ನವದೆಹಲಿ: ಕೇಂದ್ರ ಸರ್ಕಾರ ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿರುವ ಪರಿಣಾಮ ನಾಳೆಯಿಂದ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಪ್ರಮುಖ ನಗರಗಳಲ್ಲಿ ನಾಳೆಯಿಂದ ತೈಲ ಬಲೆ ಇಳಿಕೆಯಾಗಲಿದೆ. ಕೇಂದ್ರ ಸರ್ಕಾರ ಪೆಟ್ರೋಲ್ ಮೇಲೆ 8 ರೂ ಹಾಗೂ ಡೀಸೆಲ್ ಮೇಲೆ 6 ರೂ. ಅಬಕಾರಿ ಸುಂಕ ಇಳಿಕೆ ಮಾಡಿದೆ.
ಸದ್ಯ ಮುಂಬೈನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 120.51 ಪೈಸೆ ಇದ್ದು, ಇದೀಗ 111.01 ಪೈಸೆಗೆ ಮಾರಾಟವಾಗಲಿದೆ. ಇನ್ನೂ ಡೆಲ್ಲಿಯಲ್ಲಿ ಪೆಟ್ರೋಲ್ 105.41 ಪೈಸೆ ಆಗಿದ್ದು, ನಾಳೆಯಿಂದ 95.91 ರೂಗೆ ಮಾರಾಟವಾಗಲಿದ್ದು, ಡೀಸೆಲ್ 96.67 ಪೈಸೆ ಬದಲಿಗೆ 89.67 ರೂ.ಗೆ ಸಿಗಲಿದೆ.
ಇದನ್ನೂ ಓದಿ: 'ಯಾವಾಗಲೂ ನಮಗೆ ಜನರೇ ಮೊದಲು': ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕ ಇಳಿಕೆ ಬೆನ್ನಲ್ಲೇ ನಮೋ ಟ್ವೀಟ್
ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 115.12ರೂ ಇದ್ದು, ನಾಳೆಯಿಂದ 105.65 ಪೈಸೆ ಹಾಗೂ ಡೀಸೆಲ್ 92.83 ಪೈಸೆಗೆ ಲಭ್ಯವಾಗಲಿದೆ. ಬೆಂಗಳೂರಿನಲ್ಲಿ ಸದ್ಯ ಪೆಟ್ರೋಲ್ 111.11 ಆಗಿದ್ದು, ನಾಳೆಯಿಂದ 101.61 ಪೈಸೆಗೆ ಸಿಗಲಿದೆ. ಡೀಸೆಲ್ ಬೆಲೆ ಸದ್ಯ 94.81 ಪೈಸೆ ಇದ್ದು, ನಾಳೆಯಿಂದ 87.81 ಪೈಸೆಗೆ ಲಭ್ಯವಾಗಲಿದೆ.
ಕೇಂದ್ರ ಸರ್ಕಾರ ಅಬಕಾರಿ ಸುಂಕ ಇಳಿಕೆ ಮಾಡಿರುವ ಬೆನ್ನಲ್ಲೇ ಕೇರಳ ಪಿಣರಾಯಿ ವಿಜಯನ್ ಸರ್ಕಾರ ಕೂಡ ರಾಜ್ಯದ ಅಬಕಾರಿ ಸುಂಕದಲ್ಲಿ ಮತ್ತಷ್ಟು ಇಳಿಕೆ ಮಾಡಿರುವ ಕಾರಣ, ರಾಜ್ಯದಲ್ಲಿ ತೈಲ ಬೆಲೆ ಮತ್ತಷ್ಟು ಅಗ್ಗವಾಗಲಿದೆ.