ನವದೆಹಲಿ : ಪುನರ್ ಅಭಿವೃದ್ಧಿಗೊಂಡ ರೈಲ್ವೆ ನಿಲ್ದಾಣಗಳಿಂದ ಹತ್ತುವ ಪ್ರಯಾಣಿಕರಿಗೆ ಇದೀಗ ಹೆಚ್ಚಿನ ಹಣ ನೀಡಬೇಕಾದ ಅನಿವಾರ್ಯತೆ ಉಂಟಾಗಬಹುದು. ಜನರು ಪ್ರಯಾಣ ಮಾಡುವ ವರ್ಗ ಆಧರಿಸಿ ಇದೀಗ ರೈಲ್ವೆ ಇಲಾಖೆ ರೂ. 10ರಿಂದ 50 ರೂ.ವರೆಗೆ ಹೆಚ್ಚಿನ ಶುಲ್ಕ ವಿಧಿಸಲು ಯೋಜನೆ ರೂಪಿಸಿದೆ ಎಂದು ತಿಳಿದು ಬಂದಿದೆ.
ಮರು ಅಭಿವೃದ್ಧಿಗೊಂಡಿರುವ ರೈಲ್ವೆ ನಿಲ್ದಾಣಗಳಿಂದ ಹತ್ತುವ ಮತ್ತು ಇಳಿದುಕೊಂಡು ದೂರದ ಪ್ರಯಾಣ ಬೆಳೆಸುವ ಜನರ ಮೇಲೆ ಇದರ ಹೊರೆ ಬೀಳಲಿದೆ. ರೈಲು ಬುಕ್ಕಿಂಗ್ ಸಮಯದಲ್ಲೇ ಈ ಶುಲ್ಕ ವಿಧಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರೈಲ್ವೆ ನಿಲ್ದಾಣಗಳು ಕಾರ್ಯಾರಂಭ ಮಾಡಿದ ಬಳಿಕ ಶುಲ್ಕ ವಿಧಿಸುವ ಸಾಧ್ಯತೆ ಇದೆ.
ಎಸಿ ವಿಭಾಗದಲ್ಲಿ 50 ರೂ., ಸ್ಲೀಪರ್ ಕೋಚ್ನಿಂದ 25 ರೂ. ಹಾಗೂ ಕಾಯ್ದಿರಿಸಿದ ವರ್ಗಕ್ಕೆ 10 ರೂ. ಶುಲ್ಕ ವಿಧಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಉಪನಗರ ರೈಲು ಪ್ರಯಾಣಿಕರಿಗೆ ಇದು ಅನ್ವಯವಾಗುವುದಿಲ್ಲ.
ಇದನ್ನೂ ಓದಿರಿ: ICC Player of the Month : ಕನ್ನಡಿಗ ಮಯಾಂಕ್ ಅಗರವಾಲ್ ಸೇರಿ ಮೂವರು ಪ್ಲೇಯರ್ಸ್ ನಾಮನಿರ್ದೇಶನ
ಈ ನಿಲ್ದಾಣಗಳಲ್ಲಿ ಪ್ಲಾಟ್ ಫಾರ್ಮ್ ಟಿಕೆಟ್ ಸಹ 10 ರೂ.ಗಳಷ್ಟು ದುಬಾರಿಯಾಗಲಿದೆ. ಈ ನಿಲ್ದಾಣಗಳಲ್ಲಿನ ಪ್ಲಾಟ್‌ಫಾರ್ಮ್ ಟಿಕೆಟ್‌ಗಳು ಸಹ 10 ರೂಪಾಯಿಗಳಷ್ಟು ದುಬಾರಿಯಾಗುತ್ತವೆ ಎಂದು ಅದು ಹೇಳಿದೆ.