ರ್ಯ ಸಿಗಬೇಕಿದೆ. ಈಗ ಸಂಯುಕ್ತ ಕಿಸಾನ್ ಮೋರ್ಚಾ ಗುಜರಾತ್‌ನಲ್ಲೂ ತನ್ನ ಪ್ರತಿಭಟನೆಯನ್ನು ತೀವ್ರಗೊಳಿಸಲಿದೆ ಮತ್ತು ರೈತರ ಧ್ವನಿಯನ್ನು ಹೆಚ್ಚಿಸಲಾಗುವುದು ಎಂದಿದ್ದಾರೆ.
ಇದರ ಜೊತೆಗೆ ಬಂಧಿತರನ್ನು ಶೀಘ್ರದಲ್ಲೇ ಪೊಲೀಸ್ ಕಸ್ಟಡಿಯಿಂದ ಬಿಡುಗಡೆ ಮಾಡದಿದ್ದರೆ, ದೆಹಲಿ ಮೀರತ್ ಎಕ್ಸ್‌ಪ್ರೆಸ್ ವೇ ಅನ್ನು ನಿರ್ಬಂಧಿಸಲಾಗುವುದು ಎಂದು ವಿಡಿಯೋದಲ್ಲಿ ಟಿಕಾಯತ್ ಹೇಳಿದ್ದಾರೆ.