ETV Bharat / bharat

Indian Railway: 'ವಿಶೇಷ ಟ್ರೇನ್​​​ 'ಗಳನ್ನು ಕೈಬಿಡಲಿರುವ ಭಾರತೀಯ ರೈಲ್ವೆ..ಶೀಘ್ರದಲ್ಲೇ ಸಾಮಾನ್ಯ ದರ ಪುನರಾರಂಭ

ಲಾಕ್‌ಡೌನ್ ಸಡಿಲಗೊಂಡ ಬಳಿಕವೂ ವಿಶೇಷ ರೈಲುಗಳು ಮಾತ್ರ ಕಾರ್ಯಾಚರಣೆ ನಡೆಸುತ್ತಿದ್ದವು. ಪ್ರಯಾಣ ದರದಲ್ಲಿ ಯಾವುದೇ ರಿಯಾಯಿತಿ ಇರಲಿಲ್ಲ. ಈ ಕಾರಣದಿಂದಾಗಿ ಪ್ರಯಾಣಿಕರಿಂದ ಒತ್ತಡ ಬಂದಿತ್ತು. ಈ ಹಿನ್ನೆಲೆಯಲ್ಲಿ ಸಾಮಾನ್ಯ ರೈಲುಗಳಲ್ಲಿ ಸಾಮಾನ್ಯ ದರ ಪುನರಾರಂಭಿಸುವಂತೆ ಭಾರತೀಯ ರೈಲ್ವೆ ಆದೇಶಿಸಿದೆ.

Indian Railway
Indian Railway
author img

By

Published : Nov 13, 2021, 11:16 AM IST

ನವದೆಹಲಿ: ವಿಶೇಷ ರೈಲುಗಳ (Special Trains) ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು ಮತ್ತು ಸಾಮಾನ್ಯ ರೈಲುಗಳಲ್ಲಿ ಸಾಮಾನ್ಯ ದರವು ಅನ್ವಯವಾಗಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Union Minister of Railways Ashwini Vaishnaw) ಹೇಳಿದ್ದಾರೆ.

ಪ್ರಯಾಣ ದರ ಏರಿಕೆ ಕುರಿತು ಪ್ರಯಾಣಿಕರಿಂದ ಒತ್ತಡ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳ (mail and express trains) ವಿಶೇಷ ಟ್ಯಾಗ್‌ಗಳನ್ನು ತೆಗೆದುಹಾಕಲು ರೈಲ್ವೆ ಇಲಾಖೆ ಆದೇಶಿಸಿದೆ. ಇದಲ್ಲದೇ, ಕೊರೊನಾ ಸಾಂಕ್ರಾಮಿಕಕ್ಕೂ ಮುಂಚೆ ಇದ್ದ ಪ್ರಯಾಣ ದರವನ್ನೇ ತಕ್ಷಣದಿಂದ ಜಾರಿ ಮಾಡುವಂತೆ ಸೂಚಿಸಿದೆ.

ಲಾಕ್‌ಡೌನ್ ಸಡಿಲಗೊಂಡ ಬಳಿಕವೂ ವಿಶೇಷ ರೈಲುಗಳು ಮಾತ್ರ ಕಾರ್ಯಾಚರಣೆ ನಡೆಸುತ್ತಿದೆ. ಈ ವಿಶೇಷ ರೈಲುಗಳನ್ನು ಕೋವಿಡ್​ ಸಮಯದಲ್ಲಿ ಮೊದಲು ದೂರದ ಊರಿಗೆ ಪ್ರಯಾಣಿಸಲು ಆರಂಭಿಸಲಾಯಿತು. ಆದರೆ ಈಗ ಹತ್ತಿರದ ಊರುಗಳಿಗೂ ವಿಶೇಷ ರೈಲುಗಳು ಸಂಚರಿಸುತಿದ್ದು, ಇದರ ಟಿಕೆಟ್​ ಬೆಲೆ ಹೆಚ್ಚಿರುವುದರಿಂದ ಪ್ರಯಾಣಿಕರು ಅಸಮಾಧಾನ ಹೊರಹಾಕಿದ್ದಾರೆ. ವಿಶೇಷ ರೈಲುಗಳ ಓಡಾಟ ಮತ್ತು ಪ್ರಯಾಣ ದರದಲ್ಲಿ ರಿಯಾಯಿತಿ ನೀಡದ ಕಾರಣ ರೈಲ್ವೆ ಆದಾಯದಲ್ಲಿಯೂ ಗಣನೀಯ ಏರಿಕೆಯಾಗಿದೆ.

ಇದನ್ನೂ ಓದಿ: ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ಮರ್ಸಿಡಿಸ್​ ಬೆಂಜ್​ ಕಾರಿನ ವರ್ಕ್​ಶಾಪ್​ ಮಳಿಗೆ ಆರಂಭ

ಹೀಗಾಗಿ ರೈಲ್ವೆ ಇಲಾಖೆಯು ತನ್ನ ಎಲ್ಲ ವಲಯದ ರೈಲ್ವೆಗಳಿಗೆ ಪತ್ರ ಬರೆದು, ವಿಶೇಷ ರೈಲುಗಳನ್ನು ಕೈಬಿಡುವಂತೆ ಹಾಗೂ ಸಾಮಾನ್ಯ ರೈಲುಗಳಲ್ಲಿ ಸಾಮಾನ್ಯ ದರ ಪುನರಾರಂಭಿಸುವಂತೆ ಆದೇಶಿಸಿದೆ. ಆದರೆ, ಈ ಸೇವೆಯನ್ನು ಯಾವಾಗ ಪುನರಾರಂಭಿಸಬೇಕೆಂಬುದನ್ನು ನಿಗದಿ ಮಾಡಿಲ್ಲ. ಆದರೆ, ಶೀಘ್ರದಲ್ಲೆ ಇದು ಜಾರಿಗೆ ಬರಲಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ 1,700 ಕ್ಕೂ ಹೆಚ್ಚು ರೈಲುಗಳನ್ನು ಪುನರಾಂಭಿಸಲಾಗುವುದು ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.