ಜೈಪುರ(ರಾಜಸ್ಥಾನ): ಅನಾದಿ ಕಾಲದಿಂದಲೂ ಮನುಷ್ಯ-ಪ್ರಾಣಿಗಳ ನಡುವೆ ಪ್ರೀತಿ, ಅನ್ಯೋನ್ಯತೆ ಇದೆ. ಇದಕ್ಕೆ ಪೂರಕವೆಂಬಂತೆ ಮಹಿಳೆಯೋರ್ವಳು ಚಿರತೆಗೆ ರಾಖಿ ಕಟ್ಟುತ್ತಿರುವ ಅಪರೂಪದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಿದೆ. ಇದು ರಾಜಸ್ಥಾನದಲ್ಲಿ ನಡೆದಿರುವ ಘಟನೆಯಂತೆ. ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ತಮ್ಮ ಟ್ವಿಟರ್ ಖಾತೆಯಲ್ಲಿ ಇದನ್ನು ಶೇರ್ ಮಾಡಿದ್ದಾರೆ.
ಅನಾರೋಗ್ಯ ಸ್ಥಿತಿಯಲ್ಲಿ ಗ್ರಾಮದಲ್ಲಿ ಚಿರತೆಯೊಂದು ಕಂಡುಬಂದಿದೆ. ಇದಕ್ಕೆ ರಾಖಿ ಕಟ್ಟಿರುವ ಮಹಿಳೆ ನಂತರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಪ್ರೀತಿ ಮತ್ತು ಸಹೋದರತ್ವದ ಸಂಕೇತವಾದ ರಾಖಿಯನ್ನು ಈ ಪ್ರಾಣಿಗೆ ಕಟ್ಟಿರುವುದಾಗಿ ಆಕೆ ಹೇಳಿದ್ದಾರೆ. ಗುಲಾಬಿ ಬಣ್ಣದ ಸೀರೆಯುಟ್ಟ ಮಹಿಳೆ ಚಿರತೆಗೆ ರಾಖಿ ಕಟ್ಟುತ್ತಿರುವುದನ್ನು ನೀವು ಈ ಫೋಟೋದಲ್ಲಿ ಕಾಣಬಹುದು.
ಇದನ್ನೂ ಓದಿ: 27 ವರ್ಷದಿಂದ ಮೋದಿಗೆ ರಾಖಿ ಕಳುಹಿಸುವ ಪಾಕ್ ಮಹಿಳೆ: 2024ರ ಗೆಲುವಿಗೆ ಹಾರೈಕೆ
ದೇಶಾದ್ಯಂತ ಸಂಭ್ರಮದಿಂದ ರಕ್ಷಾ ಬಂಧನ ಆಚರಣೆ ನಡೆದಿದೆ. ಪವಿತ್ರ ಹಬ್ಬದಂದು ಸಹೋದರಿ ತನ್ನ ಸಹೋದರನ ಕೈ ಮಣಿಕಟ್ಟಿನ ಮೇಲೆ ರಾಖಿ ಕಟ್ಟಿ ದೀರ್ಘಾಯುಷ್ಯಕ್ಕೆ ಹಾರೈಸುವುದು ಸಂಪ್ರದಾಯ.
-
For ages, man & animal in India have lived in harmony with unconditional love to the wild.
— Susanta Nanda IFS (@susantananda3) August 12, 2022 " class="align-text-top noRightClick twitterSection" data="
In Rajasthan, a lady shows this unfettered love to our wild by tying a Rakhi(symbol of love & brotherhood ) to an ailing Leopard before handing over to Forest Department.
(As received) pic.twitter.com/1jk6xi1q10
">For ages, man & animal in India have lived in harmony with unconditional love to the wild.
— Susanta Nanda IFS (@susantananda3) August 12, 2022
In Rajasthan, a lady shows this unfettered love to our wild by tying a Rakhi(symbol of love & brotherhood ) to an ailing Leopard before handing over to Forest Department.
(As received) pic.twitter.com/1jk6xi1q10For ages, man & animal in India have lived in harmony with unconditional love to the wild.