ETV Bharat / bharat

ಹನಿಟ್ರ್ಯಾಪ್‌ ಬಲೆಗೆ ಬಿದ್ದು ಪಾಕ್​ಗೆ ಗೌಪ್ಯ ಮಾಹಿತಿ ಹಂಚಿಕೆ ಆರೋಪ: ವಿಜ್ಞಾನಿ ಕುರುಲ್ಕರ್ ಬಗ್ಗೆ ಹೊಸ ಮಾಹಿತಿ ಬಹಿರಂಗ - ಪ್ರದೀಪ್ ಕುರುಲ್ಕರ್

ಪಾಕಿಸ್ತಾನಕ್ಕೆ ಗೌಪ್ಯ ಮಾಹಿತಿ ಹಂಚಿಕೆ ಆರೋಪದಡಿ ಬಂಧಿತರಾದ ಡಿಆರ್‌ಡಿಒ ಹಿರಿಯ ವಿಜ್ಞಾನಿ ಪ್ರದೀಪ್ ಕುರುಲ್ಕರ್ ಬಗ್ಗೆ ಮಹಾರಾಷ್ಟ್ರದ ಭಯೋತ್ಪಾದನೆ ನಿಗ್ರಹ ದಳ ತನಿಖೆ ನಡೆಸುತ್ತಿದೆ.

Pradeep Kurulkar
ವಿಜ್ಞಾನಿ ಪ್ರದೀಪ್ ಕುರುಲ್ಕರ್
author img

By

Published : May 12, 2023, 5:20 PM IST

ಪುಣೆ (ಮಹಾರಾಷ್ಟ್ರ): ಹನಿಟ್ರ್ಯಾಪ್‌ ಬಲೆಗೆ ಬಿದ್ದು ಪಾಕಿಸ್ತಾನಕ್ಕೆ ಗೌಪ್ಯ ಮಾಹಿತಿ ಹಂಚಿಕೆ ಆರೋಪದಡಿ ಬಂಧನಕ್ಕೆ ಒಳಗಾದ ಪುಣೆಯಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯ ನಿರ್ದೇಶಕ ಪ್ರದೀಪ್ ಕುರುಲ್ಕರ್ ಬಗ್ಗೆ ತನಿಖೆ ಚುರುಕುಗೊಂಡಿದೆ. ಈ ಬಗ್ಗೆ ಮಹಾರಾಷ್ಟ್ರದ ಭಯೋತ್ಪಾದನೆ ನಿಗ್ರಹ ದಳ (ಎ​ಟಿಎಸ್) ತನಿಖೆ ನಡೆಸುತ್ತಿದ್ದು, ಹೊಸ ಸಂಗತಿಗಳು ಬಹಿರಂಗವಾಗಿವೆ.

ಡಿಆರ್‌ಡಿಒ ಹಿರಿಯ ವಿಜ್ಞಾನಿಯಾಗಿರುವ ನಿರ್ದೇಶಕ ಪ್ರದೀಪ್ ಕುರುಲ್ಕರ್ ಹನಿಟ್ರ್ಯಾಪ್‌ನಲ್ಲಿ ಸಿಲುಕಿಸಿಕೊಂಡು​ ಪಾಕಿಸ್ತಾನಿ ಗುಪ್ತಚರ ಅಧಿಕಾರಿಗೆ ಗೌಪ್ಯ ಮಾಹಿತಿ ರವಾನಿಸಿರುವ ಶಂಕೆ ವ್ಯಕ್ತಯಾಗಿದೆ. ಈ ಸಂಬಂಧ ಮೇ 4ರಂದು ಎ​ಟಿಎಸ್ ಪೊಲೀಸರು ಬಂಧಿಸಿದ್ದಾರೆ. ಆ ನಂತರ ಪುಣೆಯ ಶಿವಾಜಿ ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಮೊದಲಿಗೆ ಮೇ 9ರವರೆಗೆ ಟಿಎಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು. ಇದೀಗ ಮೇ 15ರವರೆಗೆ ಎಟಿಎಸ್ ಕಸ್ಟಡಿಗೆ ನೀಡಲಾಗಿದ್ದು, ಹೆಚ್ಚಿನ ವಿಚಾರಣೆ ಕೈಗೊಳ್ಳಲಾಗುತ್ತಿದೆ.

ಇ-ಮೇಲ್ ಮೂಲಕ ಸಂಪರ್ಕ: ಮತ್ತೊಂದೆಡೆ, ಬಂಧಿತ ಕುರುಲ್ಕರ್ ಮೊಬೈಲ್​ ಮತ್ತು ಲ್ಯಾಪ್‌ಟಾಪ್​ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು, ಇದರ ವರದಿ ಸಹ ಬಹಿರಂಗವಾಗಿದೆ. ಹನಿಟ್ರ್ಯಾಪ್‌ ಸಂದರ್ಭದಲ್ಲಿ ಕುರುಲ್ಕರ್ ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಫೇಸ್‌ಬುಕ್‌ ಮೂಲಕ ಸಂವಹನ ನಡೆಸುತ್ತಿದ್ದರು. ಅಲ್ಲದೇ, ಇ-ಮೇಲ್ ಮೂಲಕ ಕೂಡ ಪಾಕಿಸ್ತಾನದ ಗುಪ್ತಚರರೊಂದಿಗೆ ಸಂಪರ್ಕದಲ್ಲಿದ್ದರು ಎಂದು ವರದಿಯಲ್ಲಿ ಬೆಳಕಿಗೆ ಬಂದಿದೆ.

ಮಹಿಳೆ ಭೇಟಿ ಬಗ್ಗೆ ತನಿಖೆ: ಈ ಹಿಂದಿನ ವಿಚಾರಣೆಯಲ್ಲಿ ಪ್ರದೀಪ್ ಕುರಾಳ್ಕರ್ ಡಿಆರ್​ಡಿಒ ಅತಿಥಿ ಗೃಹದಲ್ಲಿ ಒಬ್ಬ ಮಹಿಳೆಯನ್ನು ಭೇಟಿ ಮಾಡಿರುವ ವಿಚಾರ ಎಟಿಎಸ್​ ಗಮನಕ್ಕೆ ಬಂದಿತ್ತು. ಹೀಗಾಗಿ ಆ ಮಹಿಳೆ ನಿಖರವಾಗಿ ಯಾರು?, ಈ ಮಹಿಳೆಯನ್ನು ಏಕೆ ಭೇಟಿಯಾದರು? ಇದರ ಹಿಂದಿನ ನಿಖರ ಕಾರಣ ಪತ್ತೆ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

ಸರ್ಕಾರಿ ಪಾಸ್ ಪೋರ್ಟ್ ಬಳಕೆ: ಇನ್ನೊಂದು ಕುತೂಹಲಕಾರಿ ಅಂಶ ಎಂದರೆ ಕುರುಲ್ಕರ್ ಸರ್ಕಾರಿ ಪಾಸ್‌ಪೋರ್ಟ್​​ ಬಳಸಿ ಆರು ವಿದೇಶಗಳಿಗೆ ಭೇಟಿ ನೀಡಿದ್ದರು. ತಮ್ಮ ಪ್ರವಾಸದ ಸಂದರ್ಭದಲ್ಲಿ ಪಾಕಿಸ್ತಾನಿ ಗೂಢಚಾರರನ್ನು ಭೇಟಿಯಾಗಿರುವ ಶಂಕೆಯೂ ಇದೆ. ಹೀಗಾಗಿ ಈ ವೇಳೆ ಅವರು ಭೇಟಿಯಾಗಿದ್ದು ಯಾರನ್ನು?. ಯಾವ ಕಚೇರಿಯ ಗೌಪ್ಯ ಮಾಹಿತಿ ಹಂಚಿಕೊಂಡಿದ್ದಾರೆ?, ಅದಕ್ಕಾಗಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಲಾಗಿದೆಯೇ ಎಂಬ ಕುರಿತು ಎಟಿಎಸ್​ ತನಿಖೆ ನಡೆಸುತ್ತಿದೆ.

ಪ್ರದೀಪ್ ಕುರುಲ್ಕರ್ ಬಂಧನ ಕುರಿತಂತೆ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ಕಾಂಗ್ರೆಸ್ ವಕ್ತಾರ ಪವನ್ ಖೇರಾ, ಪ್ರದೀಪ್ ಕುರುಲ್ಕರ್ ಸಕ್ರಿಯ ಆರ್​ಎಸ್​​ಎಸ್ ನಾಯಕರಾಗಿದ್ದರು ಎಂದು ಆರೋಪಿಸಿದ್ದಾರೆ. ಡಿಆರ್‌ಡಿಒನ ಆರ್ ಮತ್ತು ಡಿ (ಎಂಜಿನಿಯರಿಂಗ್) ನಿರ್ದೇಶಕರಾಗಿ ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸಿದ್ದಕ್ಕಾಗಿ ಮಹಾರಾಷ್ಟ್ರದ ಎ​ಟಿಎಸ್ ಬಂಧಿಸಿದೆ. ಈ ಪ್ರಕರಣವು ರಾಷ್ಟ್ರೀಯವಾದಿ ಸಂಘಟನೆ ಎಂದು ಕರೆಯಲ್ಪಡುವ ಆರ್​ಎಸ್​​ಎಸ್​ನ ಸುಳ್ಳಿನ ಮುಖ ಮತ್ತು ರಾಷ್ಟ್ರ ವಿರೋಧಿ ಮುಖವನ್ನು ಬಹಿರಂಗಪಡಿಸಿದೆ ಎಂದು ದೂರಿದ್ದರು.

ಇದನ್ನೂ ಓದಿ: ಹನಿಟ್ರ್ಯಾಪ್​ ಬಲೆಗೆ ಬಿದ್ದು ಪಾಕ್​ಗೆ ಮಾಹಿತಿ ಸೋರಿಕೆ ಶಂಕೆ : ಡಿಆರ್​ಡಿಒ ನಿರ್ದೇಶಕನ ಬಂಧಿಸಿದ ಎಟಿಎಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.