ETV Bharat / bharat

ನಿಮ್ಮ ಹೆಸರು 'ನೀರಜ್'​ ಆಗಿದ್ರೆ ಈ ಬಂಕ್‌ನಲ್ಲಿ 501 ರೂಪಾಯಿಯ ಪೆಟ್ರೋಲ್ ಉಚಿತ! - ಭರೂಚ್​ ಜಿಲ್ಲೆಯ ಸುದ್ದಿ

ಜಾವೆಲಿನ್ ಥ್ರೋದಲ್ಲಿ ಚಿನ್ನ ಗೆದ್ದ ದೇಶದ ಹೆಮ್ಮೆಯ ಅಥ್ಲೀಟ್‌ ನೀರಜ್ ಚೋಪ್ರಾ ಹೆಸರಿನ ವ್ಯಕ್ತಿಗಳಿಗೆ ಉಚಿತವಾಗಿ ಇಂಧನ ತುಂಬಿಸುವ ಮೂಲಕ ಗುಜರಾತ್​​ನ ಪೆಟ್ರೋಲ್ ಪಂಪ್​​ ಮಾಲೀಕರೊಬ್ಬರು ವಿನೂತನವಾಗಿ ನೀರಜ್ ಚೋಪ್ರಾರನ್ನು ಅಭಿನಂದಿಸುತ್ತಿದ್ದಾರೆ.

Gujarat: If You Are Named 'Neeraj', This Petrol Pump In Bharuch will Give You Free Fuel
ಪೆಟ್ರೋಲ್​ ಬಂಕ್​ನಲ್ಲಿ ನೀರಜ್ ಆಫರ್​: ನಿಮ್ಮ ಹೆಸರು ನೀರಜ್​ ಆಗಿದ್ರೆ ಪೆಟ್ರೋಲ್ ಉಚಿತ..!
author img

By

Published : Aug 10, 2021, 7:42 AM IST

ಭರೂಚ್​(ಗುಜರಾತ್): ಟೋಕಿಯೋ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರ ಕ್ರೇಜ್ ದೇಶಾದ್ಯಂತ ಹೆಚ್ಚಾಗುತ್ತಿದೆ. ಇಲ್ಲೊಂದು ಪೆಟ್ರೋಲ್ ಬಂಕ್ ವಿನೂತನವಾಗಿ ಸಂಭ್ರಮಿಸುತ್ತಿದೆ.

ಹೌದು, ಗುಜರಾತ್​ನ ಭರೂಚ್​ ಜಿಲ್ಲೆಯ ನೆತ್ರಾಂಗ್ ನಗರದಲ್ಲಿ ಪೆಟ್ರೋಲ್​ ಬಂಕ್​​​ನಲ್ಲಿ ನೀರಜ್ ಎಂದು ಹೆಸರಿಟ್ಟುಕೊಂಡಿರುವ ಜನರಿಗೆ 501 ರೂಪಾಯಿಯ ಇಂಧನವನ್ನು ಉಚಿತವಾಗಿ ನೀಡಲಾಗುತ್ತಿದೆ.

ಅಯೂಬ್ ಪಠಾಣ್ ಎಂಬಾತನ ಒಡೆತನದಲ್ಲಿರುವ ಎಸ್​ಪಿ ಪೆಟ್ರೋಲಿಯಂ ಎಂಬ ಹೆಸರಿನ ಪೆಟ್ರೋಲ್ ಬಂಕ್​ಗೆ ಬರುವ ವಾಹನ ಸವಾರರು, ಐಡಿ ಕಾರ್ಡ್​​ ತೋರಿಸಿ, ತಮ್ಮ ಹೆಸರನ್ನು ನೀರಜ್ ಎಂದು ದೃಢಪಡಿಸಿ, ಆಫರ್​ ತಮ್ಮದಾಗಿಸಿಕೊಳ್ಳಬಹುದು.

'ಸೋಮವಾರ ಸಂಜೆಯವರೆಗ ಈ ಆಫರ್​ ಚಾಲ್ತಿಯಲ್ಲಿರಲಿದೆ. ಈ ಮೂಲಕ ಭಾರತಕ್ಕೆ ಐತಿಹಾಸಿಕ ಕೀರ್ತಿ ತಂದ ಅಥ್ಲಿಟ್​ಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ' ಎಂದು ಪೆಟ್ರೋಲ್ ಬಂಕ್ ಮಾಲೀಕ ಅಯೂಬ್ ಪಠಾಣ್ ಹೇಳಿದ್ದಾರೆ.

'ಈವರೆಗೆ ಸುಮಾರು 30 ಮಂದಿ ಈ ಆಫರ್ ಪಡೆದುಕೊಂಡಿದ್ದಾರೆ. ಮೊದಲಿಗೆ ಇದೊಂದು ಗಾಳಿ ಸುದ್ದಿ ಎಂದು ನಾನು ನಂಬಿದ್ದೆ. ಪೆಟ್ರೋಲ್ ಬಂಕ್​ಗೆ ಬಂದಾಗ ನಿಜವೆಂದು ಗೊತ್ತಾಯಿತು' ಎಂದು ಆಫರ್ ಪಡೆದುಕೊಂಡ ವ್ಯಕ್ತಿಯೊಬ್ಬರು ಹೇಳಿದರು.

ಇದನ್ನೂ ಓದಿ: ಕೇರಳ, ಮಹಾರಾಷ್ಟ್ರದಿಂದ ರಾಜ್ಯಕ್ಕೆ ಕೊರೊನಾ ಸಂಕಷ್ಟ; 3ನೇ ಅಲೆ ತಡೆಗೆ ಈಗಿನಿಂದಲೇ ಪ್ರಯತ್ನ; ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.