ಶಿಮ್ಲಾ ( ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಗೆ ಇಂದು ಮತದಾನ ಮುಗಿದೆ. ಎಲ್ಲ 68 ವಿಧಾನಸಭಾ ಸ್ಥಾನಗಳಿಗೆ ಒಂದೇ ಹಂತದಲ್ಲಿ ನಡೆದ ಚುನಾವಣೆಯಲ್ಲಿ ಶೇ.67 ರಷ್ಟು ಮತದಾನವಾಗಿದೆ.
ಮುಂಜಾನೆ ಚಳಿ ವಾತಾವರಣದ ನಡುವೆಯೂ ಮತದಾರರು ಸಾಲುಗಟ್ಟಿ ನಿಂತು ತಮ್ಮ ಹಕ್ಕು ಚಲಾಯಿಸಿದ್ದಾರೆ. ಮತದಾನ ಆರಂಭವಾದ ಮೊದಲ ಗಂಟೆಯಲ್ಲಿ ಕೇವಲ ಶೇ.4ರಷ್ಟು ಮತದಾನವಾಗಿತ್ತು. ನಂತರ 11 ಗಂಟೆಗೆ ಶೇ.18 ಮತ್ತು ಮಧ್ಯಾಹ್ನ 1 ಗಂಟೆ ವೇಳೆಗೆ ಶೇ.38 ರಷ್ಟು ಮತದಾನವಾಗಿತ್ತು. ಸಂಜೆ 5 ಗಂಟೆ ವೇಳೆಗೆ ಒಟ್ಟಾರೆ ಶೇ.67ರಷ್ಟು ಮತದಾನವಾಗಿದೆ. ಇನ್ನೂ ಶೇಕಡಾವಾರು ಏರಿಕೆಯಾಗುವ ನಿರೀಕ್ಷೆ ಇದೆ.
ಮೈನಸ್ 10 ಡಿಗ್ರಿ ಸೆಲ್ಸಿಯಸ್‌ನಲ್ಲೂ ಮತದಾನ ಮಾಡಲಾಗಿದೆ. ಲಾಹೌಲ್ ಮತ್ತು ಸ್ಪಿತಿ ಜಿಲ್ಲೆಯಲ್ಲಿ ವಿಶ್ವದ ಅತಿ ಎತ್ತರದ ಮತದಾನ ಕೇಂದ್ರ ಎಂದೇ ಹೇಳಲಾದ 15,256 ಅಡಿ ಎತ್ತರ ಪ್ರದೇಶದ ತಾಶಿಗಂಗ್‌ನಲ್ಲಿ ಶೇ.100 ರಷ್ಟು ಮತದಾನವಾಗಿದೆ. ಕಾಜಾದಿಂದ ಸುಮಾರು 34 ಕಿಮೀ ದೂರದಲ್ಲಿರುವ ತಾಶಿಗಾಂಗ್ ಗ್ರಾಮವು ಭಾರತ-ಟಿಬೆಟ್ ಗಡಿಯ ಸಮೀಪವಿರುವ ಸ್ಪಿತಿ ಕಣಿವೆಯಲ್ಲಿನ ಅತಿ ಎತ್ತರದ ಪ್ರದೇಶವಾಗಿದೆ. ಈ ಗ್ರಾಮದಲ್ಲಿ 52 ಮತದಾರರಿದ್ದು, ಬಹುತೇಕರು ಸಾಂಪ್ರದಾಯಿಕ ಉಡುಗೆ ತೊಟ್ಟೇ ಮತಗಟ್ಟೆಗೆ ಆಗಮಿಸಿದ್ದರು.
ಇದನ್ನೂ ಓದಿ: ವೇಗವಾಗಿ ಬೆಳೆದ ಜಗತ್ತಿನ ಜನಸಂಖ್ಯೆ: ಎಂಟು ನೂರು ಕೋಟಿಯತ್ತ ಮಾನವರ ಸಂಖ್ಯೆ!