ETV Bharat / bharat

ನಾಳೆ ವಾರಣಾಸಿಗೆ ಪ್ರಧಾನಿ ಮೋದಿ: ಭದ್ರತಾ ಸಿಬ್ಬಂದಿಯಿಂದ ಕಟ್ಟೆಚ್ಚರ

ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ವಾರಣಾಸಿಗೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆ ಭದ್ರತಾ ಸಿಬ್ಬಂದಿ ಶ್ವಾನ ದಳದೊಂದಿಗೆ, ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ವಾರಣಾಸಿಯ ರಾಜ್​​ಘಾಟ್
ವಾರಣಾಸಿಯ ರಾಜ್​​ಘಾಟ್
author img

By

Published : Nov 29, 2020, 4:19 PM IST

ವಾರಣಾಸಿ (ಉತ್ತರಪ್ರದೇಶ): ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ವಾರಣಾಸಿಯ ರಾಜ್​​ಘಾಟ್​ಗೆ ಭೇಟಿ ನೀಡಲಿದ್ದು, ಸಿದ್ಧತೆ ಭರದಿಂದ ಸಾಗಿದೆ.

ಭದ್ರತಾ ಸಿಬ್ಬಂದಿ ಶ್ವಾನದಳದೊಂದಿಗೆ ರಾಜ್​​ಘಾಟ್‌ನಲ್ಲಿರುವ ದೋಣಿಗಳನ್ನು ಹಾಗೂ ಇತರ ಸ್ಥಳಗಳನ್ನು ಪರಿಶೀಲಿಸಿದ್ದು, ದೇವ್ ದೀಪಾವಳಿ ಹಿನ್ನೆಲೆ ನಾಳೆ ವಾರಣಾಸಿಗೆ ಬರಲಿರುವ ಪ್ರಧಾನಿ ಮೋದಿ ಆರು ಪಥದ ವಾರಣಾಸಿ-ಪ್ರಯಾಗರಾಜ್ ಹೆದ್ದಾರಿಯನ್ನು ಉದ್ಘಾಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಿರುಮಲ ಬೆಟ್ಟವನ್ನು ಸುತ್ತುವರೆದ ಹಿಮ.. ಪ್ರಕೃತಿ ಸೌಂದರ್ಯಕ್ಕೆ ತಲೆಬಾಗಿದ ಭಕ್ತರು

ಒಟ್ಟು 2,447 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ರಾಷ್ಟ್ರೀಯ ಹೆದ್ದಾರಿ-19ರ 73 ಕಿಲೋಮೀಟರ್ ರಸ್ತೆಯನ್ನು ಮೋದಿ ಉದ್ಘಾಟಿಸಲಿದ್ದಾರೆ. ಈ ರಸ್ತೆ ಗಂಗಾ, ಪ್ರಯಾಗರಾಜ್ ಮತ್ತು ವಾರಣಾಸಿಯ ಪ್ರಯಾಣದ ಸಮಯವನ್ನು ಒಂದು ಗಂಟೆ ಕಡಿಮೆ ಮಾಡಲಿದೆ.

ಕಾರ್ತಿಕ ಪೂರ್ಣಿಮೆಯಂದು ಆಚರಿಸಲಾಗುವ ಬೆಳಕಿನ ಹಬ್ಬವಾದ ದೇವ್ ದೀಪಾವಳಿಯ ಆಚರಣೆಯನ್ನು ಪ್ರಾರಂಭಿಸಲು ಪಿಎಂ ಮೋದಿ ನಾಳೆ ದಿಯಾ (ದೀಪ) ದೀಪ ಹಚ್ಚಲಿದ್ದಾರೆ. ನಂತರ ಗಂಗಾ ನದಿಯ ಎರಡೂ ತೀರದಲ್ಲಿ 11 ಲಕ್ಷ ದೀಪಗಳನ್ನು ಬೆಳಗಿಸಲಾಗುತ್ತದೆ. ಈ ಭೇಟಿಯ ಸಮಯದಲ್ಲಿ ನಿರ್ಮಾಣ ಹಂತದಲ್ಲಿರುವ ಕಾಶಿ ವಿಶ್ವನಾಥ ದೇವಾಲಯದ ಕಾರಿಡಾರ್ ಯೋಜನೆಯ ಪ್ರಗತಿಯನ್ನು ಪ್ರಧಾನಿ ಪರಿಶೀಲಿಸಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.