ನವದೆಹಲಿ: ಆರು ದಿನಗಳ ಲಾಕ್ಡೌನ್ನ ಮೊದಲ ದಿನ ಸೋಮವಾರ ದೆಹಲಿಯ ಬೀದಿಗಳು ಬಿಕೋ ಎನ್ನುತ್ತಿದ್ದವು. ರಸ್ತೆಗಳಲ್ಲಿ ಅದರಲ್ಲೂ ವಿಶೇಷವಾಗಿ ಕೋವಿಡ್ ಚಿಕಿತ್ಸೆಗೆ ಮೀಸಲಿಟ್ಟ ಆಸ್ಪತ್ರೆಗಳ ಬಳಿ ಆ್ಯಂಬುಲೆನ್ಸ್ಗಳ ಸದ್ದು ಮಾತ್ರ ಹೆಚ್ಚಾಗಿ ಕೇಳಿ ಬರುತ್ತಿತ್ತು.
ಕಳೆದ 7 ದಿನಗಳಲ್ಲಿ (ಏಪ್ರಿಲ್ 14 ರಿಂದ 20 ರವರೆಗೆ) ರಾಜಧಾನಿಯಲ್ಲಿ ಮಹಾಮಾರಿಗೆ 1,200ಕ್ಕಿಂತಲೂ ಅಧಿಕ (1,202) ರೋಗಿಗಳು ಬಲಿಯಾಗಿದ್ದಾರೆ. ಮಂಗಳವಾರ ಪ್ರತಿನಿತ್ಯದ ಅತ್ಯಧಿಕ 277 ಸಾವು ಸಂಭವಿಸಿದೆ. ಈ ಮೂಲಕ ದೆಹಲಿಯಲ್ಲಿ ಕೋವಿಡ್ನಿಂದ ಮೃತಪಟ್ಟವರ ಒಟ್ಟು ಸಂಖ್ಯೆ ಇದುವರೆಗೆ 12,638 ಆಗಿದೆ.
ಇದನ್ನೂ ಓದಿ: ಕಳೆದ 24 ಗಂಟೆಯಲ್ಲಿ 2,95,041 ಜನರಿಗೆ ಸೋಂಕು; ಎರಡು ಸಾವಿರಕ್ಕೂ ಹೆಚ್ಚು ಮಂದಿ ಸಾವು
ದೆಹಲಿಯಲ್ಲಿ ಮಂಗಳವಾರ ಅತಿ ಹೆಚ್ಚು 28,395 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ಪ್ರಕಾರ ಸದ್ಯ, ಪಾಸಿಟಿವ್ ಪ್ರಕರಣಗಳ ಪ್ರಮಾಣ ಶೇ. 32.82 ಇದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 85,575 ಇದ್ದು, 40,124 ಜನ ಹೋಂ ಐಸೋಲೇಶನ್ನಲ್ಲಿ ಇದ್ದಾರೆ.
ಸಾವಿನ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದ್ದು, 14 ಏಪ್ರಿಲ್ 2021 ರಂದು 104 ಸಾವು ಸಂಭವಿಸಿದ ಬಳಿಕ ಮೊದಲ ಬಾರಿಗೆ ಮಂಗಳವಾರ 277 ಜನ ಬಲಿಯಾಗಿದ್ದಾರೆ.