ಬಹ್ರೇಚ್ (ಉತ್ತರ ಪ್ರದೇಶ): ವೇಶ್ಯಾವಾಟಿಕೆಗೆ ಒಪ್ಪದ್ದಕ್ಕೆ ಗರ್ಭಿಣಿವೋರ್ವಳ ಮೇಲೆ ಅಮಾನವೀಯವಾಗಿ ಆಕೆಯ ಕುಟುಂಬಸ್ಥರು ಹಲ್ಲೆ ನಡೆಸಿದ್ದಾರೆ. ಪರಿಣಾಮ ಗರ್ಭದಲ್ಲೇ ಕರುಳ ಕುಡಿ ಸಾವನ್ನಪ್ಪಿದೆ. ಉತ್ತರ ಪ್ರದೇಶದ ಬಹ್ರೇಚ್ನಲ್ಲಿ ಈ ಘಟನೆ ನಡೆದಿದೆ.
ಮಹಿಳೆ ಎಂಟು ತಿಂಗಳ ಗರ್ಭಿಣಿಯಾಗಿದ್ದು, ವೇಶ್ಯಾವಾಟಿಕೆಯಲ್ಲಿ ಭಾಗಿಯಾಗುವಂತೆ ಗಂಡನ ಮನೆಯವರು ಒತ್ತಡ ಹೇರುತ್ತಿದ್ದರು. ಇದಕ್ಕೆ ನಿರಾಕರಿಸಿದ್ದಕ್ಕೆ ಆಕೆಯ ಮೇಲೆ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿದ್ದರು. ಹೀಗಾಗಿ ಭೂಮಿಗೆ ಬರುವ ಮುನ್ನವೇ ಗರ್ಭದಲ್ಲೇ ಶಿಶು ಮೃತಪಟ್ಟಿದೆ.
ದುಷ್ಕೃತ್ಯದಲ್ಲಿ ಪತಿ, ಅತ್ತೆ ಹಾಗೂ ಮೈದುನ ಸಹ ಭಾಗಿಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮನೆಮಂದಿಗೆ ಕೊರೊನಾ ಹಬ್ಬುವ ಭೀತಿ: ಮರವನ್ನೇ ಐಸೋಲೇಷನ್ ಕೇಂದ್ರ ಮಾಡಿದ ಸೋಂಕಿತ
ಜಿಲ್ಲೆಯ ರಿಸಿಯಾ ಪೊಲೀಸ್ ಠಾಣಾ ಪ್ರದೇಶದಲ್ಲಿ ಶಂಕರ್ಪುರದ ನಿವಾಸಿಯಾಗಿರುವ ಈ ಮಹಿಳೆಗೆ ಪತಿ ಬಶೀರ್ ಅಹ್ಮದ್ ಅನೇಕ ದಿನಗಳಿಂದ ವೇಶ್ಯಾವಾಟಿಕೆಯಲ್ಲಿ ಭಾಗಿಯಾಗುವಂತೆ ಒತ್ತಡ ಹೇರುತ್ತಿದ್ದ. ಅದಕ್ಕೆ ನಿರಾಕರಣೆ ಮಾಡಿದ್ದರಿಂದ ಕೋಲುಗಳಿಂದ ಹಲ್ಲೆ ನಡೆಸಲಾಗಿದೆ. ಇದರಿಂದ ಆಕೆ ತೀವ್ರವಾಗಿ ಗಾಯಗೊಂಡಿದ್ದಾಳೆ. ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿ ಮಹಿಳೆಯನ್ನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲೇ ಶಿಶು ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.