ನವದೆಹಲಿ: ಕೊರೊನಾ ಸಂಕಷ್ಟದ ಸಮಯದಲ್ಲಿ ಭಾರತೀಯ ರೈಲ್ವೆ ತನ್ನ ಕೈಲಾದ ಸಹಾಯ ಮಾಡ್ತಿದ್ದು, ಅನೇಕ ಕೋವಿಡ್ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಆಕ್ಸಿಜನ್ ಪೂರೈಕೆ ಮಾಡಿ ಅವರ ಪ್ರಾಣ ಉಳಿಸುವ ಕೆಲಸ ಮಾಡ್ತಿದೆ.
ದೇಶಾದ್ಯಂತ 1,118 ಮೆಟ್ರಿಕ್ ಟನ್ ಮೆಡಿಕಲ್ ಆಕ್ಸಿಜನ್ ಪೂರೈಕೆ ಮಾಡುವ ಮೂಲಕ ಭಾರತೀಯ ರೈಲ್ವೆ ಇಲಾಖೆ ಮತ್ತೊಂದು ದಾಖಲೆ ನಿರ್ಮಿಸಿದ್ದು, ಆಕ್ಸಿಜನ್ ಎಕ್ಸ್ಪ್ರೆಸ್ ರೈಲುಗಳಿಂದ ಇದುವರೆಗೆ ಅತಿ ಹೆಚ್ಚಿನ ಪೂರೈಕೆ ಇದಾಗಿದೆ. ರೈಲುಗಳು ನಿತ್ಯ ಸರಾಸರಿ 800 ಮೆಟ್ರಿಕ್ ಟನ್ ಆಕ್ಸಿಜನ್ ಹೊತ್ತು ದೇಶದ ವಿವಿಧ ಭಾಗ ತಲುಪುತ್ತಿವೆ.
ಇಲ್ಲಿಯವರೆಗೆ 814 ಟ್ಯಾಂಕರ್ಗಳು 208 ಆಕ್ಸಿಜನ್ ಎಕ್ಸ್ಪ್ರೆಸ್ಗಳ ಮೂಲಕ ಒಟ್ಟು 13,319 ಮೆಟ್ರಿಕ್ ಟನ್ ಆಕ್ಸಿಜನ್ ದೇಶದ ವಿವಿಧ ರಾಜ್ಯಗಳಿಗೆ ತಲುಪಿದೆ. ಆದರೆ, ನಿನ್ನೆ ಒಂದೇ ದಿನ 13 ಆಕ್ಸಿಜನ್ ಎಕ್ಸ್ಪ್ರೆಸ್ಗಳು 1,118 ಮೆಟ್ರಿಕ್ ಟನ್ ಸಾಗಣೆ ಮಾಡಿವೆ.
ಇದನ್ನೂ ಓದಿ: ಕೋವಿಡ್ನಿಂದ ಅನೇಕ ಪ್ರೀತಿ ಪಾತ್ರರ ಸಾವು: ಭಾವುಕರಾದ ಪ್ರಧಾನಿ ಮೋದಿ
ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಮಹಾರಾಷ್ಟ್ರದಲ್ಲಿ 614 ಮೆ.ಟನ್ ಆಕ್ಸಿಜನ್, ಯುಪಿಯಲ್ಲಿ 3,386 ಮೆ. ಟನ್, ಆಂಧ್ರಪ್ರದೇಶ 521 ಮೆ.ಟನ್, ದೆಹಲಿಯಲ್ಲಿ 4,110 ಮೆ.ಟನ್, ಹರಿಯಾಣದಲ್ಲಿ 1,619 ಮೆ.ಟನ್, ರಾಜಸ್ಥಾನದಲ್ಲಿ 98 ಮೆ.ಟನ್, ಕರ್ನಾಟಕದಲ್ಲಿ 714 ಮೆ.ಟನ್, ಉತ್ತರಾಖಂಡದಲ್ಲಿ 320 ಮೆ.ಟನ್, ತಮಿಳುನಾಡಿನಲ್ಲಿ 649 ಮೆ.ಟನ್, ಪಂಜಾಬ್‌ನಲ್ಲಿ 153 ಮೆ.ಟನ್, ಕೇರಳದಲ್ಲಿ 118 ಮೆ.ಟನ್ ಮತ್ತು ತೆಲಂಗಾಣದಲ್ಲಿ 772 ಮೆ.ಟನ್. ರವಾನೆಯಾಗಿದೆ.