ETV Bharat / bharat

108 ಸೇನಾ ವಸ್ತುಗಳ ಆಮದಿನ ಮೇಲೆ ನಿರ್ಬಂಧ : ಭಾರತದಲ್ಲೇ ತಯಾರಾಗಲಿವೆ ಶಸ್ತ್ರಾಸ್ತ್ರಗಳು

author img

By

Published : May 31, 2021, 8:29 PM IST

ಕಳೆದ ವರ್ಷ 101 ವಸ್ತುಗಳನ್ನು ಒಳಗೊಂಡ ರಕ್ಷಣಾ ಆಮದಿನ ಮೇಲೆ ನಿರ್ಬಂಧ ಹೇರಲಾಗಿತ್ತು.ಈಗ 108 ಸೇನಾ ವಸ್ತುಗಳ ಮೇಲೆ ನಿರ್ಬಂಧ ಹೇರಲಾಗಿದೆ.

rajnath-singh-approves-expansion-of-negative-list-for-defence-imports

ನವದೆಹಲಿ : ದೇಶೀಯ ರಕ್ಷಣಾ ಉದ್ಯಮವನ್ನು ಉತ್ತೇಜಿಸುವ ಪ್ರಮುಖ ಪ್ರಯತ್ನದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಶಸ್ತ್ರಾಸ್ತ್ರಗಳು ಮತ್ತು ಮುಂದಿನ ಪೀಳಿಗೆಯ ಕಾರ್ವೆಟ್​ಗಳು​​​, ವಾಯುಗಾಮಿ ಮುಂಚಿನ ಎಚ್ಚರಿಕೆ ವ್ಯವಸ್ಥೆಗಳು, ಟ್ಯಾಂಕ್ ಎಂಜಿನ್​ಗಳು ಮತ್ತು ರಾಡಾರ್‌ಗಳಂತಹ ವ್ಯವಸ್ಥೆಗಳ 108 ಸೇನಾ ವಸ್ತುಗಳ ಆಮದಿನ ಮೇಲೆ ನಿರ್ಬಂಧಗಳನ್ನು ವಿಧಿಸಲು ಅನುಮೋದನೆ ನೀಡಲಾಗಿದೆ.

ಕಳೆದ ವರ್ಷ 101 ವಸ್ತುಗಳನ್ನು ಒಳಗೊಂಡ ರಕ್ಷಣಾ ಆಮದಿನ ಮೇಲೆ ನಿರ್ಬಂಧ ಹೇರಲಾಗಿತ್ತು. ಈಗ 108 ಸೇನಾ ವಸ್ತುಗಳ ಮೇಲೆ ನಿರ್ಬಂಧ ಹೇರಲಾಗಿದೆ.

ಎರಡನೇ ಪಟ್ಟಿಯಲ್ಲಿ ಕಾಣಿಸಿಕೊಂಡ 108 ವಸ್ತುಗಳನ್ನು ಆಮದು ಮಾಡಿಕೊಳ್ಳುವ ನಿರ್ಬಂಧಗಳು ಡಿಸೆಂಬರ್ 2021 ರಿಂದ 2025 ರ ಡಿಸೆಂಬರ್ ಅವಧಿಯಲ್ಲಿ ಕ್ರಮೇಣ ಜಾರಿಗೆ ಬರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ರಕ್ಷಣಾ ಉತ್ಪಾದನಾ ಉದ್ಯಮ ಸಂಸ್ಥೆಗಳೊಂದಿಗೆ ಹಲವಾರು ಸುತ್ತಿನ ಸಮಾಲೋಚನೆಯ ನಂತರ ಎರಡನೇ ಪಟ್ಟಿಯನ್ನು ರಕ್ಷಣಾ ಸಚಿವಾಲಯ ಸಿದ್ಧಪಡಿಸಿದೆ ಎಂದು ಅವರು ಹೇಳಿದ್ದಾರೆ.

ರಕ್ಷಣಾ ಆಮದಿನ ಮೊದಲ ಋಣಾತ್ಮಕ ಪಟ್ಟಿಯಲ್ಲಿ ಟವ್ಡ್ ಫಿರಂಗಿ ಬಂದೂಕುಗಳು, ಅಲ್ಪ-ಶ್ರೇಣಿಯ ಮೇಲ್ಮೈಯಿಂದ ಗಾಳಿಗೆ ಕ್ಷಿಪಣಿಗಳು, ಕ್ರೂಸ್ ಕ್ಷಿಪಣಿಗಳು, ಕಡಲಾಚೆಯ ಗಸ್ತು ಹಡಗುಗಳು, ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಗಳು, ಮುಂದಿನ ಪೀಳಿಗೆಯ ಕ್ಷಿಪಣಿ ಹಡಗುಗಳು, ತೇಲುವ ಡಾಕ್ ಮತ್ತು ಜಲಾಂತರ್ಗಾಮಿ ವಿರೋಧಿ ರಾಕೆಟ್ ಲಾಂಚರ್‌ಗಳು ಸೇರಿವೆ.

ಪ್ರಧಾನಿ ನರೇಂದ್ರ ಮೋದಿಯವರ 'ಆತ್ಮನಿರ್ಭರ ಭಾರತ' ಪ್ರಯತ್ನದ ಅನುಸಾರವಾಗಿ ಮತ್ತು ರಕ್ಷಣಾ ಕ್ಷೇತ್ರದಲ್ಲಿ ದೇಶೀಕರಣವನ್ನು ಹೆಚ್ಚಿಸುವ ಸಲುವಾಗಿ, 108 ವಸ್ತುಗಳ ಎರಡನೇ ಸಕಾರಾತ್ಮಕ ಪಟ್ಟಿಯನ್ನು ಸಿದ್ಧಪಡಿಸಿದ್ದು, ಆಮದಿನ ಮೇಲೆ ನಿರ್ಬಂಧ ವಿಧಿಸಲಾಗಿದೆ. ಹಾಗೆ ಮಿಲಿಟರಿ ವ್ಯವಹಾರಗಳ ಇಲಾಖೆಯ ಪ್ರಸ್ತಾವನೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅನುಮೋದಿಸಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಇದು ಸ್ವಾವಲಂಬನೆ ಸಾಧಿಸುವ ಮತ್ತು ರಕ್ಷಣಾ ರಫ್ತುಗಳನ್ನು ಉತ್ತೇಜಿಸುವ ಅವಳಿ ಉದ್ದೇಶಗಳನ್ನು ಪೂರೈಸಲು ಸಾರ್ವಜನಿಕ ಮತ್ತು ಖಾಸಗಿ ವಲಯದ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ದೇಶೀಕರಣಕ್ಕೆ ಮತ್ತಷ್ಟು ಉತ್ತೇಜನ ನೀಡುತ್ತದೆ ಎಂದು ಸಚಿವಾಲಯ ಹೇಳಿದೆ.

ರಕ್ಷಣಾ ಸ್ವಾಧೀನ ಪ್ರಕ್ರಿಯೆ (ಡಿಎಪಿ) 2020 ರ ನಿಬಂಧನೆಗಳ ಪ್ರಕಾರ ಎಲ್ಲಾ ಈ 108 ವಸ್ತುಗಳನ್ನು ಈಗ ಸ್ಥಳೀಯ ಮೂಲಗಳಿಂದಲೇ ಸಂಗ್ರಹಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ. ಕಳೆದ ಒಂದೆರಡು ವರ್ಷಗಳಲ್ಲಿ, ದೇಶೀಯ ರಕ್ಷಣಾ ಉದ್ಯಮವನ್ನು ಹೆಚ್ಚಿಸಲು ಸರ್ಕಾರ ಸರಣಿ ಕ್ರಮಗಳನ್ನು ಕೈಗೊಂಡಿದೆ.

ರಕ್ಷಣಾ ಸಚಿವಾಲಯದ ಹೊಸ ರಕ್ಷಣಾ ಖರೀದಿ ನೀತಿಯು 2025 ರ ವೇಳೆಗೆ ರಕ್ಷಣಾ ಉತ್ಪಾದನೆಯಲ್ಲಿ 1.75 ಲಕ್ಷ ಕೋಟಿ ರೂ. (25 ಬಿಲಿಯನ್ ಡಾಲರ್) ವಹಿವಾಟು ನಡೆಸಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.