ತೆಂಕಶಿ (ತಮಿಳುನಾಡು) : ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ ಕೊಲೆ ಯತ್ನದ ಆರೋಪಿಯೊಬ್ಬ ಪೊಲೀಸರಿಗೆ ಹೆದರಲಿ ನದಿಯಂತೆ ಇರುವ ಪ್ರದೇಶದಲ್ಲಿ ಅವಿತಿದ್ದ. ಆರೋಪಿಯ ಅವಿತಿದ್ದ ತಾಣದ ಬಗ್ಗೆ ಪೊಲೀಸರು ತಿಳಿದಿದ್ದರು. ವಿಶಾಲವಾಗಿರುವ ಸರೋವರದಲ್ಲಿ ಆರೋಪಿಯನ್ನು ಹಿಡಿಯುವುದು ಕಷ್ಟಕರವಾಗಿತ್ತು. ಆದರೆ ಈ ಕೆಲಸವನ್ನು ಡ್ರೋನ್ ಸಹಾಯದಿಂದ ಸುಲಭವಾಗಿಯೇ ಮಾಡಿದ್ದಾರೆ.
ಏನಿದು ಘಟನೆ: ರೌಡಿ ಶೀಟರ್ ಜಕುಲ್ ಹಮೀದ್ ತೆಂಕಶಿ ಜಿಲ್ಲೆಯವನು. ಈತನ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ವಿವಿಧ ಅಪರಾಧ ಪ್ರಕರಣಗಳು ಬಾಕಿ ಇವೆ. ಅಲ್ಲದೇ ಕೊಲೆ ಯತ್ನ ಪ್ರಕರಣದಲ್ಲಿ ಜಕುಲ್ ಹಮೀದ್‌ಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದರು. ಹೀಗಾಗಿ ಕೆಲ ದಿನಗಳ ಹಿಂದೆ ತೆಂಕಶಿಯ ಪಾಚನಾಯಕನಪೊಟ್ಟೈ ಪ್ರದೇಶಕ್ಕೆ ಜಾಕುಲ್ ತೆರಳಿ ವಾಸ್ತವ್ಯ ಹೂಡಿದ್ದ.
ಓದಿ: ಕೆಜಿಎಫ್ ಸಿನಿಮಾ ದಾಖಲೆಯನ್ನ ಮುರಿದ ಜೇಮ್ಸ್ ಸಿನಿಮಾ!
ಜಕುಲ್ ಪಾಚನಾಯಕನಪೊಟ್ಟೈ ಪ್ರದೇಶದ ಸುತ್ತ - ಮುತ್ತ ವಾಸಿಸುವ ಜನರಿಗೆ ಇಲ್ಲಿಗೆ ಬರಬೇಡಿ ಎಂದು ಬೆದರಿಕೆ ಹಾಕಿದ್ದಾನೆ. ಆದರೆ, ಇಲ್ಲಿನ ನಿವಾಸಿ ಪೀರ್ ಮೊಹಮ್ಮದ್ ಕುರಿ ಕಾಯುತ್ತಿದ್ದ ವೇಳೆ ಜಕುಲ್ ಇರುವ ಸ್ಥಳದ ಕಡೆ ತೆರಳಿದ್ದಾರೆ. ಇದರಿಂದ ಕೋಪಗೊಂಡ ಜಾಕುಲ್, ಮೊಹಮ್ಮದ್ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆ. ಪರಿಣಾಮ ಮೊಹಮ್ಮದ್ ಗಂಭೀರವಾಗಿ ಗಾಯಗೊಂಡಿದ್ದ. ಬಳಿಕ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಘಟನೆ ಬಗ್ಗೆ ತೆಂಕಶಿ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು.
ಪಕ್ಕಾ ಮಾಹಿತಿ ಆಧಾರ ಮೆರೆಗೆ ಪೊಲೀಸರು ಜಾಕುಲ್ಗಾಗಿ ಪಾಚನಾಯಕನಪೊಟ್ಟೈ ಪ್ರದೇಶಕ್ಕೆ ತೆರಳಿ ಪರಿಶೀಲನೆ ಕೈಗೊಂಡಿದ್ದರು. ಪೊಲೀಸರು ಪರಿಶೀಲನೆ ನಡೆಸುತ್ತಿದ್ದ ಬಗ್ಗೆ ತಿಳಿದು ಸರೋವರದಂತೆ ಇರುವ ಪ್ರದೇಶದಲ್ಲಿ ಅವಿತು ಕುಳಿತ್ತಿದ್ದನು. ಪೊಲೀಸರು ಜಾಕುಲ್ ಹಮೀದ್‌ಗಾಗಿ ಹುಡುಕಾಟ ನಡೆಸುತ್ತಿದ್ದರು, ಈ ವೇಳೆ ಕೆಲ ಮಹಿಳೆಯರು ಜಾಕುಲ್ ಹಮೀದ್ ಬಗ್ಗೆ ಮಾಹಿತಿ ನೀಡಿದ್ದರು.
ಓದಿ: ಶೀಘ್ರದಲ್ಲೇ ಗುಲಾಂ ನಬೀ ಆಜಾದ್ ಸೇರಿ ಜಿ-23 ನಾಯಕರಿಂದ ಸೋನಿಯಾ, ರಾಹುಲ್ ಭೇಟಿ
ಮಾಹಿತಿ ತಿಳಿದಾಕ್ಷಣ ಪೊಲೀಸರು ನೀರಿರುವ ಪ್ರದೇಶಕ್ಕೆ ತೆರಳಿದ್ದಾರೆ. ಆದ್ರೆ ನೀರಿನಲ್ಲಿ ಇಳಿದು ಆರೋಪಿಯನ್ನು ಹುಡುಕುವುದು ಪೊಲೀಸರಿಗೆ ಕಷ್ಟಕರವಾಗಿತ್ತು. ಈ ಹಿನ್ನೆಲೆ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಪೊಲೀಸರು, ಅಂತಿಮವಾಗಿ ಡ್ರೋನ್ ಬಳಕೆ ಮಾಡಲು ನಿರ್ಧರಿಸಿದರು.
ಡ್ರೋನ್ ಕ್ಯಾಮೆರಾದಿಂದ ಜಾಕುಲ್ ಅವಿತಿದ್ದ ಸ್ಥಳವನ್ನು ಪೊಲೀಸರು ಕ್ಷಣಾರ್ಧದಲ್ಲಿ ಪತ್ತೆ ಹಚ್ಚಿದ್ದರು. ಈ ವೇಳೆ, ಡ್ರೋನ್ ಕಂಡು ಆರೋಪಿ ಜಾಕುಲ್ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಆರೋಪಿಯನ್ನು ಪೊಲೀಸರು ಸುತ್ತುವರಿದು ಬಂಧಿಸಿದ್ದಾರೆ. ನೀರಿನಲ್ಲಿಳಿದು ಹುಡುಕಾಟ ನಡೆಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಪೊಲೀಸರು ತಮ್ಮ ಜಾಣ್ಮೆಯಿಂದ ಆರೋಪಿಯನ್ನು ಬಂಧಿಸಿದ್ದಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.