ETV Bharat / bharat

ಅತಿ ವೇಗವಾಗಿ ಬೈಕ್‌ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಸಬ್‌ಇನ್ಸ್‌ಪೆಕ್ಟರ್; ಕಾನ್ಸ್​ಟೆಬಲ್ ಸಾವು - ಪೊಲೀಸ್​ ಕಾನ್ಸ್​ಟೇಬಲ್​ಗೆ ಡಿಕ್ಕಿ

ವೇಗವಾಗಿ ಬೈಕ್​ ಚಲಾಯಿಸಿಕೊಂಡು ಬಂದ ಸಬ್‌ಇನ್ಸ್‌ಪೆಕ್ಟರ್​ವೊಬ್ಬರು ಮನೆ ಮುಂದೆ ಹಾದುಹೋಗುತ್ತಿದ್ದ ಪೊಲೀಸ್​ ಕಾನ್ಸ್​ಟೆಬಲ್​ಗೆ ಡಿಕ್ಕಿ ಹೊಡೆದಿದ್ದು, ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ.

accident
ಕಾನ್ಸ್​ಟೇಬಲ್ ಸಾವು
author img

By ETV Bharat Karnataka Team

Published : Nov 3, 2023, 10:47 AM IST

ಬಸ್ತಿ(ಉತ್ತರ ಪ್ರದೇಶ): ಪೊಲೀಸ್ ಸಬ್ ಇನ್ಸ್‌ಪೆಕ್ಟರ್​ವೊಬ್ಬರು ಅತಿವೇಗವಾಗಿ ಚಲಾಯಿಸಿಕೊಂಡು ಬಂದ ಮೋಟಾರ್ ಸೈಕಲ್ ಡಿಕ್ಕಿ ಹೊಡೆದು 25 ವರ್ಷದ ಪೊಲೀಸ್ ಕಾನ್ಸ್​ಟೆಬಲ್ ಮೃತಪಟ್ಟಿರುವ ಘಟನೆ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ. ಅಪಘಾತದಲ್ಲಿ ಕಾನ್ಸ್​ಟೆಬಲ್​ ಬಲ್ವಂತ್ ಕುಮಾರ್ ಅವರಿಗೆ ತೀವ್ರ ಗಾಯಗಳಾಗಿದ್ದು, ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ (ಕೆಜಿಎಂಯು) ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಎಸ್‌ಐ ರಾಮ್ ಸ್ವರೂಪ್ ಚೌಹಾಣ್ ಅವರ ತಲೆಗೂ ಸಹ ಗಂಭೀರ ಗಾಯಗಳಾಗಿದ್ದು, ಗೋರಖ್‌ಪುರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ಸಮಯದಲ್ಲಿ ಚೌಹಾಣ್ ಮದ್ಯ ಸೇವಿಸಿದ್ದರು ಎಂದು ಕುಮಾರ್ ಕುಟುಂಬ ಆರೋಪಿಸಿದೆ. ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ಹಾಗೂ ಎಸ್‌ಐ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ.

ಈ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಸ್​ಪಿ ಬಸ್ತಿ ಗೋಪಾಲ್ ಚೌಧರಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಆರೋಪಿ ಚೌಹಾಣ್ ವಿರುದ್ಧ ಐಪಿಸಿ 304 ಎ (ನಿರ್ಲಕ್ಷ್ಯದಿಂದ ಸಾವು), 337 (ಉದ್ದೇಶಪೂರಿತ ಕೃತ್ಯ), 338 (ಗಂಭೀರ ಗಾಯ) ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

2020ರ ಬ್ಯಾಚ್‌ನ ಕಾನ್ಸ್​ಟೆಬಲ್ ಬಲ್ವಂತ್ ಅವರು ಬಸ್ತಿಯಲ್ಲಿರುವ ಗೌರ್ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾಗಿದ್ದು, ಡಿಯೋರಿಯಾ ಪೊಲೀಸ್ ಲೈನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ನವರಾತ್ರಿ ರಜೆ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಬಂದಿದ್ದರು.

ಇದನ್ನೂ ಓದಿ: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ವಿಳಂಬ ; ಸರ್ಕಾರಿ ಬಸ್ ಜಪ್ತಿ

"ನನ್ನ ಮಗ ಬಬ್ನಾನ್-ಗೌರ್ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯೊಂದರಿಂದ ಹಾದುಹೋಗುತ್ತಿದ್ದಾಗ ಗೌರ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅತಿ ವೇಗವಾಗಿ ಬೈಕ್​ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದರು" ಎಂದು ಮೃತರ ತಂದೆ ರಾಮ್ ಮಿಲನ್ ಆರೋಪಿಸಿದ್ದಾರೆ.

ಇದನ್ನೂ ಓದಿ: ಎರಡು ಟ್ರಕ್​ಗಳ ನಡುವೆ ಮುಖಾಮುಖಿ ಡಿಕ್ಕಿ.. ಡ್ರೈವರ್​, ಕ್ಲೀನರ್ ಸಜೀವದಹನ

ಪಂಜಾಬ್​ನಲ್ಲಿ ಭೀಕರ ರಸ್ತೆ ಅಪಘಾತ: ಸುನಮ್‌ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಗುರುವಾರ ಟ್ಯಾಂಕರ್​ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿ 6 ಮಂದಿ ಸಾವನ್ನಪ್ಪಿದ್ದಾರೆ. ಕಾರಿನಲ್ಲಿ ಹೊರಟಿದ್ದ 6 ಜನರು ಮಲೇರಕೋಟ್ಲದಲ್ಲಿ ಪೂಜೆ ಸಲ್ಲಿಸಿ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ದುರಂತ ಸಂಭವಿಸಿದೆ. ಮಾರ್ಗಮಧ್ಯೆ ಟ್ಯಾಂಕರ್​ವೊಂದು ಕಾರಿಗೆ ಡಿಕ್ಕಿ ಹೊಡೆದು ನಂತರ, ಎದುರಿಗೆ ಬರುತ್ತಿದ್ದ ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದಿದೆ. ದುರ್ಘಟನೆಯಲ್ಲಿ ಮಗು ಸೇರಿದಂತೆ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಟ್ಯಾಂಕರ್​ - ಕಾರ್ ಡಿಕ್ಕಿ; ಭೀಕರ ಅಪಘಾತದಲ್ಲಿ ಮಗು ಸೇರಿ 6 ಜನರು ಸ್ಥಳದಲ್ಲೇ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.