ETV Bharat / bharat

ಸಿಂಧೂ ನದಿ ನೀರು ವಿವಾದದ ಕುರಿತು ಭಾರತ-ಪಾಕ್‌ ಮಧ್ಯೆ ಅಂತಿಮ ನಿರ್ಣಯದ ಸಾಧ್ಯತೆ : ಪಿ ಕೆ ಸಕ್ಸೇನಾ

ಪಾಕಿಸ್ತಾನದಲ್ಲಿ ಆಗಿನ ಪ್ರಧಾನಿ ಫೀಲ್ಡ್ ಮಾರ್ಷಲ್‌ ಮೊಹಮದ್ ಅಯೂಬ್‌ ಖಾನ್‌ ಮತ್ತು ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಹಾಗೂ ವಿಶ್ವ ಬ್ಯಾಂಕ್‌ನ ಡಬ್ಲ್ಯೂ.ಎ.ಬಿ ಇಲ್ಲಿಫ್‌ 1960 ಸೆಪ್ಟೆಂಬರ್ 19 ರಂದು ಒಪ್ಪಂದಕ್ಕೆ ಸಹಿ ಹಾಕಿದರು. ಆದಾಗ್ಯೂ, 1960 ಏಪ್ರಿಲ್ 1 ರಿಂದಲೇ ಒಪ್ಪಂದವು ಜಾರಿಗೆ ಬಂದಿತ್ತು..

author img

By

Published : Mar 16, 2021, 3:19 PM IST

Indo-Pak on Indus River water dispute
ಇಂಡೋ-ಪಾಕ್ ನಡುವೆ ಸಿಂದೂ ನದಿ ನೀರು ವಿವಾದ

ಈ ತಿಂಗಳ ಕೊನೆಯಲ್ಲಿ ನಡೆಸಲು ಉದ್ದೇಶಿಸಲಾಗಿರುವ ಭಾರತ ಮತ್ತು ಪಾಕಿಸ್ತಾನದ ಇಂಡಸ್‌ ಕಮಿಷನರ್‌ಗಳ ಭೇಟಿಗೂ ಮುನ್ನ, ಸಿಂಧೂ ಜಲ ಒಪ್ಪಂದದ ಬಗ್ಗೆ ವಿವರ, ಅದರ ಪರಿಣಾಮ ಮತ್ತು ನಿರೀಕ್ಷೆ ಬಗ್ಗೆ ಭಾರತದ ಇಂಡಸ್ ಕಮಿಷನರ್ ಪ್ರದೀಪ್ ಕುಮಾರ್ ಸಕ್ಸೇನಾ ಜೊತೆಗೆ ಈಟಿವಿ ಭಾರತ್‌ ಮಾತುಕತೆ ನಡೆಸಿದೆ.

ಸಂದರ್ಶನದ ಮುಖ್ಯಾಂಶಗಳು :

ಸಿಂಧೂ ನದಿ ನೀರು ಒಪ್ಪಂದದ ಬಗ್ಗೆ ಸಂಕ್ಷಿಪ್ತ ವಿವರ ನೀಡಿ : ಸಿಂಧೂ ನದಿ ನೀರು ಒಪ್ಪಂದಕ್ಕೆ 1960 ಸೆಪ್ಟೆಂಬರ್ 19ರಂದು ಭಾರತ ಮತ್ತು ಪಾಕಿಸ್ತಾನ ಸಹಿ ಹಾಕಿದ್ದವು. ಈ ಒಪ್ಪಂದದ ನಿಯಮಗಳ ಪ್ರಕಾರ ಎಲ್ಲ ಪೂರ್ವ ಭಾಗದ ನದಿಗಳಾದ ಸಟ್ಲೆಜ್, ಬಿಯಸ್ ಮತ್ತು ರಾವಿಯ ಸರಾಸರಿ 33 ಮಿಲಿಯನ್ ಎಕರೆ ಅಡಿ (ಎಂಎಎಫ್‌) ನೀರನ್ನು ಭಾರತದ ಅನಿರ್ಬಂಧಿತ ಬಳಕೆಗಾಗಿ ನಿಯೋಜಿಸಲಾಗಿದೆ.

ಅಷ್ಟೇ ಅಲ್ಲ, ಪಶ್ಚಿಮ ನದಿಗಳಾದ ಸಿಂಧೂ, ಝೇಲಂ ಮತ್ತು ಚೆನಾಬ್‌ ನದಿಗಳ ಸರಾಸರಿ 135 ಎಂಎಎಫ್‌ ವಾರ್ಷಿಕ ಹರಿವನ್ನು ಬಿಡುವುದಕ್ಕೆ ಭಾರತ ಬದ್ಧವಾಗಿದೆ. ಒಪ್ಪಂದದಲ್ಲಿ ಹೇಳಿದಂತೆ ದೇಶೀಯ ಬಳಕೆ ಹೊರತಾಗಿ ಬೇರೆ ಯಾವುದೇ ಉದ್ದೇಶಕ್ಕೆ ಈ ನೀರನ್ನು ಬಳಸುವಂತಿಲ್ಲ ಎಂಬ ಷರತ್ತಿಗೆ ಒಳಪಟ್ಟಿದೆ. ಜಲವಿದ್ಯುತ್ ಉತ್ಪಾದನೆಗೆ ಅನಿರ್ಬಂಧಿತ ಹಕ್ಕನ್ನು ಭಾರತಕ್ಕೆ ನೀಡಲಾಗಿದೆ. ವಿನ್ಯಾಸ ಮತ್ತು ಕಾರ್ಯಾಚರಣೆಗೆ ನಿರ್ದಿಷ್ಟ ಮಾನದಂಡವನ್ನು ನಿಗದಿಸಲಾಗಿದೆ.

ಚೆನಾಬ್ ನದಿಯಲ್ಲಿ ಭಾರತದ ಜಲವಿದ್ಯುತ್ ಪ್ರಾಜೆಕ್ಟ್‌ನ ಬಗ್ಗೆ ಪಾಕ್‌ ಕಳವಳ ವ್ಯಕ್ತಪಡಿಸಿದೆ. ಇದರ ಬಗ್ಗೆ ಏನಂತೀರಿ? : ಒಪ್ಪಂದದ ಪ್ರಕಾರ ಭಾರತದ ಹಕ್ಕುಗಳನ್ನು ಸಂಪೂರ್ಣವಾಗಿ ಬಳಸಲು ಭಾರತ ಬದ್ಧವಾಗಿದೆ ಮತ್ತು ಈ ನಿಟ್ಟಿನಲ್ಲಿ ಭಾರತ ಶ್ರಮಿಸುತ್ತಿದೆ. ಚರ್ಚೆಯ ಮೂಲಕ ಈ ವಿಷಯವನ್ನು ಪರಿಹರಿಸಿಕೊಳ್ಳುವಲ್ಲಿ ನಾವು ನಂಬಿಕೆ ಹೊಂದಿದ್ದೇವೆ. ಸಭೆಯ ವೇಳೆ, ಚೆನಾಬ್ ನದಿಯಲ್ಲಿ ಭಾರತದ ಜಲವಿದ್ಯುತ್‌ ಯೋಜನೆಗಳ ವಿನ್ಯಾಸಕ್ಕೆ ಪಾಕಿಸ್ತಾನದ ಆಕ್ಷೇಪಗಳ ಕುರಿತು ಚರ್ಚೆ ನಡೆಸಬಹುದು. ನಿರಂತರ ಚರ್ಚೆಗಳ ಮೂಲಕ ಈ ವಿಚಾರಗಳ ಕುರಿತು ನಿರ್ಣಯಕ್ಕೆ ಬರಬಹುದು ಎಂದು ಭಾವಿಸಲಾಗಿದೆ.

ಭಾರತ-ಪಾಕ್‌ನ ಸಂಬಂಧಗಳಿಗೆ ಸಿಂಧೂ ನದಿ ನೀರು ಒಪ್ಪಂದ ಎಷ್ಟು ಪ್ರಮುಖ?: ಈ ಒಪ್ಪಂದವು ಸಿಂಧೂ ನದಿ ನೀರಿನ ಬಳಕೆಯ ಕುರಿತು ಎರಡೂ ದೇಶಗಳಿಗೆ ಮಿತಿಯನ್ನು ನಿಗದಿಪಡಿಸುತ್ತದೆ. ಈ ಕುರಿತು ಇರುವ ಸಮಸ್ಯೆಯನ್ನು ವ್ಯವಸ್ಥಿತವಾಗಿ ವ್ಯಾಖ್ಯಾನಿಸಿದ ವಿಧಾನದ ಮೂಲಕ ಪರಿಹಾರವನ್ನೂ ಇದು ಮಾಡುತ್ತದೆ.

ಭಾರತ-ಪಾಕ್‌ನ ಮಧ್ಯೆ ಹೆಚ್ಚುತ್ತಿರುವ ಉದ್ವಿಗ್ನ ಪರಿಸ್ಥಿತಿಯ ಮಧ್ಯೆಯೇ ಮುಂಬರುವ ಭೇಟಿ ಎಷ್ಟು ಮುಖ್ಯ?: ಒಪ್ಪಂದದ ಅಡಿ ಭಾರತ ಅಥವಾ ಪಾಕಿಸ್ತಾನದಲ್ಲಿ ಕನಿಷ್ಠ ವರ್ಷಕ್ಕೊಮ್ಮೆ ಎರಡೂ ಕಮಿಷನರ್‌ಗಳು ಭೇಟಿ ಮಾಡುವುದು ಕಡ್ಡಾಯ. ಕಳೆದ ವರ್ಷ 2020 ಮಾರ್ಚ್‌ನಲ್ಲಿ ನವದೆಹಲಿಯಲ್ಲಿ ಭೇಟಿಯನ್ನು ನಿಗದಿಪಡಿಸಲಾಗಿತ್ತು.

ಆದರೆ, ಸಾಂಕ್ರಾಮಿಕ ರೋಗದ ಹಿನ್ನೆಲೆ ಎರಡೂ ದೇಶಗಳ ಸಮ್ಮತಿಯ ಮೇರೆಗೆ ಭೇಟಿ ರದ್ದು ಮಾಡಲಾಗಿತ್ತು. ಇದು ಒಪ್ಪಂದ ನಡೆದ ನಂತರ ರದ್ದಾದ ಮೊದಲ ಭೇಟಿಯಾಗಿದೆ. ಸನ್ನಿವೇಶ ಸುಧಾರಿಸಿದ ಹಿನ್ನೆಲೆ, ಕೋವಿಡ್-19 ಸಂಬಂಧಿತ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಈ ಭೇಟಿ ನಡೆಸಲಾಗುತ್ತಿದೆ.

370ನೇ ವಿಧಿ ರದ್ದಾದ ನಂತರ ನಡೆಯುತ್ತಿರುವ ಮೊದಲ ಭೇಟಿ ಇದಾಗಿದೆ. ಯಾವ ಹೊಸ ಸಂಗತಿ ನಿರೀಕ್ಷಿಸಬಹುದು? ಸಿಂಧೂ ನದಿ ಒಪ್ಪಂದದಲ್ಲಿ ಭಾರತದ ಪಾತ್ರ ಯಾವುದು? : ವಾರ್ಷಿಕ ಸಭೆಯು ಕಡ್ಡಾಯವಾಗಿದೆ ಮತ್ತು ಭೇಟಿಯ ಅಜೆಂಡಾವನ್ನು ಸಭೆಗೂ ಮುನ್ನ ಎರಡೂ ಕಮಿಷನರ್‌ಗಳು ನಿರ್ಧರಿಸುತ್ತಾರೆ. ಈ ಒಪ್ಪಂದಕ್ಕೆ ಭಾರತವೂ ಸಹಿ ಹಾಕಿದೆ.

ಭಾರತ-ಪಾಕ್‌ನ ಮಧ್ಯದ ಸಂಘರ್ಷ ಮತ್ತು ಸಹಕಾರದ ಮೇಲೆ ಮುಂದಿನ ದಿನಗಳಲ್ಲಿ ಯಾವ ಪರಿಣಾಮ ಉಂಟಾಗಬಹುದು? : ಒಪ್ಪಂದದ ಅನುಬಂಧ 9ರ ಅಡಿ ಸಮಸ್ಯೆ ಪರಿಹಾರಕ್ಕೆ ಬಹು ಹಂತದ ಕಾರ್ಯಕ್ರಮ ಲಭ್ಯವಿದೆ. ಇದರಲ್ಲಿ ಕಮಿಷನರ್‌ಗಳು, ಸರ್ಕಾರದ ಹಂತ ಮತ್ತು ನಂತರ ತೃತೀಯ ಪಕ್ಷದ ಮೂಲಕ ಸಮಸ್ಯೆ ಪರಿಹಾರ ಮಾಡಿಕೊಳ್ಳಬಹುದು.

ಶಾಶ್ವತ ಇಂಡಸ್‌ ಕಮಿಷನ್‌ನ ವಾರ್ಷಿಕ ಸಭೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ಇಂಡಸ್‌ ಕಮಿಷನರ್‌ಗಳು ಇರುತ್ತಾರೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದಗೊಳಿಸಿ, ರಾಜ್ಯವನ್ನು ಲಡಾಖ್‌ ಹಾಗೂ ಜಮ್ಮು-ಕಾಶ್ಮೀರ ಎಂಬ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ರೂಪಿಸಿದ ನಂತರದಲ್ಲಿ ಎರಡೂ ಕಮಿಷನರ್‌ಗಳು ಇದೇ ಮೊದಲ ಬಾರಿಗೆ ಭೇಟಿಯಾಗುತ್ತಿದ್ದಾರೆ.

ವರದಿಗಳ ಪ್ರಕಾರ ಲಡಾಖ್‌ನಲ್ಲಿ ಹಲವು ಜಲವಿದ್ಯುತ್ ಪ್ರಾಜೆಕ್ಟ್‌ಗಳಿಗೆ ಭಾರತ ಅನುಮೋದನೆ ನೀಡಿದೆ. ಲೇಹ್‌ನಲ್ಲಿ ದುರ್ಬುಕ್ ಶ್ಯೋಕ್ (19 ಮೆ.ವ್ಯಾ), ಶಂಕರ್ (18.5 ಮೆ.ವ್ಯಾ), ನಿಮು ಚಿಲ್ಲಿಂಗ್‌ (24 ಮೆ.ವ್ಯಾ), ರೊಂಡೊ (12 ಮೆ.ವ್ಯಾ), ರತನ್‌ ನಾಗ್ (10.5 ಮೆ.ವ್ಯಾ) ಹಾಗೂ ಕಾರ್ಗಿಲ್‌ನಲ್ಲಿ ಮಂಗ್ದುಮ್‌ ಸಂಗ್ರಾ (19 ಮೆ.ವ್ಯಾ), ಕಾರ್ಗಿಲ್ ಹಂದರ್‌ಮನ್‌ (25 ಮೆ.ವ್ಯಾ) ಮತ್ತು ತಮಾಷಾ (12 ಮೆ.ವ್ಯಾ) ಈ ಪೈಕಿ ಮಹತ್ವದ್ದಾಗಿದೆ.

ಸಿಂಧೂ ನದಿ ನೀರು ಒಪ್ಪಂದ ಯಾಕೆ ಅಗತ್ಯ ಎಂಬ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡಬಹುದೇ? : ಭಾರತ ಮತ್ತು ಪಾಕಿಸ್ತಾನದ ವಿಭಜನೆಯ ನಂತರ ನೀರಿನ ಬಳಕೆ ಒಪ್ಪಂದ ಅತ್ಯಂತ ಅಗತ್ಯದ್ದಾಗಿತ್ತು ಎಂದು ಭಾರತದ ಇಂಡಸ್ ಕಮಿಷನರ್ ಪಿ.ಕೆ. ಸಕ್ಸೇನಾ ಹೇಳಿದ್ದಾರೆ. ಜಲ ಶಕ್ತಿ ಸಚಿವಾಲಯ, ಜಲ ಸಂಪನ್ಮೂಲ, ನದಿ ಅಭಿವೃದ್ಧಿ, ಗಂಗಾ ಪುನಶ್ಚೇತನ ಇಲಾಖೆಗಳ ಪ್ರಕಾರ, ಸ್ವಾತಂತ್ರ್ಯದ ಸಮಯದಲ್ಲಿ ಹೊಸದಾಗಿ ಹುಟ್ಟಿಕೊಂಡ ಎರಡು ದೇಶಗಳಾದ ಪಾಕಿಸ್ತಾನ ಮತ್ತು ಭಾರತದ ಗಡಿಗಳನ್ನು ಸಿಂಧೂ ನದಿಯ ಗುಂಟದಲ್ಲಿ ನಿಗದಿಸಲಾಯಿತು.

ಪಾಕಿಸ್ತಾನವು ನದಿಯ ಕೆಳಪಾತ್ರದಲ್ಲಿ ಉಳಿದುಕೊಂಡಿತು. ಆದರೆ, ಎರಡು ಪ್ರಮುಖ ನೀರಾವರಿ ಯೋಜನೆಗಳು ಭಾರತದ ಭಾಗದಲ್ಲಿ ಉಳಿದುಕೊಂಡಿತು. ಈ ಪೈಕಿ ರಾವಿ ನದಿಗೆ ಅಡ್ಡಲಾಗಿ ಕಟ್ಟಿದ ಮಧೋಪುರ ಮತ್ತು ಇನ್ನೊಂದು ಸಟ್ಲೆಜ್ ನದಿಗೆ ಫಿರೋಜ್‌ಪುರದಲ್ಲಿ ಕಟ್ಟಿದ ಆಣೆಕಟ್ಟೆ ಮುಖ್ಯವಾಗಿದ್ದು, ಇದು ಪಾಕಿಸ್ತಾನದ ಪಂಜಾಬ್‌ಗೆ ನಾಲೆಯ ಮೂಲಕ ನೀರಾವರಿಯನ್ನು ಒದಗಿಸುತ್ತಿದ್ದು, ಈ ಭಾಗವು ಈ ನೀರನ್ನೇ ಸಂಪೂರ್ಣವಾಗಿ ಅವಲಂಬಿಸಿದೆ.

ಈಗಾಗಲೇ ಇರುವ ಅಣೆಕಟ್ಟೆಗಳಿಂದ ನೀರಿನ ಬಳಕೆಗೆ ಸಂಬಂಧಿಸಿದ ವಿವಾದವು ಎರಡೂ ದೇಶಗಳ ಮಧ್ಯೆ ಹುಟ್ಟಿಕೊಂಡಿತು : ವಿಶ್ವ ಬ್ಯಾಂಕ್‌ನ ಮರುರಚನೆ ಮತ್ತು ಅಭಿವೃದ್ದಿಯ ಅಂತಾರಾಷ್ಟ್ರೀಯ ಬ್ಯಾಂಕ್‌ನ ಮೂಲಕ ರಾಜಿ ಸಂಧಾನವನ್ನು ನಡೆಸಲಾಯಿತು. ಇದರ ಅಡಿಯಲ್ಲಿ 1960 ರಲ್ಲಿ ಸಿಂಧೂ ನದಿ ನೀರು ಒಪ್ಪಂದ ಮಾಡಿಕೊಳ್ಳಲಾಯಿತು.

ಪಾಕಿಸ್ತಾನದಲ್ಲಿ ಆಗಿನ ಪ್ರಧಾನಿ ಫೀಲ್ಡ್ ಮಾರ್ಷಲ್‌ ಮೊಹಮದ್ ಅಯೂಬ್‌ ಖಾನ್‌ ಮತ್ತು ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಹಾಗೂ ವಿಶ್ವ ಬ್ಯಾಂಕ್‌ನ ಡಬ್ಲ್ಯೂ.ಎ.ಬಿ ಇಲ್ಲಿಫ್‌ 1960 ಸೆಪ್ಟೆಂಬರ್ 19 ರಂದು ಒಪ್ಪಂದಕ್ಕೆ ಸಹಿ ಹಾಕಿದರು. ಆದಾಗ್ಯೂ, 1960 ಏಪ್ರಿಲ್ 1 ರಿಂದಲೇ ಒಪ್ಪಂದವು ಜಾರಿಗೆ ಬಂದಿತ್ತು.

1960ರ ನಂತರ ಇದೇ ಮೊದಲ ಬಾರಿಗೆ ಎರಡು ವರ್ಷಗಳ ಅಂತರದಲ್ಲಿ 116 ನೇ ಸಭೆಯನ್ನು ನಡೆಸಲಾಗುತ್ತಿದೆ ಎಂಬುದು ಅತ್ಯಂತ ಗಮನಾರ್ಹವಾದ ಸಂಗತಿಯಾಗಿದ್ದು, ಎರಡೂ ದೇಶಗಳು ಈವರೆಗೆ ಒಟ್ಟು 115 ಸಭೆಗಳನ್ನು ನಡೆಸಿವೆ.

-ಚಂದ್ರಕಲಾ ಚೌಧರಿ, ಈಟಿವಿ ಭಾರತ್‌, ನವದೆಹಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.