ETV Bharat / bharat

ಇದೆಂಥಾ ಐಡಿಯಾ?.. ರೈಲ್ವೆ ನಿಲ್ದಾಣದಲ್ಲಿ ಕೋತಿಗಳನ್ನು ಓಡಿಸಲು ಮಂಗನದ್ದೇ ಪೋಸ್ಟರ್​, ಬ್ಯಾನರ್‌ ಪ್ರಯೋಗ

author img

By

Published : Mar 23, 2022, 10:36 AM IST

ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕಿರುಕುಳ ನೀಡುವ ಕೋತಿಗಳನ್ನು ಓಡಿಸಲು ಕೋತಿಗಳ ಪೋಸ್ಟ್‌ಗಳನ್ನು ಅಳವಡಿಸುವ ಮೂಲಕ ಕಾನ್ಪುರ ಸೆಂಟ್ರಲ್‌ ರೈಲ್ವೆ ಹೊಸ ಪ್ರಯೋಗಕ್ಕೆ ಮುಂದಾಗಿದೆ.

Rail officials put up langur posters in UP's Kanpur station to scare away monkeys
ರೈಲ್ವೆ ನಿಲ್ದಾಣದಲ್ಲಿ ಕೋತಿಗಳನ್ನು ಓಡಿಸಲು ಮಂಗನದ್ದೇ ಪೋಸ್ಟ್‌, ಬ್ಯಾನರ್‌ ಪ್ರಯೋಗ

ಕಾನ್ಪುರ (ಉತ್ತರ ಪ್ರದೇಶ): ಕಾನ್ಪುರ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಕೋತಿಗಳನ್ನು ಓಡಿಸಲು ಅಧಿಕಾರಿಗಳು ಹೊಸ ಐಡಿಯಾವೊಂದನ್ನು ಕಂಡುಕೊಂಡಿದ್ದು, ರೈಲ್ವೆ ನಿಲ್ದಾಣದ ಪ್ರಮುಖ ಸ್ಥಳಗಳಲ್ಲಿ ಕೋತಿಗಳ ಪೋಸ್ಟರ್‌ಗಳು ಹಾಗೂ ದೊಡ್ಡ ಕಟೌಟ್‌ಗಳನ್ನು ಅಳವಡಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಎನ್‌ಸಿಆರ್‌ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಮಿತ್ ಕುಮಾರ್ ಸಿಂಗ್, ಕೋತಿಗಳ ಪೋಸ್ಟರ್ ಮತ್ತು ಕಟೌಟ್ ಪ್ರಯೋಗ ಯಶಸ್ವಿಯಾದರೆ ಉತ್ತರ ಮಧ್ಯ ರೈಲ್ವೆ (ಎನ್‌ಸಿಆರ್) ವಿಭಾಗದ ಇತರ ರೈಲು ನಿಲ್ದಾಣಗಳಿಗೂ ಇದನ್ನು ವಿಸ್ತರಿಸುವುದಾಗಿ ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಮೇಲೆ ಮಂಗಗಳ ದಾಳಿಗಳು ಆತಂಕಕ್ಕೆ ಕಾರಣವಾಗಿವೆ. ಇವುಗಳಲ್ಲಿ ಕೆಲವು ಮಾರಣಾಂತಿಕವಾಗಿ ಹಲ್ಲೆ ಮಾಡಿರುವುದು ಸಾಬೀತಾಗಿದೆ. ಕಾನ್ಪುರ ಸೆಂಟ್ರಲ್‌ ರೈಲ್ವೆ ನಿಲ್ದಾಣದಲ್ಲಿ ಕೋತಿಗಳ ಕಿರುಕುಳ ತಡೆಯಲು ಪ್ರಯೋಗ ಮಾಡಿದ್ದೇವೆ. ಮಂಗಗಳ ಪೋಸ್ಟರ್‌ಗಳು, ಕಟೌಟ್‌ಗಳ ಬಳಿ ಸದ್ದು ಕೇಳುವಂತೆ ಸ್ಪೀಕರ್‌ಗಳನ್ನು ಅಳವಡಿಸಲಾಗಿದೆ.

ಮಂಗಗಳನ್ನು ಹೆದರಿಸಲು ಹೀಗೆ ಮಾಡಲಾಗಿದೆ. ಉತ್ತರ ಮಧ್ಯ ರೈಲ್ವೆ ವಿಭಾಗವೂ ಈ ಪ್ರಯೋಗವನ್ನು ಕಾನ್ಪುರ್‌ ಸೆಂಟ್ರಲ್ ನಿಲ್ದಾಣದಲ್ಲಿ ಪ್ರಾರಂಭಿಸಲಾಗಿದ್ದು, ಪ್ರಯೋಗ ಏಪ್ರಿಲ್ 30 ರವರೆಗೆ ನಡೆಯಲಿದೆ. ಇದು ಯಶಸ್ವಿಯಾದರೆ, ಪಂಕಿ ರೈಲ್ವೆ ನಿಲ್ದಾಣ ಹಾಗೂ ಇತರ ನಿಲ್ದಾಣಗಳಲ್ಲಿ ಅಳವಡಿಸಲಾಗುತ್ತದೆ.

ಪ್ರಯಾಣಿಕರು ಉಳಿದ ಆಹಾರವನ್ನು ಕೋತಿಗಳಿಗೆ ತಿನ್ನಿಸುವುದರಿಂದ ಇಂತಹ ಸಮಸ್ಯೆ ಶುರುವಾಗಿದೆ. ಮಂಗಗಳು ಆಹಾರ ಸಿಗದಿದ್ದಾಗ ಆಕ್ರಮಣಕಾರಿಯಾಗಿ ತಿರುಗಿ ಪ್ರಯಾಣಿಕರ ಮೇಲೆ ದಾಳಿ ಮಾಡುತ್ತವೆ ಎಂದು ಹಿರಿಯ ರೈಲ್ವೇ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮಂಗಗಳು ಮಕ್ಕಳ ಮೇಲೆ ದಾಳಿ ಮಾಡಿ ಆಹಾರ ಕಸಿದುಕೊಳ್ಳುತ್ತವೆ ಮತ್ತು ಆಗಾಗ್ಗೆ ಚೀಲಗಳನ್ನು ಎತ್ತಿಕೊಂಡು ಓಡಿ ಹೋಗುತ್ತವೆ. ಕೋತಿಗಳು ಹೆಚ್ಚಾಗಿರುವುದರಿಂದ ಚಿಪ್ಸ್‌ ಅಥವಾ ಇತರ ಆಹಾರ ಪದಾರ್ಥಗಳ ಪ್ಯಾಕೆಟ್‌ಗಳನ್ನು ಸಾಗಿಸಲು ಸಾಧ್ಯವಾಗುತ್ತಿಲ್ಲ ಎಂದು ರೈಲ್ವೆ ಮಾರಾಟಗಾರರು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಚರಂಡಿಗೆ ಹಾರಿ ಗಲೀಜು ಸ್ವಚ್ಛಗೊಳಿಸಿದ ಕೌನ್ಸಿಲರ್​ಗೆ ಹಾಲಿನ ಅಭಿಷೇಕ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.