ETV Bharat / bharat

ನಾನು ಏರ್ಪೋರ್ಟ್‌ವರೆಗೆ ಜೀವಂತವಾಗಿ ಬಂದಿದ್ದಕ್ಕೆ ನಿಮ್ಮ ಸಿಎಂಗೆ ಥ್ಯಾಂಕ್ಸ್‌ ಹೇಳಿ: ಮೋದಿ - ಪಂಜಾಬ್​​ನಲ್ಲಿ ಪ್ರಧಾನಿ ಮೋದಿ

ಪಂಜಾಬ್​ನಲ್ಲಿ ನಡೆಯಬೇಕಾಗಿದ್ದ ರ್‍ಯಾಲಿಯಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ ಇಂದು ಆಗಮಿಸುತ್ತಿದ್ದ ವೇಳೆ ರೈತರು ರಸ್ತೆಯಲ್ಲಿ ತಡೆಯೊಡ್ಡಿದರು. ಈ ಕಾರಣಕ್ಕೆ ಅವರು 15 ರಿಂದ 20 ನಿಮಿಷಗಳ ಕಾಲ ಫ್ಲೈಓವರ್​​​​ನಲ್ಲೇ ಸಿಲುಕಿಕೊಂಡರು. ಬಳಿಕ ಉದ್ದೇಶಿತ ಕಾರ್ಯಕ್ರಮ ಮೊಟಕುಗೊಳಿಸಿ ವಾಪಸ್‌ ವಿಮಾನ ನಿಲ್ದಾಣಕ್ಕೆ ಹಿಂತಿರುಗಬೇಕಾಯಿತು. ಈ ಪ್ರಕರಣವನ್ನು ಕಾಂಗ್ರೆಸ್‌ ಸರ್ಕಾರದ ಬಹುದೊಡ್ಡ ಭದ್ರತಾ ಲೋಪ ಎಂದು ಹೇಳಿ ಕೇಂದ್ರ ಸರ್ಕಾರ ಈಗಾಗಲೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇದೀಗ ಪ್ರಧಾನಿ ಮೋದಿ ವ್ಯಂಗ್ಯಾತ್ಮಕ ಧಾಟಿಯಲ್ಲಿ ಪಂಜಾಬ್‌ ಸಿಎಂಗೆ ಟಾಂಗ್‌ ಕೊಟ್ಟಿದ್ದಾರೆ.

PM Modi security lapse in Punjab
PM Modi security lapse in Punjab
author img

By

Published : Jan 5, 2022, 4:45 PM IST

Updated : Jan 5, 2022, 4:58 PM IST

ಫಿರೋಜ್​ಪುರ್​(ಪಂಜಾಬ್​): 'ನಾನು ಜೀವಂತವಾಗಿ ಏರ್​ಪೋರ್ಟ್​ವರೆಗೂ ಬಂದಿರುವುದಕ್ಕೆ ನಿಮ್ಮ ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳಿ' ಎಂದು ಭಟಿಂಡಾ ಏರ್​ಪೋರ್ಟ್​​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪಂಜಾಬ್​​ನ ಫಿರೋಜ್​​​ಪುರ್​​ನಲ್ಲಿ ​​​ಪ್ರಚಾರ ಸಭೆಗೆ ತೆರಳುತ್ತಿದ್ದ ವೇಳೆ ಭದ್ರತಾ ಲೋಪದಿಂದಾಗಿ ದಿಢೀರ್​ ಆಗಿ ಅವರು ಭಾಗಿಯಾಗಬೇಕಿದ್ದ ರ್‍ಯಾಲಿ ರದ್ದಾಗಿದೆ.

  • Officials at Bhatinda Airport tell ANI that PM Modi on his return to Bhatinda airport told officials there,“Apne CM ko thanks kehna, ki mein Bhatinda airport tak zinda laut paaya.” pic.twitter.com/GLBAhBhgL6

    — ANI (@ANI) January 5, 2022 " class="align-text-top noRightClick twitterSection" data=" ">

ಇದನ್ನೂ ಓದಿ: 15-20 ನಿಮಿಷ ಫ್ಲೈಓವರ್​​​​ನಲ್ಲೇ ಸಿಲುಕಿಕೊಂಡ ಮೋದಿ; ಪಂಜಾಬ್‌ನಲ್ಲಿ ಬಹುದೊಡ್ಡ ಭದ್ರತಾ ಲೋಪ

ಆಗಿದ್ದೇನು?

ಹುಸೇನಿವಾಲಾದಲ್ಲಿನ ರಾಷ್ಟ್ರೀಯ ಹುತಾತ್ಮರ ಸ್ಮಾರಕದಿಂದ ಫಿರೋಜ್‌ಪುರಕ್ಕೆ ಪ್ರಧಾನಿ ರಸ್ತೆ ಮಾರ್ಗವಾಗಿ ಸಂಚರಿಸುತ್ತಿದ್ದರು. ಈ ವೇಳೆ ಬೆಂಗಾವಲು ಪಡೆಯೊಂದಿಗೆ ಮೋದಿ ಫ್ಲೈಓವರ್‌ವೊಂದರಲ್ಲೇ ಸುಮಾರು 20 ನಿಮಿಷಗಳ ಕಾಲ ಕಳೆಯಬೇಕಾಯಿತು. ಪ್ರತಿಭಟನಾಕಾರರು ರಸ್ತೆಯಲ್ಲಿ ಅಡಚಣೆ ಉಂಟು ಮಾಡಿದ್ದೇ ಇದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ರ್‍ಯಾಲಿ ರದ್ದುಗೊಳಿಸಲಾಯಿತು.

ಪಂಜಾಬ್​​ನಿಂದ ದೆಹಲಿಗೆ ತೆರಳುತ್ತಿದ್ದ ವೇಳೆ ಭಟಿಂಡಾ ಏರ್​​ಪೋರ್ಟ್​​ನಲ್ಲಿ ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಮಾತನಾಡಿರುವ ಮೋದಿ, 'ನಾನು ಏರ್​​​​ಪೋರ್ಟ್​​ವರೆಗೆ ಜೀವಂತವಾಗಿ ಬಂದಿರುವುದಕ್ಕೆ ನಿಮ್ಮ ಮುಖ್ಯಮಂತ್ರಿಗೆ ಧನ್ಯವಾದ ತಿಳಿಸಿ' ಎಂದರು.

ಪ್ರಧಾನಿ ಭದ್ರತೆಯಲ್ಲಿ ಲೋಪ ಕಾಣಿಸಿಕೊಳ್ಳುತ್ತಿದ್ದಂತೆ ಬಿಜೆಪಿ ಪಂಜಾಬ್​ ಕಾಂಗ್ರೆಸ್​​ ವಿರುದ್ಧ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್​ ಆಳ್ವಿಕೆಯಲ್ಲಿ ಪೊಲೀಸ್ ವ್ಯವಸ್ಥೆ​ ಇಷ್ಟೊಂದು ಕೀಳುಮಟ್ಟಕ್ಕೆ ಇಳಿದಿದೆ. ತುರ್ತು ಪರಿಸ್ಥಿತಿ ಬಳಿಕ ಇಂತಹ ದೊಡ್ಡ ತಪ್ಪು ನಡೆದಿರುವುದು ಎರಡನೇ ಸಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಟ್ವೀಟ್ ಮಾಡಿ ಟೀಕಿಸಿದ್ದಾರೆ.

Last Updated : Jan 5, 2022, 4:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.