ETV Bharat / bharat

ಹೈಕೋರ್ಟ್‌ನಲ್ಲಿ ಟಿಪ್ಸ್ ಹಣ​ ಪಡೆಯಲು ಪೇಟಿಎಂ ಕ್ಯೂಆರ್ ಕೋಡ್ ಬಳಸಿದ ಜಮಾದಾರ್!

author img

By

Published : Dec 1, 2022, 7:44 PM IST

Updated : Dec 1, 2022, 7:57 PM IST

ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್‌ನಲ್ಲಿ ವಕೀಲರಿಂದ ಟಿಪ್ಸ್​ ರೂಪದಲ್ಲಿ ಹಣ ಸಂಗ್ರಹಿಸಲು ಜಮಾದಾರ್​ವೊಬ್ಬರು​​ ಸಮವಸ್ತ್ರಕ್ಕೆ ಪೇಟಿಎಂ ಕ್ಯೂಆರ್ ಕೋಡ್ ಸಿಕ್ಕಿಸಿಕೊಂಡಿರುವ ಫೋಟೋ ವೈರಲ್ ಆಗಿದೆ.

paytm-on-uniform-was-collecting-tips-ardaly-of-high-court-suspended
ಹೈಕೋರ್ಟ್‌ನಲ್ಲಿ ಟಿಪ್ಸ್ ಹಣ​ ಪಡೆಯಲು ಪೇಟಿಎಂ ಕ್ಯೂಆರ್ ಕೋಡ್ ಬಳಸಿದ ಜಮಾದಾರ್

ಪ್ರಯಾಗರಾಜ್ (ಉತ್ತರ ಪ್ರದೇಶ): ಟಿಪ್ಸ್ ಹಣ​ ಪಡೆಯಲು ಎಂದು ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್‌ನಲ್ಲಿ ಜಮಾದಾರ್​ವೊಬ್ಬರು​​ ತಮ್ಮ ಸಮವಸ್ತ್ರಕ್ಕೆ ಪೇಟಿಎಂ ಕ್ಯೂಆರ್ ಕೋಡ್ ಅಂಟಿಸಿಕೊಂಡ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೆ ಜಮಾದಾರ್​ನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಹೈಕೋರ್ಟ್​ನಲ್ಲಿ ಆರ್ಡರ್ಲಿ ಆಗಿ ಕೆಲಸ ಮಾಡುತ್ತಿದ್ದ ಜಮಾದಾರ್ ರಾಜೇಂದ್ರ ಕುಮಾರ್ ಎಂಬ ವ್ಯಕ್ತಿ ವಕೀಲರು ನೀಡುವ ಟಿಪ್ಸ್​ ಹಣ ಸ್ವೀಕರಿಸಲು ನ್ಯಾಯಾಲಯದ ಸಮವಸ್ತ್ರಕ್ಕೆ ಪೇಟಿಎಂ ಕ್ಯೂಆರ್ ಕೋಡ್ ಸ್ಕ್ಯಾನ್​ ಪ್ರತಿಯನ್ನು ಸಿಕ್ಕಿಸಿಕೊಂಡಿದ್ದರು. ಇದನ್ನು ಗಮನಿಸಿದ್ದ ನ್ಯಾ.ಅಜಿತ್ ಸಿಂಗ್ ಅವರು ಜಮಾದಾರ್ ರಾಜೇಂದ್ರ ಕುಮಾರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದರು.

ಈ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳ ಸೂಚನೆ ಮೇರೆಗೆ ತಕ್ಷಣದಿಂದಲೇ ರಾಜೇಂದ್ರ ಕುಮಾರ್ ಅವರನ್ನು ಅಮಾನತುಗೊಳಿಸಿ ರಿಜಿಸ್ಟ್ರಾರ್ ಜನರಲ್ ಆಶಿಶ್ ಗಾರ್ಗ್ ಆದೇಶ ಹೊರಡಿಸಿದ್ದಾರೆ. ಅಲ್ಲದೇ, ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಮಹಾನಿರ್ದೇಶಕರಿಗೂ ಸೂಚಿಸಲಾಗಿದೆ.

ಜಮಾದಾರ್ ರಾಜೇಂದ್ರ ಕುಮಾರ್ ಕ್ಯೂಆರ್ ಕೋಡ್‌ನ ವಾಲೆಟ್​ನೊಂದಿಗೆ ಹಲವಾರು ದಿನಗಳಿಂದ ತಿರುಗಾಡುತ್ತಿದ್ದರು. ಕೋರ್ಟ್​ಗೆ ಬರುವ ವಕೀಲರಿಂದ ಟಿಪ್ಸ್​ ರೂಪದಲ್ಲಿ ಹಣ ಸಂಗ್ರಹಿಸುತ್ತಿದ್ದರು. ನಗದು ಹಣ ಕೊಡಲು ಸಾಧ್ಯವಾಗದ ವಕೀಲರಿಂದ ಆನ್‌ಲೈನ್ ಮೂಲಕ ವರ್ಗಾವಣೆ ಮಾಡುವಂತೆ ಕೇಳುತ್ತಿದ್ದರು. ಸಮವಸ್ತ್ರಕ್ಕೆ ಪೇಟಿಎಂ ಕ್ಯೂಆರ್ ಕೋಡ್ ಸಿಕ್ಕಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡಾ ಆಗಿದೆ.

ಇದನ್ನೂ ಓದಿ: 15 ವರ್ಷದ ಮುಸ್ಲಿಂ ಯುವತಿ ತನ್ನ ಆಯ್ಕೆಯ ಹುಡುಗನನ್ನು ಮದುವೆ ಆಗಬಹುದು: ಜಾರ್ಖಂಡ್ ಹೈಕೋರ್ಟ್

Last Updated : Dec 1, 2022, 7:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.