ಪೋರಬಂದರ್(ಗುಜರಾತ್): ಮೀನುಗಾರಿಕೆಗಾಗಿ ಅರಬ್ಬಿ ಸಮುದ್ರಕ್ಕೆ ಇಳಿದಿದ್ದ ಸುಮಾರು 60 ಮೀನುಗಾರರನ್ನು ಅಪಹರಿಸಿರುವ ಪಾಕಿಸ್ತಾನ ಕಡಲ ಭದ್ರತಾ ಸಂಸ್ಥೆ (Pakistan Maritime Security Agency) 10 ದೋಣಿಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.
ಕಳೆದ 24 ಗಂಟೆಗಳಲ್ಲಿ 13 ಬೋಟ್ಗಳನ್ನು ಪಾಕಿಸ್ತಾನ ವಶಕ್ಕೆ ಪಡೆದಿದೆ. ಮಂಗಳವಾರವಷ್ಟೇ 3 ಬೋಟ್ಗಳು ಮತ್ತು 18 ಮೀನುಗಾರರನ್ನು ಪಾಕಿಸ್ತಾನಕ್ಕೆ ಕರೆದುಕೊಂಡು ಹೋಗಲಾಗಿದೆ. ಸದ್ಯಕ್ಕೆ 60 ಮೀನುಗಾರರು ಮತ್ತು 10 ಬೋಟ್ಗಳನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದೆ.
ಈ ಮೀನುಗಾರರ ಪೈಕಿ ಬಹುತೇಕರು ಗುಜರಾತ್‌ನ ಓಖಾ ಮತ್ತು ಪೋರಬಂದರ್ಗೆ ಸೇರಿದವರು ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಇದನ್ನೂ ಓದಿ: ಚಿನಾರ್ ಕಾರ್ಪ್ಸ್ನ ಫೇಸ್ಬುಕ್, ಇನ್ಸ್ಟಾಗ್ರಾಂ ಮೇಲೆ ನಿರ್ಬಂಧ