ಅಹಮದಾಬಾದ್ (ಗುಜರಾತ್): ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಜೂ.18ರಂದು 100ನೇ ವಸಂತಕ್ಕೆ ಕಾಲಿಡಲಿದ್ದಾರೆ. ಅಂದು ಪ್ರಧಾನಿ ಮೋದಿ ಮನೆಗೆ ಭೇಟಿ ನೀಡಿ ತಾಯಿಯಿಂದ ಆಶೀರ್ವಾದ ಪಡೆಯಲಿದ್ದಾರೆ.
"ಹೀರಾಬೆನ್ 1923ರ ಜೂ.18ರಂದು ಜನಿಸಿದ್ದರು. ಈಗ 100ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಈ ಹಿನ್ನೆಲೆಯಲ್ಲಿ ವಾಡ್ನಗರದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ" ಎಂದು ಕಿರಿಯ ಮಗ ಪಂಕಜ್ ಮೋದಿ ತಿಳಿಸಿದ್ದಾರೆ.
ಜೂ.18ರಂದು ಪ್ರಧಾನಿ ಮೋದಿ ಗುಜರಾತ್ ಪ್ರವಾಸ ಕೂಡ ಕೈಗೊಂಡಿದ್ದಾರೆ. ಹೀಗಾಗಿ ತಾಯಿಯನ್ನು ಭೇಟಿಯಾಗುವ ನಿರೀಕ್ಷೆ ಇದೆ. ಹೀರಾಬೆನ್ ಅವರೊಂದಿಗೆ ಪಂಕಜ್ ಮೋದಿ ವಾಸವಾಗಿದ್ದಾರೆ.
ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ: ಅಭ್ಯರ್ಥಿ ಆಯ್ಕೆಗೆ ಎನ್ಡಿಎ, ಪ್ರತಿಪಕ್ಷಗಳ ಇನ್ನಿಲ್ಲದ ಯತ್ನ