ETV Bharat / bharat

ಬೌದ್ಧ ಧರ್ಮಗುರು ದಲೈಲಾಮ 87ನೇ ಹುಟ್ಟುಹಬ್ಬ: ಪ್ರಧಾನಿ ಮೋದಿ ಗಣ್ಯರಿಂದ ಶುಭಾಶಯ - ಸುದರ್ಶನ್ ಪಟ್ನಾಯಕ್‌

ಪ್ರಧಾನಿ ನರೇಂದ್ರ ಮೋದಿ, ಹಿಮಾಚಲಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್, ಒಡಿಶಾ ಸಿಎಂ ನವೀನ್ ಪಟ್ನಾಯಕ್ ಸೇರಿದಂತೆ ಅನೇಕ ಕೇಂದ್ರ ಸಚಿವರು ಮತ್ತು ಅಂತಾರಾಷ್ಟ್ರೀಯ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ದಲೈಲಾಮಾ ಅವರ ಜನ್ಮದಿನಕ್ಕೆ ಶುಭಾಶಯ ತಿಳಿಸಿದ್ದಾರೆ.

ದಲೈಲಾಮ
ದಲೈಲಾಮ
author img

By

Published : Jul 6, 2022, 12:43 PM IST

ನವದೆಹಲಿ: ಇಂದು ಬೌದ್ಧ ಧರ್ಮಗುರು, ನೋಬೆಲ್ ಪ್ರಶಸ್ತಿ ಪುರಸ್ಕೃತ ದಲೈಲಾಮಾ ಅವರ 87ನೇ ವರ್ಷದ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆ ಮೂಲಕ ದಲೈಲಾಮಾ ಅವರಿಗೆ ಶುಭಾಶಯ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಮೋದಿ 'ದಲೈಲಾಮಾ ಅವರಿಗೆ ದೀರ್ಘಾಯುಷ್ಯ ಮತ್ತು ಆರೋಗ್ಯಕರ ಜೀವನ ಲಭಿಸಲೆಂದು' ಪ್ರಾರ್ಥಿಸುವುದಾಗಿ ಶುಭ ಹಾರೈಸಿದ್ದಾರೆ.

  • Conveyed 87th birthday greetings to His Holiness the @DalaiLama over phone earlier today. We pray for his long life and good health.

    — Narendra Modi (@narendramodi) July 6, 2022 " class="align-text-top noRightClick twitterSection" data=" ">

ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿ ಪ್ರತಿ ವರ್ಷ ಅವರ ಜನ್ಮದಿನಾಚರಣೆಗಳನ್ನು ಟಿಬೆಟಿಯನ್ ಸಮುದಾಯವು ಹಬ್ಬದಂತೆ ಆಚರಣೆ ಮಾಡುತ್ತದೆ. ಜುಲೈ 6 ಅನ್ನು 14 ನೇ ದಲೈ ಲಾಮಾ ಅವರ "ಅವತಾರ ದಿನ" ಎಂದು ಆಚರಿಸಲಾಗುತ್ತದೆ. ಈ ವರ್ಷವೂ ಮೆಕ್‌ಲಿಯೋಡ್‌ಗಂಜ್​ನಲ್ಲಿರುವ ಸುಗ್ಲಾಗ್‌ಖಾಂಗ್‌ನಲ್ಲಿ ಹುಟ್ಟುಹಬ್ಬ ಮಾಡಲಾಗಿದ್ದು, ಮುಖ್ಯ ಅತಿಥಿಯಾಗಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಭಾಗವಹಿಸಿದ್ದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಜೈರಾಮ್ ಠಾಕೂರ್, "ನಾನು ದಲೈಲಾಮಾ ಅವರೊಂದಿಗೆ ಸ್ವಲ್ಪ ಸಮಯದ ಹಿಂದೆ ಫೋನ್‌ನಲ್ಲಿ ಮಾತನಾಡಿದೆ. ಅವರು ಸಂತಸ ವ್ಯಕ್ತಪಡಿಸಿದರು. ಜೊತೆಗೆ ದೇವಭೂಮಿ ಹಿಮಾಚಲದಲ್ಲಿ ವಾಸಿಸುವ ಅವಕಾಶ ನೀಡಿದ್ದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದರು" ಎಂದರು.

ಪ್ರಧಾನಿ ಮಾತ್ರವಲ್ಲದೇ, ಕೇಂದ್ರ ಸಚಿವರು ಕೂಡ ದಲೈಲಾಮಾಗೆ ಜನ್ಮದಿನಕ್ಕೆ ಶುಭ ಕೋರಿದ್ದಾರೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಟ್ವೀಟ್ ಮಾಡಿ, 'ದಲೈಲಾಮಾ ಅವರಿಗೆ ಜನ್ಮದಿನದ ಶುಭಾಶಯಗಳು. ನಿಮ್ಮಲ್ಲಿರುವ ಪ್ರೀತಿ, ಸಾಮರಸ್ಯ ಮತ್ತು ಶಾಂತಿಯ ದೀಪವು ಜಗತ್ತನ್ನು ಹೀಗೆ ಬೆಳಗಿಸುತ್ತಿರಲಿ" ಎಂದಿದ್ದಾರೆ.

ಒಡಿಶಾ ಸಿಎಂ ನವೀನ್ ಪಟ್ನಾಯಕ್, "ದಲೈಲಾಮಾ ಅವರಿಗೆ ದೇವರು ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ಕರುಣಿಸಲಿ. ಪ್ರಪಂಚದಾದ್ಯಂತ ನಿಮ್ಮ ಪ್ರೀತಿ, ಸಹಾನುಭೂತಿ ಮತ್ತು ಶಾಂತಿ ಹರಡಲಿ" ಎಂದು ಹಾರೈಸಿದ್ದಾರೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಸಗ ಟ್ವೀಟ್​ ಮಾಡಿ ಶುಭ ಕೋರಿದ್ದಾರೆ.

ಶುಭಾಶಯ ತಿಳಿಸಿದ ಸುದರ್ಶನ್ ಪಟ್ನಾಯಕ್‌: ಅಂತಾರಾಷ್ಟ್ರೀಯ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ತಮ್ಮ ಮರಳು ಕಲಾಕೃತಿ ಮೂಲಕ ದಲೈಲಾಮಾ ಅವರ ಜನ್ಮದಿನಕ್ಕೆ ಶುಭಾಶಯ ತಿಳಿಸಿದ್ದಾರೆ. ಒಡಿಶಾದ ಪುರಿ ಸಮುದ್ರ ತೀರದಲ್ಲಿ ದಲೈಲಾಮಾ ಅವರ ಮರಳು ಕಲಾಕೃತಿ ರಚಿಸಿ, ಅವರೊಂದಿಗಿನ ಫೋಟೋ ಹಂಚಿಕೊಳ್ಳುವ ಮೂಲಕ ಹೀಗೆ ನಮ್ಮನ್ನು ಆಶೀರ್ವದಿಸುತ್ತಿರಿ ಎಂದಿದ್ದಾರೆ.

ಇದನ್ನೂ ಓದಿ: ಮರಳಿನಲ್ಲಿ ಮೂಡಿಬಂದ ಕೋಬ್ ಬ್ರ್ಯಾಂಟ್: ಮೃತ ಆಟಗಾರನಿಗೆ ಸುದರ್ಶನ್ ಪಟ್ನಾಯಕ್‌ ನಮನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.