ETV Bharat / bharat

ರಾಜಸ್ಥಾನ: ವೃದ್ಧನಿಗೆ ಥಳಿತ, ಈ ಸಂಘಟನೆಗಳ ಆಕ್ರೋಶ

author img

By

Published : Jul 23, 2022, 6:03 PM IST

ಚಪ್ಪಲಿಯ ಬೆಲೆಯ ವಿಷಯದಲ್ಲಿ ವಾದ - ವಿವಾದ ನಡೆದ ಕಾರಣಕ್ಕೆ ನನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಕುಮಾರ್ ಆರೋಪಿಸಿದ್ದಾರೆ. ದುಷ್ಕರ್ಮಿಗಳನ್ನು ತಡೆಯಲು ಹೋದ ಪಕ್ಕದ ಅಂಗಡಿಯ ಜೈ ಕಿಶನ್ ಎಂಬಾತನನ್ನೂ ಥಳಿಸಲಾಗಿದೆ.

Rajasthan: Elderly man roughed up in Chittorgarh, two detained

ಚಿತ್ತೋರಗಢ (ರಾಜಸ್ಥಾನ): ಇಲ್ಲಿನ ರೈಲು ನಿಲ್ದಾಣ ರಸ್ತೆಯಲ್ಲಿ ಗ್ರಾಹಕರು ಹಲ್ಲೆ ನಡೆಸಿದ್ದರಿಂದ ಅಂಗಡಿ ಮಾಲೀಕನೊಬ್ಬ ಗಾಯಗೊಂಡಿದ್ದಾನೆ. ಹಲ್ಲೆ ತಡೆಯಲು ಮುಂದಾದ ಇನ್ನೊಬ್ಬ ಅಂಗಡಿಕಾರನಿಗೂ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಚಪ್ಪಲಿ ಅಂಗಡಿ ಇಟ್ಟುಕೊಂಡಿರುವ 70 ವರ್ಷದ ಮನೋಜ್ ಕುಮಾರ್ ಶುಕ್ರವಾರ ಸಂಜೆ ತನ್ನ ಅಂಗಡಿಯನ್ನು ಬಂದ್ ಮಾಡುವ ವೇಳೆ, ಹತ್ತಿರದ ಸೆಟಲ್​ಮೆಂಟ್ ಪ್ರದೇಶದಲ್ಲಿರುವ ಮೂರ್ನಾಲ್ಕು ಜನ ಬಂದು ಅವರನ್ನು ಅಂಗಡಿಯಿಂದ ಹೊರಗೆಳೆದು ಮುಷ್ಠಿಯಿಂದ ಗುದ್ದಲು ಶುರು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಪ್ಪಲಿಯ ಬೆಲೆಯ ವಿಷಯದಲ್ಲಿ ವಾದ - ವಿವಾದ ನಡೆದ ಕಾರಣಕ್ಕೆ ನನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಕುಮಾರ್ ಆರೋಪಿಸಿದ್ದಾರೆ. ದುಷ್ಕರ್ಮಿಗಳನ್ನು ತಡೆಯಲು ಹೋದ ಪಕ್ಕದ ಅಂಗಡಿಯ ಜೈ ಕಿಶನ್ ಎಂಬಾತನನ್ನೂ ಥಳಿಸಲಾಗಿದೆ. ವಿಷಯ ತಿಳಿದ ಸದರ್ ಪೊಲೀಸ್ ಸ್ಟೇಷನ್ ಅಧಿಕಾರಿ ವಿಕ್ರಮ್ ಸಿಂಗ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಘಟನೆಯಿಂದ ಆಕ್ರೋಶಗೊಂಡ ಬಜರಂಗ ದಳ ಜಿಲ್ಲಾ ಸಂಯೋಜಕ ಜಗದೀಶ ಮೆನಾರಿಯಾ ಸೇರಿದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿದರು. ಮನೋಜ್ ಕುಮಾರ್ ಅವರ ದೂರಿನ ಮೇರೆಗೆ ಪೊಲೀಸರು ಕೆಲ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಇದನ್ನು ಓದಿ:ಮಣ್ಣಲ್ಲಿ ಮಣ್ಣಾದ ಕಲ್ಲಕುರಿಚಿ ಪಿಯುಸಿ ವಿದ್ಯಾರ್ಥಿನಿ.. ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಭಾಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.