ETV Bharat / bharat

ಬದುಕಿದ್ದ ವ್ಯಕ್ತಿಯ ಡೆತ್​ ರಿಪೋರ್ಟ್ ಕೊಟ್ಟ ವೈದ್ಯರು.. ಆಘಾತಕ್ಕೊಳಗಾಗಿ ಪ್ರತಿಭಟನೆಗೆ ಕುಳಿತ ರೋಗಿ! - ಬಹದ್ದೂರ್ ಸಿಂಗ್ ಅವರ ಪತ್ನಿ ಕುಲ್ವಿಂದರ್ ಕೌರ್

ಖಾಸಗಿ ಆಸ್ಪತ್ರೆಯೊಂದು ಬದುಕಿದ್ದವರನ್ನು ಮೃತರೆಂದು ಘೋಷಿಸಿದ ಘಟನೆ ಪಂಜಾಬ್​ನ ಹೋಶಿಯಾರ್‌ಪುರದಲ್ಲಿ ನಡೆದಿದೆ.

Bahadur Singh family protesting
ಪ್ರತಿಭಟನೆ ನಡೆಸುತ್ತಿರುವ ಬಹದ್ದೂರ್ ಸಿಂಗ್ ಕುಟುಂಬ
author img

By

Published : Feb 13, 2023, 1:52 PM IST

ಹೋಶಿಯಾರ್‌ಪುರ (ಪಂಜಾಬ್): ವೈದ್ಯೋ ನಾರಾಯಣೋ ಹರಿಃ ಎಂಬ ಮಾತಿದೆ. ವೈದರೆಂದರೆ ದೇವರಿಗೆ ಸಮಾನ, ಜೀವಕ್ಕೆ ಮರು ಜೀವ ತುಂಬಲು ಆ ದೇವರಿಗೆ ಬಿಟ್ಟರೆ ಅವರಿಗೆ ಮಾತ್ರ ಸಾಧ್ಯ. ಆದರೆ ಇದಕ್ಕೆ ವಿರುದ್ಧವಾಗಿ, ಬದುಕಿರುವ ವ್ಯಕ್ತಿಯನ್ನು ಮೃತನೆಂದು ಘೋಷಿಸಿ ಆತನ ಕುಟುಂಬದಿಂದ ಹಣಕ್ಕೆ ಬೇಡಿಕೆ ಇಟ್ಟ ವಿಲಕ್ಷಣ ಘಟನೆಯೊಂದು ಪಂಜಾಬ್​ನ ಹೋಶಿಯಾರ್‌ಪುರದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

ಹೋಶಿಯಾರ್‌ಪುರದ ರಾಮ್ ಕಾಲೋನಿ ಕ್ಯಾಂಪ್‌ನಲ್ಲಿರುವ ನಂಗಲ್ ಶಹೀದ್ ಗ್ರಾಮದ ನಿವಾಸಿಯಾಗಿರುವ ಬಹದ್ದೂರ್ ಸಿಂಗ್ ಎಂಬುವರಿಗೆ ತೀವ್ರ ಉಸಿರಾಟ ಮತ್ತು ಕೆಮ್ಮು ಸಮಸ್ಯೆಗಳನ್ನು ಹೊಂದಿದ್ದರು ಮತ್ತು ಅವರ ಕುಟುಂಬವು ಅವರನ್ನು IVY ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರು ಮೂರ್ನಾಲ್ಕು ಗಂಟೆಗಳ ಚಿಕಿತ್ಸೆಯ ನಂತರ, ಬಹದ್ದೂರ್ ಸಿಂಗ್ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದಾರೆ. ಅಲ್ಲದೆ ವೈದ್ಯರು ಕುಟುಂಬದವರಿಗೆ ಬಿಲ್ ಪಾವತಿಸಿ ಮೃತದೇಹವನ್ನು ತೆಗೆದುಕೊಂಡು ಹೋಗುವಂತೆ ಸೂಚಿಸಿದ್ದರು. ಇದರಿಂದ ಬಹದ್ದೂರ್ ಸಿಂಗ್ ಅವರ ದೇಹವನ್ನು ಕರೆದೊಯ್ಯುವಾಗ ಅವರ ದೇಹದ ಭಾಗಗಳಲ್ಲಿ ಚಲನವಲನಗಳನ್ನು ಗಮನಿಸಿದರು. ಇದರಿಂದ ಶಾಕ್​ಗೆ ಒಳಗಾದ ಸಿಂಗ್​ ಮನೆಯವರು ತಕ್ಷಣವೇ ಅಲ್ಲಿಂದ ಪಿಜಿಐ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಅಲ್ಲಿ ಪಿಜಿಐ ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿದ ನಂತರ ಬಹದ್ದೂರ್ ಸಿಂಗ್ ಅವರಿಗೆ ಪ್ರಜ್ಞೆ ಬಂದಿದೆ. ಬದುಕಿದ್ದರು ಚಿಕಿತ್ಸೆ ನೀಡದೆ ಸಾನ್ನಪ್ಪಿದ್ದಾರೆಂದು ಘೋಷಿಸಿದ ಐವಿವೈ ಆಸ್ಪತ್ರೆಯ ವಿರುದ್ಧ ಕೋಪಗೊಂಡ ಬಹದ್ದೂರ್ ಸಿಂಗ್ ಹಾಗೂ ಮನೆಯವರು ಆಸ್ಪತ್ರೆಯ ಹೊರಗೆ ಪ್ರತಿಭಟನಾ ಧರಣಿ ನಡೆಸಿ, ಆಸ್ಪತ್ರೆಯ ಪರವಾನಗಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ. ವಿಶೇಷವೆಂದರೆ ಈ ಪ್ರತಿಭಟನೆಯಲ್ಲಿ ಮೃತನೆಂದು ಘೋಷಿಸಲ್ಪಟ್ಟಿದ್ದ ರೋಗಿ ಬಹದ್ದೂರ್ ಸಿಂಗ್ ಕೂಡ ಪಾಲ್ಗೊಂಡಿದ್ದನು.

‘‘ಬಿಲ್ ಪಾವತಿಸಿ ಮೃತ ದೇಹ ತೆಗೆದುಕೊಳ್ಳಿ’’ : ಘಟನೆಯ ಕುರಿತು ಮಾತನಾಡಿದ ಬಹದ್ದೂರ್ ಸಿಂಗ್ ಅವರ ಪತ್ನಿ ಕುಲ್ವಿಂದರ್ ಕೌರ್, ತಮ್ಮ ಪತಿಗೆ ಸಾಮಾನ್ಯ ಕೆಮ್ಮು ಕಾಣಿಸಿಕೊಂಡಿತ್ತು, ಹೀಗಾಗಿ ಅವರನ್ನು ಐವಿವೈ ಆಸ್ಪತ್ರೆಗೆ ಕರೆದುಕೊಂಡು ಬಂದೆವು. ಅಲ್ಲಿನ ವೈದ್ಯರು ಅವರ ಗಂಟಲನ್ನು ಪರೀಕ್ಷಿಸಿ, ಒಂದು ಪೈಪ್​ನ್ನು ಅಳವಡಿಸಿದರು. ಮತ್ತು ಅವರನ್ನು ಐಸಿಯುಗೆ ಸೇರಿಸಲಾಯಿತು. 3 ರಿಂದ 4 ಗಂಟೆ ಕಳೆದ ನಂತರ ನಾನು ನನ್ನ ಪತಿಯನ್ನು ಭೇಟಿಯಾಗುವಂತೆ ಒತ್ತಾಯಿಸಿದಾಗ ಅಲ್ಲಿನ ನರ್ಸ್‌ಗಳು ನನ್ನೊಂದಿಗೆ ಅನುಚಿತವಾಗಿ ವರ್ತಿಸಿದರು ಎಂದು ಆರೋಪಿಸಿದ್ದಾರೆ.

ಒಮ್ಮೆಯು ಅವರನ್ನು ಭೇಟಿಯಾಗಲು ನನಗೆ ಅವಕಾಶ ನೀಡಲಿಲ್ಲ. ಆದರೆ ನಾನು ಮತ್ತೆ ವೈದ್ಯರನ್ನು ಭೇಟಿ ಮಾಡಲು ಕೇಳಿದಾಗ ಅವರು ನಿಮ್ಮ ಪತಿ ಸತ್ತಿದ್ದಾರೆ, ಬಿಲ್ ಪಾವತಿಸಿ ಮೃತ ದೇಹವನ್ನು ತೆಗೆದುಕೊಂಡು ಹೋಗಿ ಎಂದರು ಎಂದು ಹೇಳಿದರು. ಈ ಕುರಿತು ಸ್ಥಳಕ್ಕಾಗಮಿಸಿದ ಎಸ್‌ಎಚ್‌ಒ ಮಾಡೆಲ್‌ ಟೌನ್‌ ಹರ್‌ಪ್ರೀತ್‌ ಮಾತನಾಡಿ, ಸಂತ್ರಸ್ತೆಯ ಕುಟುಂಬಸ್ಥರಿಂದ ಆಸ್ಪತ್ರೆ ವಿರುದ್ಧ ದೂರು ದಾಖಲಾಗಿದ್ದು, 2 ದಿನಗಳಲ್ಲಿ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ; ಮದುವೆ ದಿನದಂದೇ ಮೂಳೆ ಮುರಿದುಕೊಂಡ ವಧು: ಆಸ್ಪತ್ರೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.