ETV Bharat / bharat

Interview: ಕಾಂಗ್ರೆಸ್‌ನಲ್ಲಿ ನಾಯಕತ್ವದ ಕೊರತೆ ಇದೆ; ಸಂಸದ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌

author img

By

Published : Jun 15, 2021, 7:47 PM IST

Updated : Jun 15, 2021, 8:55 PM IST

ಕೆಲ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಮಾದರಿಯಲ್ಲೇ ನಮ್ಮದೆ ಆದ ವ್ಯಾಕ್ಸಿನ್​ಗಳನ್ನು ಸಂಶೋಧನೆ ಮಾಡಿ ಅಭಿವೃದ್ಧಿಪಡಿಸಲಾಯಿತು. ಇತರ ರಾಷ್ಟ್ರಗಳಿಗೆ ಹೋಲಿಸಿಕೊಂಡರೆ ಭಾರತದಲ್ಲಿ ಕೋವಿಡ್‌ನಿಂದಾದ ಮರಣ ಪ್ರಮಾಣ ಅತಿ ಕಡಿಮೆ ಇದೆ ಎಂದು ಬಿಜೆಪಿ ಸಂಸದ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಹೇಳಿದ್ದಾರೆ. ಈಟಿವಿ ಭಾರತಕ್ಕೆ ಸಿಂಗ್‌ ನೀಡಿದ ಸಂದರ್ಶನದಲ್ಲಿ ಕೋವಿಡ್‌ ಸಂಬಂಧ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

Congress lacks leadership; needs serious introspection, says Rathore
ಸಂದರ್ಶನ: ಕಾಂಗ್ರೆಸ್‌ನಲ್ಲಿ ನಾಯಕತ್ವದ ಕೊರತೆ ಇದೆ; ಸಂಸದ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌

ಹೈದಾರಾಬಾದ್‌: ಮಹಾಮಾರಿ ಕೋವಿಡ್‌ ವಿರುದ್ಧದ ಹೋರಾಟವನ್ನು ವಿಶ್ವದ ಇತರ ದೇಶಗಳಿಗಿಂತ ಭಾರತ ಉತ್ತಮವಾಗಿ ನಿಭಾಯಿಸಿದೆ ಎಂದು ಬಿಜೆಪಿ ಸಂಸದ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಹೇಳಿದ್ದಾರೆ. ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ಕೊರೊನಾ ನಿರ್ವಹಣೆ ಸೇರಿದಂತೆ ದೇಶದಲ್ಲಿನ ಹಲವು ಬೆಳವಣಿಗೆಗಳು ಹಾಗೂ ಅಭಿವೃದ್ಧಿ ಬಗ್ಗೆ ಸಿಂಗ್‌ ಮಾತನಾಡಿದ್ದಾರೆ.

Interview: ಕಾಂಗ್ರೆಸ್‌ನಲ್ಲಿ ನಾಯಕತ್ವದ ಕೊರತೆ ಇದೆ; ಸಂಸದ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌

ಕೋವಿಡ್‌ನ ಮೊದಲ ಅಲೆಯ ಅನುಭವ ಪಡೆದ ಸರ್ಕಾರ, ದೊಡ್ಡ ಪ್ರಮಾಣದಲ್ಲಿ ವೆಂಟಿಲೇಟರ್‌ಗಳನ್ನು ಉತ್ಪಾದನೆ ಮಾಡಿತು. ಮಾತ್ರವಲ್ಲದೇ, ಔಷಧ, ಜೀವ ರಕ್ಷಕ ಉತ್ಪನ್ನಗಳ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಲಾಯಿತು ಎಂದು ಹೇಳಿದ್ದಾರೆ.

ಕೆಲ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಮಾದರಿಯಲ್ಲಿ ನಮ್ಮದೇ ಆದ ವ್ಯಾಕ್ಸಿನಗಳನ್ನು ಅಭಿವೃದ್ಧಿಪಡಿಸಲಾಯಿತು. ಇತರ ರಾಷ್ಟ್ರಗಳಿಗೆ ಹೋಲಿಸಿಕೊಂಡರೆ ಭಾರತದಲ್ಲಿ ಕೋವಿಡ್‌ನಿಂದಾದ ಮರಣ ಪ್ರಮಾಣ ಅತಿ ಕಡಿಮೆ ಇದೆ. ಸರಿಯಾದ ಸಮಯಕ್ಕೆ ಲಸಿಕೆ ಅಭಿವೃದ್ಧಿ ಪಡಿಸಿದ ಪರಿಣಾಮ ಇಂದು ವ್ಯಾಕ್ಸಿನ್‌ ವಿಚಾರದಲ್ಲಿ ಸ್ವಾಲಂಬಿಗಳಾಗಿದ್ದೇವೆ. 80 ರಾಷ್ಟ್ರಗಳಿಗೆ ಭಾರತದ ಲಸಿಕೆಯನ್ನು ರಪ್ತು ಮಾಡಲಾಯಿತು.

ಇದರಿಂದಾಗಿ ಕೆಲ ದೇಶಗಳಿಂದ ಲಸಿಕೆ ನೀಡುವ ಒಪ್ಪಂದ ಮಾಡಿಕೊಂಡು ಅಲ್ಲಿಂದ ವ್ಯಾಕ್ಸಿನ್‌ಗೆ ಬೇಕಾಗಿದ್ದ ಅತಿ ಮುಖ್ಯವಾದ ಕಚ್ಚಾವಸ್ತುಗಳನ್ನು ಆಮದು ಮಾಡಿಕೊಂಡಿರುವುದಾಗಿ ರಾಜ್ಯವರ್ಧನ್‌ ಸಿಂಗ್‌ ಮಾಹಿತಿ ನೀಡಿದರು.

ಇದನ್ನೂ ಓದಿ: ಇನ್ಮುಂದೆ ಚಿನ್ನ ಮಾರಾಟಕ್ಕೆ ಹಾಲ್​ಮಾರ್ಕ್​ ಕಡ್ಡಾಯ!

ಇದೇ ವೇಳೆ, ರಾಜಸ್ಥಾನದಲ್ಲಿ ಕೋವಿಡ್‌ ನಿರ್ವಹಣೆ ಹಾಗೂ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಮಾತನಾಡಿದ ಸಿಂಗ್, ರಾಜ್ಯದಲ್ಲಿ ಕೋವಿಡ್‌ ನಿಯಂತ್ರಿಸುವಲ್ಲಿ ಸಿಎಂ ಅಶೋಕ್‌ ಗೆಹ್ಲೋಟ್‌ ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. 2ನೇ ಅಲೆಯ ಬಗ್ಗೆ ಕೇಂದ್ರ ಸರ್ಕಾರ ಹಲವು ಎಚ್ಚರಿಕೆಗಳನ್ನು ನೀಡಿದ್ರೂ ಗೆಹ್ಲೋಟ್‌ ಸರ್ಕಾರ ಇದನ್ನು ನಿರ್ಲಕ್ಷಿಸಿತು, ಅಧಿಕಾರಕ್ಕಾಗಿ ರಾಜಕೀಯ ಬಿಕ್ಕಟ್ಟು ಮುಂದುವರಿಸಿದರು. ಕಾಂಗ್ರೆಸ್‌ನಲ್ಲಿ ನಾಯಕತ್ವದ ಕೊರತೆ ಇದೆ ಎಂದು ದೂರಿದ್ದಾರೆ.

ಎರಡನೇ ಅಲೆ ಬರುವುದಕ್ಕೂ ಮುನ್ನ ರಾಜಸ್ಥಾನದಲ್ಲಿ 4 ಆಕ್ಸಿಜನ್‌ ಘಟಕಗಳನ್ನು ಸ್ಥಾಪಿಸಲು ಪ್ರಧಾನಿ ಮೋದಿ ಅವರು ಪಿಎಂ ಕೇರ್ಸ್ ಫಂಡ್‌ನಿಂದ ಆರ್ಥಿಕ ನೆರವು ನೀಡಿದ್ದರು. ಆದರೆ ರಾಜ್ಯ ಸರ್ಕಾರ ಮಾತ್ರ ಆರೋಪ ಮಾಡುವುದನ್ನು ಬಿಟ್ಟು ಬೇರೇನು ಮಾಡಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

Last Updated : Jun 15, 2021, 8:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.