ಮುಂಬೈ(ಮಹಾರಾಷ್ಟ್ರ): ಅಶ್ಲೀಲ ಚಿತ್ರ ಪ್ರಕರಣ ಸಂಬಂಧ ಎರಡು ತಿಂಗಳ ಹಿಂದೆ ಬಂಧಿತನಾಗಿದ್ದ ಉದ್ಯಮಿ ಮತ್ತು ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ಕುಂದ್ರಾ ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ.
-
#WATCH | Businessman Raj Kundra released from Arthur Road Jail in Mumbai. He was granted bail by a Mumbai court yesterday in connection with pornography case. pic.twitter.com/NUU2mQvVbK
— ANI (@ANI) September 21, 2021 " class="align-text-top noRightClick twitterSection" data="
">#WATCH | Businessman Raj Kundra released from Arthur Road Jail in Mumbai. He was granted bail by a Mumbai court yesterday in connection with pornography case. pic.twitter.com/NUU2mQvVbK
— ANI (@ANI) September 21, 2021#WATCH | Businessman Raj Kundra released from Arthur Road Jail in Mumbai. He was granted bail by a Mumbai court yesterday in connection with pornography case. pic.twitter.com/NUU2mQvVbK
— ANI (@ANI) September 21, 2021
ಅಶ್ಲೀಲ ಚಿತ್ರಗಳ ತಯಾರಿಕೆ ಸಂಬಂಧ ಜುಲೈ 19ರಂದು ಬಂಧಿಯಾಗಿದ್ದ ರಾಜ್ ಕುಂದ್ರಾಗೆ ಮುಂಬೈ ಕೋರ್ಟ್, 50 ಸಾವಿರ ರೂ ಮೊತ್ತದ ಶೂರಿಟಿ ಬಾಂಡ್ ಪಡೆದು ಜಾಮೀನು ನೀಡಿದೆ.
ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಮುಂಬೈ ಪೊಲೀಸರು ಇತ್ತೀಚೆಗೆ ಕುಂದ್ರಾ ವಿರುದ್ಧ 1,400 ಪುಟಗಳ ಚಾರ್ಜ್ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅಲ್ಲದೇ ಅಧಿಕಾರಿಗಳು, ನಟಿ ಶಿಲ್ಪಾಶೆಟ್ಟಿ ಸೇರಿ 43 ಸಾಕ್ಷಿಗಳ ಹೇಳಿಕೆಗಳನ್ನು ಪಟ್ಟಿ ಮಾಡಿದ್ರು.
ಇದನ್ನೂ ಓದಿ: ತನಿಖೆ ವೇಳೆ ಬಯಲು... ರಾಜ್ ಕುಂದ್ರಾ ಮೊಬೈಲ್, ಲ್ಯಾಪ್ನಲ್ಲಿ 119 ಪೋರ್ನ್ ವಿಡಿಯೋಗಳು ಪತ್ತೆ!
ಬಳಿಕ ರಾಜ್ ಕುಂದ್ರಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಪ್ರಕರಣದಲ್ಲಿ ನನ್ನನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಜಾಮೀನು ಅರ್ಜಿಯಲ್ಲಿ ಹೇಳಿಕೆ ನೀಡಿದ್ದರು. ರಾಜ್ ಕುಂದ್ರಾ ಇದರಲ್ಲಿ ಭಾಗಿಯಾಗಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಹಾಗಾಗಿ ಜಾಮೀನು ನೀಡುವಂತೆ ಉದ್ಯಮಿಯ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಇವರ ಮನವಿ ಆಲಿಸಿದ ನ್ಯಾಯಾಲಯ ಜಾಮೀನು ನೀಡಿದೆ.