ETV Bharat / bharat

ಎಂಎನ್‌ಎಸ್ ಮುಖಂಡ ಸಂದೀಪ್ ದೇಶಪಾಂಡೆ ಹಲ್ಲೆ ಪ್ರಕರಣ: ಇಬ್ಬರು ದುಷ್ಕರ್ಮಿಗಳ ಬಂಧನ - national newses in kannada

ಎಂಎನ್‌ಎಸ್ ಪ್ರಧಾನ ಕಾರ್ಯದರ್ಶಿ ಮೇಲೆ ಕ್ರಿಕೆಟ್​ ಸ್ಟಂಪ್​ನಿಂದ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಜನ ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ.

police-detained-two-people-in-connection-with-the-attack-on-mns-leader-sandeep-deshpande
ಎಂಎನ್‌ಎಸ್ ಮುಖಂಡ ಸಂದೀಪ್ ದೇಶಪಾಂಡೆ ಹಲ್ಲೆ ಪ್ರಕರಣ: ಇಬ್ಬರು ದುಷ್ಕರ್ಮಿಗಳ ಬಂಧನ
author img

By

Published : Mar 4, 2023, 7:18 PM IST

ಮುಂಬೈ: ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ (ಎಂಎನ್​ಎಸ್) ವಕ್ತಾರ ಹಾಗೂ ಪ್ರಧಾನ ಕಾರ್ಯದರ್ಶಿ ಸಂದೀಪ್​​ ದೇಶಪಾಂಡೆ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ದುಷ್ಕರ್ಮಿಗಳನ್ನು ಶನಿವಾರ ಬಂಧಿಸಿದ್ದು. ಇನ್ನುಳಿದ ಇಬ್ಬರು ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ಮುಂದುವರೆದಿದೆ ಎಂದು ಶಿವಾಜಿ ಪಾರ್ಕ್ ಪೊಲೀಸ್ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಯ ಹಿನ್ನೆಲೆ: ಶಿವಸೇನೆ ರಾಜ್​ ಠಾಕ್ರೆ ಆಪ್ತ ಹಾಗೂ ಎಂಎನ್​ಎಸ್​ ಮುಖಂಡ ಸಂದೀಪ್​ ದೇಶಪಾಂಡೆ ಅವರು ಶುಕ್ರವಾರ ದಾದರ್​ನ ಶಿವಾಜಿ ಪಾರ್ಕ್​ನಲ್ಲಿ ಬೆಳಗ್ಗೆ 7 ಗಂಟೆಗೆ ಸುಮಾರಿಗೆ ವಾಕಿಂಗ್​ ಮಾಡುವ ಸಂದರ್ಭದಲ್ಲಿ ಅವರ ಮೇಲೆ ಅಪರಿಚಿತ ಗುಂಪೊಂದು ಕ್ರಿಕೆಟ್​ ಸ್ಟಂಪ್​ಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಈ ಸಂಬಂಧ ಶಿವಾಜಿ ಪಾರ್ಕ್​ ಪೊಲೀಸ್​ ಠಾಣೆಯಲ್ಲಿ ನಿನ್ನೆ ಪ್ರಕರಣ ದಾಖಲಾಗಿತ್ತು. ಬಳಿಕ ಶಿವಾಜಿ ಪಾರ್ಕ್​ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಇಬ್ಬರು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ.

ರಾಜಕೀಯ ವೈಷಮ್ಯ: ಬಂಧಿತರನ್ನು ಆರೋಪಿಗಳು ಪಶ್ಚಿಮ ಭದುಂಪ್ ಪ್ರದೇಶದ ನಿವಾಸಿಗಳಾದ ಅಶೋಕ್​ ಮತ್ತು ಸೋಲಂಕಿ ಎಂದು ತಿಳಿದು ಬಂದಿದೆ. ರಾಜಕೀಯ ವೈಷಮ್ಯದಿಂದ ಈ ದಾಳಿ ನಡೆಸಲಾಗಿದ್ದು, ಇನ್ನುಳಿದ ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ಶಿವಾಜಿ ಪಾರ್ಕ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಸತೀಶ್ ಕಸ್ಬೆ ಮಾಹಿತಿ ನೀಡಿದರು. ಘಟನೆ ಬಗ್ಗೆ ತಿಳಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸಂದೀಪ್ ದೇಶಪಾಂಡೆ ಅವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ದೇಶದ ಮೊದಲ ಸ್ತ್ರೀವಾದಿ ಗ್ರಂಥಾಲಯ: ಪುರುಷರು ಬರಬಹುದು.. ಆದರೂ ಇದು ಮಹಿಳೆಯರಿಗೆ ಮಾತ್ರ

ಆಂಬ್ಯುಲೆನ್ಸ್​ ಕೆಟ್ಟು ನಿಂತ ಪರಿಣಾಮ ಮಾಜಿ ಶಾಸಕ ಸಾವು: ಶಿವಸೇನಾ ಪಕ್ಷದ ಪರೆಲ್​ ಲಾಲ್​ಬಾಗ್​ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸೂರ್ಯಕಾಂತ್​ ದೇಸಾಯಿ ಡೊಂಬಿವಲಿಯಲ್ಲಿ ಮೃತಪಟ್ಟಿದ್ದಾರೆ. ಬೇರೊಂದು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯ ಆಂಬ್ಯುಲೆನ್ಸ್​ ಕೆಟ್ಟು ನಿಂತ ಪರಿಣಾಮ ಸರಿಯಾದ ಸಮಯಕ್ಕೆ ಚಿಕಿತ್ಸೆ ಲಭಿಸದೇ ಸೂರ್ಯಕಾಂತ್ ದೇಸಾಯಿ ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ನಡೆದಿದೆ.

ಮೂಲಗಳ ಪ್ರಕಾರ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಮಾಜಿ ಶಾಸಕ ಸೂರ್ಯಕಾಂತ್​ ದೇಸಾಯಿ ಅವರನ್ನು ಡೊಂಬಿವಲಿಯಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತಿತ್ತು. ಆಸ್ಪತ್ರೆಯಲ್ಲಿ ವೆಂಟಿಲೇಟರ್​ ಇಲ್ಲದ ಕಾರಣ ಅವರನ್ನು ಬೇರೊಂದು ಆಸ್ಪತ್ರೆಗೆ ಕರೆದೊಯ್ಯುವಂತೆ ಆಸ್ಪತ್ರೆಯ ವೈದ್ಯರು ಸೂರ್ಯಕಾಂತ್​​ರ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ವೈದ್ಯರ ಸೂಚನೆ ಮೇರೆಗೆ ಬೇರೊಂದು ಆಸ್ಪತ್ರೆಗೆ ಆಂಬ್ಯುಲೆನ್ಸ್​​ ಮೂಲಕ ಸೂರ್ಯಕಾಂತ್​ ಅವರನ್ನು ಸಾಗಿಸುತ್ತಿದ್ದ ವೇಳೆ ಮಾರ್ಗ ಮಧ್ಯದಲ್ಲೇ ಆಂಬ್ಯುಲೆನ್ಸ್​ ಕೆಟ್ಟು ನಿಂತಿದೆ. ಬಳಿಕ ಸೂರ್ಯಕಾಂತ್​ ದೇಸಾಯಿ ಅವರ ಕುಟುಂಬಸ್ಥರು ಆಂಬ್ಯುಲೆನ್ಸ್​ ತಳ್ಳಲು ಮುಂದಾಗಿದ್ದಾರೆ.

ಇದನ್ನೂ ಓದಿ: ಮಾ.10ಕ್ಕೆ ಸಿಸೋಡಿಯಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ದೆಹಲಿ ಕೋರ್ಟ್.. ಮತ್ತೆರಡು ದಿನ ಸಿಬಿಐ ವಶಕ್ಕೆ​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.