ಮುಂಬೈ: ನಟಿ ಶಿಲ್ಪಾಶೆಟ್ಟಿ ಪತಿ, ಉದ್ಯಮಿ ರಾಜ್ಕುಂದ್ರಾ ಕಳೆದ ಒಂದೂವರೆ ವರ್ಷದಲ್ಲಿ 100ಕ್ಕೂ ಹೆಚ್ಚು ಅಶ್ಲೀಲ ಚಿತ್ರಗಳನ್ನು ಮಾಡಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ನಿನ್ನೆಯಷ್ಟೇ ಅವರಿಗೆ ಸಂಬಂಧಿಸಿದ ವಿವಿಧ ಭಾಗಗಳಲ್ಲಿ ಮುಂಬೈ ಪೊಲೀಸ್ ಅಪರಾಧ ಶಾಖೆ ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಅಪರಾಧ ವಿಭಾಗವು ಅಂಧೇರಿಯ ಪಶ್ಚಿಮದಲ್ಲಿರುವ ರಾಜ್ ಕುಂದ್ರಾ ಅವರ ವಿಯೆನ್ನಾ ಕಚೇರಿಯ ಮೇಲೆ ಪೊಲೀಸರು ದಾಳಿ ನಡೆಸಿ, ಡೇಟಾ ವಶಪಡಿಸಿಕೊಂಡಿದ್ದಾರೆ. ಇದರಲ್ಲಿ, ರಾಜ್ಕುಂದ್ರಾ ಕೆಲ ಮಾಹಿತಿ ನಾಶಪಡಿಸಿದ್ದಾರೆ ಎನ್ನಲಾಗಿದೆ. ಫೋರೆನ್ಸಿಕ್ ಇಲಾಖೆಯ ಸಹಾಯದಿಂದ ಪೊಲೀಸರು ಅಳಿಸಿದ ಡೇಟಾವನ್ನು ಮರು ಪಡೆಯುತ್ತಿದ್ದಾರೆ.
ಘಟನೆಯ ಹಿನ್ನೆಲೆ
ಉದ್ಯಮಿ ರಾಜ್ ಕುಂದ್ರಾ ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಮುಂಬೈ ಪೊಲೀಸರ ವಶದಲ್ಲಿದ್ದು, ಇದೀಗ ನ್ಯಾಯಾಲಯ ಅವರನ್ನು ಜುಲೈ 23ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಮಾಡೆಲ್‌ಗಳನ್ನು ಬಳಸಿಕೊಂಡು ನೀಲಿ ಚಿತ್ರ ನಿರ್ಮಿಸಿ ಅವುಗಳನ್ನು ಆ್ಯಪ್ಗಳಿಗೆ ಮಾರಾಟ ಮಾಡುತ್ತಿದ್ದ ಗಂಭೀರ ಪ್ರಕರಣದಲ್ಲಿ ರಾಜ್ ಕುಂದ್ರಾ ಸಿಕ್ಕಿ ಹಾಕಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿಂದಂತೆ ಪೊಲೀಸರು ಈಗಾಗಲೇ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದು, ಆರೋಪಿಯನ್ನು ಇನ್ನೂ ಹೆಚ್ಚಿನ ತನಿಖೆಗೆ ಒಳಪಡಿಸಲಿದ್ದಾರೆ.
ರಾಜ್ ಕುಂದ್ರಾ ಗಂಭೀರ ಪ್ರಕರಣದಲ್ಲಿ ಬಂಧಿತರಾಗಿದ್ದು, ಅವರ ಮೇಲಿನ ಆರೋಪ ಸಾಬೀತಾಗಿದ್ದೇ ಆದಲ್ಲಿ 7 ವರ್ಷಗಳ ಕಾಲ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ. ಈಗಾಗಲೇ ಕುಂದ್ರಾ ವಿರುದ್ಧ ಪೊಲೀಸರು ಭಾರತೀಯ ದಂಡ ಸಂಹಿತೆ(IPC Sections) 292, 293, 420, 34 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ(IT Act) u/s 2(g), 3, 4, 6, 7ರ ಅಡಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ:Raj Kundra Case: ಟ್ವಿಟರ್ನಲ್ಲಿ ಮಹತ್ವದ ಮಾಹಿತಿ ಹರಿಬಿಟ್ಟ ಶೆರ್ಲಿನ್ ಚೋಪ್ರಾ
ಕಳೆದ ಫೆಬ್ರವರಿ ತಿಂಗಳಲ್ಲೇ ರಾಜ್ ಕುಂದ್ರಾ ನೀಲಿ ಚಿತ್ರಗಳನ್ನು ತಯಾರಿಸುತ್ತಿರುವ ಬಗ್ಗೆ ದೂರು ದಾಖಲಾಗಿತ್ತು. ಬಳಿಕ ತಮ್ಮ ಮೇಲಿನ ಆರೋಪಗಳನ್ನೆಲ್ಲ ತಳ್ಳಿ ಹಾಕಿದ್ದ ಅವರು, ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು.