ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ಗೆ 50 ದಿನಗಳು ಬಾಕಿ ಇದ್ದು, ಭಾರತದ ಸಿದ್ಧತೆಗಳನ್ನು ಪ್ರಧಾನಿ ನರೇಂದ್ರ ಮೋದಿ ಪರಿಶೀಲಿಸಿದ್ದಾರೆ. ಮುಂಬರುವ ಟೋಕಿಯೊ ಒಲಿಂಪಿಕ್ಸ್‌ಗಾಗಿ ಸಿದ್ಧತೆಯ ವಿವಿಧ ಅಂಶಗಳ ಕುರಿತು ಅಧಿಕಾರಿಗಳು ಪಿಎಂಗೆ ಮಾಹಿತಿ ನೀಡಿದರು. ಹಾಗೆ ಸಾಂಕ್ರಾಮಿಕ ರೋಗದ ಮಧ್ಯೆ ಕ್ರೀಡಾಪಟುಗಳಿಗೆ ನಿರಂತರ ತರಬೇತಿಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಕೈಗೊಂಡ ವಿವಿಧ ಕ್ರಮಗಳ ಬಗ್ಗೆ ಪ್ರಧಾನ ಮಂತ್ರಿಗೆ ತಿಳಿಸಲಾಯಿತು.
ಕ್ರೀಡಾಪಟುಗಳು ಮತ್ತು ಅವರ ಸಹಾಯಕ ಸಿಬ್ಬಂದಿಯ ವ್ಯಾಕ್ಸಿನೇಷನ್ ಬಗ್ಗೆ ಪಿಎಂಗೆ ತಿಳಿಸಲಾಯಿತು. ಈ ವೇಳೆ, ಟೋಕಿಯೊ ಒಲಿಂಪಿಕ್ಸ್‌ಗೆ ಪ್ರಯಾಣಿಸುವ ಪ್ರತಿಯೊಬ್ಬ ಅರ್ಹ ಮತ್ತು ಸಂಭಾವ್ಯ ಕ್ರೀಡಾಪಟು, ಸಹಾಯಕ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಆದಷ್ಟು ಬೇಗ ಲಸಿಕೆ ಹಾಕಬೇಕು ಎಂದು ಪ್ರಧಾನಿ ನಿರ್ದೇಶನ ನೀಡಿದರು.
ಇನ್ನು ಜುಲೈನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಒಲಿಂಪಿಕ್ಸ್ ತಂಡದೊಂದಿಗೆ ಸಂಪರ್ಕ ಸಾಧಿಸುತ್ತೇನೆ ಹಾಗೆ ಯುವಕರು ಕ್ರೀಡೆಯ ರೋಮಾಂಚಕ ಸಂಸ್ಕೃತಿಯನ್ನು ಸೃಷ್ಟಿಸುತ್ತಿದ್ದಾರೆ ಈ ಹಿನ್ನೆಲೆ ಅವರಿಗೆ 135 ಕೋಟಿ ಭಾರತೀಯರ ಆಶೀರ್ವಾದ ಇದೆ. ಜಾಗತಿಕ ವೇದಿಕೆಯಲ್ಲಿ ಮಿಂಚುತ್ತಿರುವ ಪ್ರತಿಯೊಬ್ಬ ಯುವ ಕ್ರೀಡಾಪಟುಗಳಿಗೆ ಇನ್ನೂ ಒಂದು ಹಲವಾರು ಪಂದ್ಯಗಳಲ್ಲಿ ಆಡಲು ಪ್ರೇರಣೆ ನೀಡಲಾಗುವುದು ಎಂದು ಪ್ರಧಾನಿ ಹೇಳಿದರು.