ಪಾಟ್ನಾ(ಬಿಹಾರ್): ಆರ್‌ಎಸ್‌ಎಸ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಪಾಟ್ನಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ(ಎಸ್ಎಸ್‌ಪಿ) ಮಾನವಜೀತ್ ಸಿಂಗ್ ಧಿಲ್ಲೋನ್ ಅವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದು, 24 ಗಂಟೆಯೊಳಗೆ ಉತ್ತರಿಸುವಂತೆ ಸೂಚಿಸಲಾಗಿದೆ. ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಜಿತೇಂದ್ರ ಸಿಂಗ್ ಗಂಗ್ವಾರ್ ನೀಡಿರುವ ನೋಟಿಸ್‌ನಲ್ಲಿ, "ಎಸ್‌ಎಸ್‌ಪಿ ಸಾರ್ವಜನಿಕವಾಗಿ ಏಕೆ ಇಂತಹ ಹೇಳಿಕೆ ನೀಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು" ಎಂದು ತಿಳಿಸಿದ್ದಾರೆ.
ನಿಷೇಧಿತ ಸಂಘಟನೆ ಪಿಎಫ್‌ಐ ಜೊತೆ ಸಂಬಂಧ ಹೊಂದಿರುವ ಮೂವರು ಶಂಕಿತ ಉಗ್ರರನ್ನು ಪಾಟ್ನಾ ಪೊಲೀಸರು ನಿನ್ನೆಯಷ್ಟೇ ಬಂಧಿಸಿದ್ದರು. ಈ ಮೂಲಕ ದೇಶದ್ರೋಹ ಪ್ರಕರಣವನ್ನು ಬಯಲಿಗೆಳೆದಿದ್ದರು. ಇದಾದ ನಂತರ ಎಸ್‌ಎಸ್‌ಪಿ ಧಿಲ್ಲೋನ್ ಅವರು ತೀವ್ರಗಾಮಿ ಸಂಘಟನೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದೊಂದಿಗೆ ಹೋಲಿಸಿ ಮಾಧ್ಯಮಗಳಿಗೆ ಪ್ರಕರಣದ ಮಾಹಿತಿ ನೀಡಿದರು.
-
#WATCH | "They used to mobilize youth from mosques & madrasas towards radicalization. Their modus operandi was to act like an RSS Shakha where lathi training is given…they would call them for physical training but also brainwash & radicalize them," says SSP Patna, Manavjit Singh pic.twitter.com/F6U1wZOwC1
— ANI (@ANI) July 14, 2022 " class="align-text-top noRightClick twitterSection" data="
">#WATCH | "They used to mobilize youth from mosques & madrasas towards radicalization. Their modus operandi was to act like an RSS Shakha where lathi training is given…they would call them for physical training but also brainwash & radicalize them," says SSP Patna, Manavjit Singh pic.twitter.com/F6U1wZOwC1
— ANI (@ANI) July 14, 2022#WATCH | "They used to mobilize youth from mosques & madrasas towards radicalization. Their modus operandi was to act like an RSS Shakha where lathi training is given…they would call them for physical training but also brainwash & radicalize them," says SSP Patna, Manavjit Singh pic.twitter.com/F6U1wZOwC1
— ANI (@ANI) July 14, 2022
ಪೊಲೀಸ್ ಅಧಿಕಾರಿ ಹೇಳಿದ್ದೇನು? "ಈ ತೀವ್ರವಾದಿ ಸಂಘಟನೆಯು ಮೂಲತಃ ಮಸೀದಿ ಮತ್ತು ಮದರಸಾಗಳಲ್ಲಿ ಯುವಕರನ್ನು ಸಜ್ಜುಗೊಳಿಸುತ್ತಿತ್ತು. ಅವರು ನಿರಂತರವಾಗಿ ಮೂಲಭೂತವಾದದ ಕಡೆಗೆ ಕೆಲಸ ಮಾಡುತ್ತಿದ್ದರು. ಅವರ ಕಾರ್ಯವೈಖರಿ ಆರ್‌ಎಸ್‌ಎಸ್‌ನ ಶಾಖೆಯಂತಿದೆ. ಆರ್‌ಎಸ್‌ಎಸ್ ತಮ್ಮ ಕಾರ್ಯಕರ್ತರಿಗೆ ಹೇಗೆ ತರಬೇತಿ ನೀಡುತ್ತಿದೆಯೋ ಅದೇ ರೀತಿ ಪಿಎಫ್‌ಐ ಕೂಡಾ ತರಬೇತಿ ನೀಡುತ್ತಿದೆ. ಪಿಎಫ್‌ಐ ದೈಹಿಕ ತರಬೇತಿಯ ಹೆಸರಿನಲ್ಲಿ ಯುವಕರನ್ನು ಬ್ರೈನ್‌ವಾಶ್ ಮಾಡುವ ಕೆಲಸ ಮಾಡುತ್ತಿದೆ" ಎಂದು ಧಿಲ್ಲೋನ್ ಹೇಳಿದ್ದರು.
ಇದನ್ನೂ ಓದಿ: ಎಬಿವಿಪಿ ಕಾರ್ಯಕರ್ತರು ಸಹ ಕಠಿಣ ಹಾದಿಯಲ್ಲಿ ಸಾಗಿದ್ದಾರೆ : ಆರ್‌ಎಸ್‌ಎಸ್ ಮುಖ್ಯಸ್ಥ
ಎಸ್ಎಸ್ಪಿ ಧಿಲ್ಲೋನ್ ಹೇಳಿಕೆ ದೇಶದ ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸಿದೆ. ರಾಜ್ಯದ ಬಿಜೆಪಿ ನಾಯಕರಾದ ಹರಿ ಭೂಷಣ್ ಠಾಕೂರ್ ಮತ್ತು ನಿಖಿಲ್ ಆನಂದ್ ಅವರು ವಿವಾದಾತ್ಮಕ ಹೇಳಿಕೆಗಾಗಿ ಧಿಲ್ಲೋನ್ರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಎಸ್ಎಸ್ಪಿಯನ್ನು ಕರ್ತವ್ಯದಿಂದ ವಜಾಗೊಳಿಸುವಂತೆಯೂ ಒತ್ತಾಯಿಸಿದ್ದಾರೆ.
ಈ ವಿಷಯದ ಬಗ್ಗೆ ತಕ್ಷಣ ಗಮನ ಹರಿಸುವಂತೆ ಬಿಜೆಪಿ ನಾಯಕರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಮನವಿ ಮಾಡಿದ್ದಾರೆ. ಪಿಎಫ್‌ಐ ಭಯೋತ್ಪಾದಕ ಸಂಘಟನೆಯಾದರೆ, ಆರ್‌ಎಸ್‌ಎಸ್ ಸಾಂಸ್ಕೃತಿಕ ಮತ್ತು ರಾಷ್ಟ್ರ ನಿರ್ಮಾಣ ಸಂಸ್ಥೆಯಾಗಿದೆ. ಧಿಲ್ಲೋನ್ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ ಎಂದು ಬಿಜೆಪಿ ಟೀಕಾ ಪ್ರಹಾರ ನಡೆಸಿದೆ. ಹಿಂದೂಸ್ತಾನಿ ಅವಾಮ್ ಮೋರ್ಚಾ (ಎಚ್‌ಎಎಂ) ಎಸ್‌ಎಸ್‌ಪಿಯ ಹೇಳಿಕೆಯನ್ನು ಸಮರ್ಥಿಸಿಕೊಂಡಿದೆ.
ಎಚ್‌ಎಎಂನ ರಾಷ್ಟ್ರೀಯ ವಕ್ತಾರ ಡ್ಯಾನಿಶ್ ರಿಜ್ವಾನ್ ಮಾತನಾಡಿ, "ಆರ್‌ಎಸ್‌ಎಸ್ ಶಾಖೆಗಳನ್ನು ಹೇಗೆ ಸಂಘಟಿಸುತ್ತದೆಯೋ ಅದೇ ರೀತಿಯಲ್ಲಿ ಪಿಎಫ್‌ಐ ಯುವಕರಿಗೆ ತರಬೇತಿ ನೀಡುತ್ತಿದೆ ಎಂದು ಪಾಟ್ನಾ ಎಸ್‌ಎಸ್‌ಪಿ ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ?. ಆರ್‌ಎಸ್‌ಎಸ್ ಒಂದು ಉಗ್ರಗಾಮಿ ಸಂಘಟನೆ" ಎಂದು ವಾಗ್ದಾಳಿ ನಡೆಸಿದರು.