ಹರಿದ್ವಾರ(ಉತ್ತರಾಖಂಡ್): ಅಂತಾರಾಷ್ಟ್ರೀಯ ಹಾಕಿ ಆಟಗಾರ್ತಿಯಾಗಿ ದೇಶದ ಹೆಸರನ್ನು ಮುಗಿಲೆತ್ತರಕ್ಕೆ ಹಾರಿಸಿರುವ ವಂದನಾ ಕಟಾರಿಯಾ ಅವರ ಸಂಬಂಧಿಯೋರ್ವ ಕಳ್ಳತನ ಆರೋಪದಲ್ಲಿ ಸಿಲುಕಿ, ಈಗ ಕಂಬಿ ಎಣಿಸುತ್ತಿದ್ದಾನೆ. ಸಿಡ್ಕುಲ್‌ನ ಕೈಗಾರಿಕಾ ಪ್ರದೇಶದಲ್ಲಿ ಆಗಾಗ ಕಳ್ಳತನಗಳು ಸಾಮಾನ್ಯ ಎಂಬಂತೆ ನಡೆಯುತ್ತಿದ್ದವು. ಇದನ್ನು ನಿಯಂತ್ರಣಕ್ಕೆ ತರಲು ಮುಂದಾದ ಪೊಲೀಸ್ ಇಲಾಖೆ ಕಾರ್ಯಾಚರಣೆ ನಡೆಸಿ ಮೂವರು ಕಳ್ಳರನ್ನು ರೆಡ್ಹ್ಯಾಂಡ್ ಆಗಿ ಹಿಡಿದಿದೆ.
ಮಂಗಳವಾರ ಮುಂಜಾನೆ ಕಳ್ಳರನ್ನು ರೆಡ್ಹ್ಯಾಂಡಾಗಿ ಹಿಡಿಯಲಾಗಿದೆ. ಈ ವೇಳೆ ಆ ಮೂವರನ್ನು ವಿಚಾರಣೆ ನಡೆಸಲಾಗಿದೆ. ಮೂವರ ಹೆಸರು ಅಶು ಕಟಾರಿಯಾ, ಪ್ರವೀಣ್ ಕಟಾರಿಯಾ ಮತ್ತು ಆಶೇಶ್ ಎಂದು ತಿಳಿದುಬಂದಿದೆ. ಆರೋಪಿಗಳಲ್ಲಿ ಓರ್ವ ವಂದನಾ ಕಟಾರಿಯಾ ಅವರ ಚಿಕ್ಕಪ್ಪನ ಮಗ ಎಂಬುದು ಗೊತ್ತಾಗಿದೆ. ಇಂಥಹ ಚಟುವಟಿಕೆಗಳ ಕಾರಣದಿಂದಾಗಿ ವಂದನಾ ಅವರ ಕುಟುಂಬವು ಆರೋಪಿಯ ಕುಟುಂಬದೊಂದಿಗೆ ಹಲವು ವರ್ಷಗಳಿಂದ ಸಂಪರ್ಕದಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ.
ಮೂವರೂ ಆರೋಪಿಗಳು ಕದ್ದ ವಸ್ತುಗಳನ್ನು ಸಾಗಿಸಲು ಬಳಸುತ್ತಿದ್ದ ಆಟೋವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೀಗ ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ ಎಂದು ಸಿಡ್ಕುಲ ಪೊಲೀಸ್ ಠಾಣೆ ಅಧಿಕಾರಿ ಪ್ರಮೋದ್ ಉನಿಯಾಲ್ ತಿಳಿಸಿದ್ದಾರೆ.
ಇದನ್ನೂ ಓದಿ: 60 ಅಡಿಯ ಕಬ್ಬಿಣದ ಸೇತುವೆ ಕಳ್ಳತನ ಪ್ರಕರಣ.. ಇಂಜಿನಿಯರ್ ಸೇರಿ 8 ಮಂದಿ ಬಂಧನ