ಉಜ್ಜೈನ್, ಮಧ್ಯಪ್ರದೇಶ: ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಸಂತಸಗೊಳಿಸಲು ಸೀರೆ ದರೋಡೆ ಮಾಡಿ, ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಮಧ್ಯಪ್ರದೇಶದ ಉಜ್ಜೈನ್ನಲ್ಲಿ ನಡೆದಿದ್ದು, ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ದೂರು ಆತನ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ಆರೋಪಿಯನ್ನು ವಿಕ್ಕಿ ಎಂದು ಗುರ್ತಿಸಲಾಗಿದ್ದು, ಉಜ್ಜೈನ್ನ ಮಾಧವನಗರ ಪೊಲೀಸ್ ಠಾಣೆಯಿಂದ ಸುಮಾರು ನೂರು ಮೀಟರ್ ದೂರವಿರುವ ಟೆಕ್ಸ್ಟೈಲ್ ಶೋರೂಂಗೆ ನುಗ್ಗಿ ಚಾಕು ತೋರಿಸಿ, ಸೀರೆಯನ್ನು ಕದ್ದಿದ್ದಾನೆ. ಸಿಸಿಟಿವಿಯಲ್ಲಿ ಸೀರೆ ಕದ್ದ ದೃಶ್ಯ ಸೆರೆಯಾಗಿದ್ದು, ಪೊಲೀಸರು ಕೇವಲ 16 ಗಂಟೆಯಲ್ಲಿ ಆತನನ್ನು ಸೆರೆ ಹಿಡಿದಿದ್ದಾರೆ.
ಪೊಲೀಸರ ವಿಚಾರಣೆ ವೇಳೆ ತನ್ನ ಬಳಿ ಸೀರೆಯ ಬಣ್ಣ ನನಗೆ ಇಷ್ಟವಾಯಿತು. ಅದನ್ನು ನನ್ನ ಪತ್ನಿಗೆ ಉಡುಗೊರೆಯಾಗಿ ನೀಡಬೇಕೆಂದಿದ್ದೆನು. ನನ್ನ ಬಳಿ ಆ ಸೀರೆಯನ್ನು ಕೊಳ್ಳಲು ಹಣವಿಲ್ಲದ ಕಾರಣದಿಂದ, ಸೀರೆಯನ್ನು ಕದ್ದಿದ್ದೇನೆ ಎಂದು ವಿಕ್ಕಿ ಬಾಯ್ಬಿಟ್ಟಿದ್ದಾನೆ.
ಮತ್ತಷ್ಟು ತನಿಖೆ ನಡೆಸಿದಾಗ, ಆತನ ವಿರುದ್ಧ ಸುಮಾರು 16 ಪೊಲೀಸ್ ಠಾಣೆಗಳಲ್ಲಿ ಕಳ್ಳತನದಂಥಹ ದೂರುಗಳು ದಾಖಲಾಗಿರುವುದು ತಿಳಿದು ಬಂದಿದೆ. ಆದ್ದರಿಂದ ವಿಕ್ಕಿ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ಈ ಕಾಯ್ದೆಯಡಿಯಲ್ಲಿ ದೂರು ದಾಖಲಾದರೆ, ಪೊಲೀಸರು ಆರೋಪಿಯನ್ನು ಯಾವುದೇ ವಿಚಾರಣೆಯಿಲ್ಲದೇ 12 ದಿನಗಳ ಕಾಲ ತಮ್ಮ ವಶದಲ್ಲಿ ಇಟ್ಟುಕೊಳ್ಳಬಹುದಾಗಿದೆ.
ಇದನ್ನೂ ಓದಿ: ಶೀಲ ಶಂಕಿಸಿ, ಪತ್ನಿಯನ್ನು ಕೊಂದ: ಹೂತಿಟ್ಟ ಮೃತದೇಹ ಹೊರತೆಗೆದಾಗ ಗೊತ್ತಾಯ್ತು ಪಾಪಿ ಕೃತ್ಯ..