ETV Bharat / bharat

ಇದು ಮಾದರಿ.. ಜಾತಿ-ಧರ್ಮವಿಲ್ಲದ ಸರ್ಟಿಫಿಕೇಟ್​ ನೀಡಿ ಮಗಳನ್ನು ಶಾಲೆಗೆ ದಾಖಲಿಸಿದ ಪೋಷಕರು!

ಮಕ್ಕಳನ್ನು ಶಾಲೆಗೆ ಸೇರಿಸಲು ಧರ್ಮ ಮತ್ತು ಜಾತಿ ಕಡ್ಡಾಯವಲ್ಲ ಎಂದು 1973 ರ ತಮಿಳುನಾಡು ಸರ್ಕಾರದ ಆದೇಶವನ್ನು ಉಲ್ಲೇಖಿಸಿ ಈ ದಾಖಲಾತಿ ಪಡೆದುಕೊಳ್ಳಲಾಗಿದೆ..

author img

By

Published : May 30, 2022, 5:36 PM IST

‘ಜಾತಿ, ಧರ್ಮವಿಲ್ಲದ’ ಸರ್ಟಿಫಿಕೇಟ್​ ನೀಡಿ ಮಗಳನ್ನು ಶಾಲೆಗೆ ದಾಖಲಿಸಿದ ಪೋಷಕರು!

ಕೊಯಮತ್ತೂರು : ಇಲ್ಲೊಂದು ದಂಪತಿ ತಮ್ಮ ಮೂರೂವರೆ ವರ್ಷದ ಮಗಳಿಗೆ ಯಾವುದೇ 'ಜಾತಿಯೂ ಇಲ್ಲ, ಧರ್ಮವೂ ಇಲ್ಲ' ಎಂಬ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದಾರೆ. ನರೇಶ್ ಕಾರ್ತಿಕ್ ಮತ್ತು ಗಾಯತ್ರಿ ಎಂಬ ದಂಪತಿ ತಮ್ಮ ಮಗಳು ವಿಲ್ಮಾಗಳನ್ನು ದಾಖಲಾತಿ ಮಾಡುವಾಗ ಈ ಮಹತ್ವದ ಕಾರ್ಯ ಮಾಡಿದ್ದಾರೆ.

ಎಲ್ಲಾ ಶಾಲೆಗಳು ಜಾತಿ ಮತ್ತು ಧರ್ಮದ ಪ್ರಮಾಣಪತ್ರವನ್ನು ನೀಡುವಂತೆ ತಿಳಿಸುತ್ತವೆ. ಆದರೆ, ತಮ್ಮ ಮಗಳಿಗೆ ಶಾಲೆಗಳಲ್ಲಿ ಪ್ರೀತಿ ಮತ್ತು ಸಮಾನತೆಯನ್ನು ಕಲಿಸಬೇಕು ಎಂದು ಭಾವಿಸಿರುವ ಪೋಷಕರು, ಆ ಪ್ರಮಾಣಪತ್ರಗಳನ್ನು ನೀಡಲು ಸಿದ್ಧರಿರಲಿಲ್ಲ.

ಆದರೆ, ಇದು ಅವಶ್ಯಕವಾದ ಪರಿಣಾಮ ನರೇಶ್ ಕಾರ್ತಿಕ್ ವಿವಿಧ ಅಧಿಕಾರಿಗಳನ್ನು ಸಂಪರ್ಕಿಸಿದರು. ಅಷ್ಟೇ ಅಲ್ಲ, ಈ ಬಗ್ಗೆ ಜಿಲ್ಲಾಧಿಕಾರಿ ಜಿ ಎಸ್ ಸಮೀರನ್ ಅವರನ್ನೂ ಸಹ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಮಕ್ಕಳನ್ನು ಶಾಲೆಗೆ ಸೇರಿಸಲು ಧರ್ಮ ಮತ್ತು ಜಾತಿ ಕಡ್ಡಾಯವಲ್ಲ ಎಂದು 1973ರ ತಮಿಳುನಾಡು ಸರ್ಕಾರದ ಆದೇಶವನ್ನು ಉಲ್ಲೇಖಿಸಿದ ಡಿಸಿ, ಕಾರ್ತಿಕ್‌ಗೆ ಉತ್ತರ ಕೊಯಮತ್ತೂರು ತಹಶೀಲ್ದಾರ್ ಅವರನ್ನು ಭೇಟಿಯಾಗಲು ತಿಳಿಸಿದ್ದಾರೆ.

ಅಂತೆಯೇ ದಂಪತಿ ತಹಶೀಲ್ದಾರ್ ಅವರನ್ನು ಭೇಟಿ ಆಗಿದ್ದಾರೆ. ಈ ವೇಳೆ ಅವರು ಜಾತಿಯೂ ಇಲ್ಲ, ಧರ್ಮವೂ ಇಲ್ಲ ಎಂಬ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಅವರ ಮಗುವನ್ನು ಜಾತಿ ಹಾಗೂ ಧರ್ಮದಿಂದ ವಿಮುಕ್ತಿಗೊಳಿಸಿದ್ದಾರೆ.

ತಮ್ಮ ಮಗು ಜಾತಿ ಮತ್ತು ಧರ್ಮದ ಆಧಾರದ ಮೇಲೆ ಯಾವುದೇ ಸರ್ಕಾರಿ ಮೀಸಲಾತಿ ಅಥವಾ ಸವಲತ್ತುಗಳನ್ನು ಪಡೆಯಲು ಅರ್ಹರಾಗಿರುವುದಿಲ್ಲ ಎಂದು ಪೋಷಕರಿಗೆ ಈ ವೇಳೆ ತಿಳಿಸಲಾಗಿದೆ. ಅದರಂತೆ ಅಫಿಡವಿಟ್ ಸಹ ಸಲ್ಲಿಸಲಾಗಿದೆ.

ಇದನ್ನೂ ಓದಿ: ಬಳ್ಳಾರಿ: ಬಟ್ಟೆ ತೊಳೆಯಲು ಹೋದ ಬಾಲಕಿಯರು ಕೆರೆಯಲ್ಲಿ ಮುಳುಗಿ ಸಾವು

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.