ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಅಲ್ಲಿನ ಸರ್ಕಾರ ನೈಟ್ ಕರ್ಫ್ಯೂ ಜಾರಿಗೊಳಿಸಿ ಮಹತ್ವದ ಆದೇಶ ಹೊರಡಿಸಲಾಗಿದ್ದು, ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ಈ ಕರ್ಫ್ಯೂ ಜಾರಿಯಲ್ಲಿರಲಿದೆ.
ಏಪ್ರಿಲ್ 30ರವರೆಗೆ ಈ ನಿಯಮ ಜಾರಿಗೊಳ್ಳಲಿದ್ದು, ಇಂದು ರಾತ್ರಿಯಿಂದಲೇ ಕಾನೂನು ಜಾರಿಗೊಳ್ಳಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾಹಿತಿ ನೀಡಿದ್ದಾರೆ. ಕಳೆದ ಕೆಲ ದಿನಗಳಿಂದ ದೆಹಲಿಯಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿದ್ದು, ನಿನ್ನೆ ದಾಖಲೆಯ 3,548 ಕೇಸ್ಗಳು ಕಾಣಿಸಿಕೊಂಡಿದ್ದು, 15 ಜನರು ಸಾವನ್ನಪ್ಪಿದ್ದಾರೆ.
-
Night curfew imposed in Delhi from 10 pm to 5 am with immediate effect till 30th April, in the wake of #COVID19 situation: Delhi Government pic.twitter.com/V3WufATG77
— ANI (@ANI) April 6, 2021 " class="align-text-top noRightClick twitterSection" data="
">Night curfew imposed in Delhi from 10 pm to 5 am with immediate effect till 30th April, in the wake of #COVID19 situation: Delhi Government pic.twitter.com/V3WufATG77
— ANI (@ANI) April 6, 2021Night curfew imposed in Delhi from 10 pm to 5 am with immediate effect till 30th April, in the wake of #COVID19 situation: Delhi Government pic.twitter.com/V3WufATG77
— ANI (@ANI) April 6, 2021
ಇದನ್ನೂ ಓದಿ: ಬಂಗಾಳದಲ್ಲಿ ನಿಲ್ಲದ ಹಿಂಸೆ: ಇಂದು ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ಶವವಾಗಿ ಪತ್ತೆ
ನೈಟ್ ಕರ್ಫ್ಯೂ ವೇಳೆ ಟ್ರಾಫಿಕ್ ಸಂಚಾರಕ್ಕೆ ಯಾವುದೇ ರೀತಿಯ ನಿಷೇಧ ಇರುವುದಿಲ್ಲ. ಔಷಧ ತೆಗೆದುಕೊಂಡು ಬರುವವರಿಗೆ ಇ-ಪಾಸ್ ಮೂಲಕ ಅವಕಾಶ ನೀಡಲಾಗುವುದು ಎಂದು ತಿಳಿಸಲಾಗಿದೆ.
ಮೂಲಭೂತ ಅವಶ್ಯಕ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದ್ದು, ಅವುಗಳ ಖರೀದಿ ಮಾಡಲು ಮನೆಯಿಂದ ಹೊರಹೋಗಬೇಕಾದರೆ ಪಾಸ್ ಅವಶ್ಯವಾಗಿ ಪಡೆದುಕೊಂಡಿರಬೇಕು. ವರದಿಗಾರರು, ಖಾಸಗಿ ಆಸ್ಪತ್ರೆ ವೈದ್ಯರು, ನರ್ಸ್ ಹಾಗೂ ಇತರ ಮೆಡಿಕಲ್ ಸ್ಟಾಪ್ಗಳು ಐಡಿ ಕಾರ್ಡ್ ಮೂಲಕ ಅಗತ್ಯ ಸ್ಥಳಗಳಿಗೆ ಹೋಗಲು ಅವಕಾಶ ನೀಡಲಾಗಿದೆ. ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಈಗಾಗಲೇ ಮಹಾರಾಷ್ಟ್ರ ಹಾಗೂ ರಾಜಸ್ಥಾನದಲ್ಲಿ ನೈಟ್ ಕರ್ಫ್ಯೂ ವಿಧಿಸಲಾಗಿದ್ದು, ಮಹಾರಾಷ್ಟ್ರದಲ್ಲಿ ಶನಿವಾರ - ಭಾನುವಾರ ಲಾಕ್ಡೌನ್ ಸಹ ಹೇರಲಾಗಿದೆ.