ನವದೆಹಲಿ : ಕೋವಿಡ್ ಲಸಿಕೆಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕುರಿತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಇಂದು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜನರು ಪ್ರಾಣ ಕಳೆದುಕೊಂಡರೂ ಪ್ರಧಾನಮಂತ್ರಿಯ ತೆರಿಗೆ ಸಂಗ್ರಹ ಮಾತ್ರ ನಿಲ್ಲಬಾರದು ಎನ್ನುವಂತಿದೆ ಎಂದು ಕಿಡಿಕಾರಿದ್ದಾರೆ.
-
जनता के प्राण जाएँ पर PM की टैक्स वसूली ना जाए!#GST
— Rahul Gandhi (@RahulGandhi) May 8, 2021 " class="align-text-top noRightClick twitterSection" data="
">जनता के प्राण जाएँ पर PM की टैक्स वसूली ना जाए!#GST
— Rahul Gandhi (@RahulGandhi) May 8, 2021जनता के प्राण जाएँ पर PM की टैक्स वसूली ना जाए!#GST
— Rahul Gandhi (@RahulGandhi) May 8, 2021
ಈ ಬಗ್ಗೆ ಹಿಂದಿಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಜನರು ಜೀವವನ್ನು ಕಳೆದುಕೊಳ್ಳಬಹುದು. ಆದರೆ, ಪ್ರಧಾನಿ (ನರೇಂದ್ರ ಮೋದಿ) ಅವರ ತೆರಿಗೆ ಸಂಗ್ರಹ ಮಾತ್ರ ಕಳೆದುಹೋಗಬಾರದು ಎಂದು ಹೇಳಿದ್ದಾರೆ.
ಕೋವಿಡ್ ಲಸಿಕೆಗಳ ಮೇಲಿನ ಐದು ಪರ್ಸೆಂಟ್ ಜಿಎಸ್ಟಿಯನ್ನು ಹಲವು ರಾಜ್ಯಗಳು ಪ್ರಶ್ನಿಸಿದ ನಂತರ ರಾಹುಲ್ ಗಾಂಧಿ ಈ ರೀತಿಯಾಗಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಗಂಡನ ಅಂತಿಮ ಸಂಸ್ಕಾರವನ್ನು ತಾನೇ ನೆರವೇರಿಸಿದ ಪತ್ನಿ
ಕೋವಿಡ್ ಲಸಿಕೆಗಳ ಮೇಲಿನ ಜಿಎಸ್ಟಿಯೊಂದಿಗೆ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಪ್ರತಿ ಡೋಸ್ಗೆ 15-20 ರೂ. ಪಾವತಿಸಬೇಕಾಗಿದೆ. ಇದನ್ನು ರಾಜಸ್ಥಾನ ಮತ್ತು ಛತ್ತೀಸ್ಗಢ ರಾಜ್ಯಗಳು ವಿರೋಧಿಸಿದ್ದು, ಇದೀಗ ರಾಹುಲ್ ಗಾಂಧಿ ಪ್ರಶ್ನಿಸಿ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಜತೆಗೆ ಇಂಧನ ಬೆಲೆ ಏರಿಕೆ ಕುರಿತಾಗಿಯೂ ವಾಗ್ದಾಳಿ ನಡೆಸಿದ್ದಾರೆ.