ETV Bharat / bharat

ಕೇಬಲ್​ ತುಂಡಾಗಿ ಮೈಮೇಲೆ ಬಿದ್ದ ಲಿಫ್ಟ್‌; ಓರ್ವ ಸಾವು - ETV Bharat kannada News

ಲಿಫ್ಟ್ ಕೇಬಲ್​ ತುಂಡಾಗಿ ಬಿದ್ದು ಅಟೆಂಡೆಂಟ್ ಸಾವನ್ನಪ್ಪಿದ ಘಟನೆ ಕೋಲ್ಕತ್ತಾದಲ್ಲಿ ಸಂಭವಿಸಿದೆ.

Kolkata police housing estate
ಕೋಲ್ಕತ್ತಾ ಪೊಲೀಸ್ ವಸತಿ ಎಸ್ಟೇಟ್
author img

By

Published : Apr 12, 2023, 5:37 PM IST

ಕೋಲ್ಕತ್ತಾ : ಇಲ್ಲಿನ ಪಾರ್ಕ್ ಸ್ಟ್ರೀಟ್​ನ ಕಟ್ಟಡವೊಂದರಲ್ಲಿ ಲಿಫ್ಟ್​ ದುರಸ್ತಿ ಕೆಲಸ ನಡೆಯುತ್ತಿದ್ದಾಗ ಕೇಬಲ್​ ತುಂಡಾಗಿ ವ್ಯಕ್ತಿಯೊಬ್ಬರ ಮೈಮೇಲೆ ಲಿಫ್ಟ್ ಬಿದ್ದು ಅವರು ಅಸುನೀಗಿದ್ದಾರೆ. ಮೃತರನ್ನು ಇಕ್ಬಲ್​ಪುರ ನಿವಾಸಿ ರಹೀಮ್​ ಖಾನ್ ಎಂದು ಪೊಲೀಸರು ಗುರುತಿಸಿದ್ದಾರೆ.

ರಹೀಮ್​ ಖಾನ್​ ಪಾರ್ಕ್ ಸ್ಟ್ರೀಟ್‌ನ ಓಮ್ ಟವರ್‌ ಕಟ್ಟಡದಲ್ಲಿ ಲಿಫ್ಟ್ ಅಟೆಂಡೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಕಟ್ಟಡದ 3ನೇ ಮಹಡಿಯಲ್ಲಿ ಲಿಫ್ಟ್ ದುರಸ್ತಿ ಕೆಲಸ ನಡೆಯುತ್ತಿತ್ತು. ಕೆಲಸ ಸರಿಯಾಗಿ ನಡೆಯುತ್ತಿದೆಯೇ ಎಂದು ಗಮನಿಸುತ್ತಿದ್ದರು. ಈ ಸಂದರ್ಭದಲ್ಲಿ ಲಿಫ್ಟ್ ಕೇಬಲ್ ತುಂಡಾಗಿ ಮೂರನೇ ಮಹಡಿಯಿಂದ ನೇರವಾಗಿ ರಹೀಮ್ ಮೈಮೇಲೆ ಮೇಲೆ ಬಿದ್ದಿದೆ. ಪರಿಣಾಮ ಅವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : ಡಿವೈಡರ್​ಗೆ ಗುದ್ದಿ ಪಲ್ಟಿಯಾದ ಬಸ್​.. 15 ಪ್ರಯಾಣಿಕರಿಗೆ ಗಾಯ: ಭೀಕರ ವಿಡಿಯೋ

ಮಾಹಿತಿ ತಿಳಿದು ಪಾರ್ಕ್ ಸ್ಟ್ರೀಟ್ ಪೊಲೀಸ್ ಠಾಣೆ ಮತ್ತು ಷೇಕ್ಸ್‌ಪಿಯರ್ ಸರನಿ ಠಾಣೆಯ ಪೊಲೀಸರು, ಹಾಗು ವಿಪತ್ತು ನಿರ್ವಹಣಾ ಪಡೆ ಘಟನಾ ಸ್ಥಳಕ್ಕೆ ಬಂದು ಮೃತದೇಹವನ್ನು ಹೊರತೆಗೆದರು. ಮತ್ತೊಂದೆಡೆ, ಓಮ್ ಟವರ್‌ ಕಟ್ಟಡದಲ್ಲಿ ವಾಸವಿರುವ ಕುಟುಂಬಗಳು ಲಿಫ್ಟ್ ನಿರ್ವಹಣೆ ಮತ್ತು ಅದರ ದುರಸ್ತಿ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ದೂರಿದ್ದಾರೆ.

ಇದನ್ನೂ ಓದಿ : ಎಟಿಎಂಗೆ ಹಾಕಲು ತಂದ 1.5 ಕೋಟಿ ಹಣದೊಂದಿಗೆ ಕಾರು ಚಾಲಕ ಪರಾರಿ

ಲಿಫ್ಟ್ ಗುಂಡಿಗೆ ಬಿದ್ದ ಬಾಲಕಿ: ಫೆಬ್ರವರಿ 24 ರಂದು ರಾತ್ರಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಲಿಫ್ಟ್​ ಗುಂಡಿಗೆ ಬಾಲಕಿ ಬಿದ್ದು ಸಾವನ್ನಪ್ಪಿದ ಘಟನೆ ಬೆಂಗಳೂರಿನ ಸುಲ್ತಾನ್​ ಪೇಟೆಯಲ್ಲಿ ನಡೆದಿತ್ತು. ಮಹೇಶ್ವರಿ (6 ವರ್ಷ) ಮೃತಪಟ್ಟ ಬಾಲಕಿ. ಆಟವಾಡುತ್ತಾ ಕಾಮಗಾರಿ ನಡೆಯುತ್ತಿದ್ದ ಐದಂತಸ್ತಿನ ಕಟ್ಟಡದಲ್ಲಿ ಲಿಫ್ಟ್ ನಿರ್ಮಾಣಕ್ಕೆ ತೋಡಲಾಗಿದ್ದ ಗುಂಡಿಯ ನೀರಿನಲ್ಲಿ ಬಿದ್ದು ಸಾವನ್ನಪ್ಪಿದ್ದಳು.

ಇದನ್ನೂ ಓದಿ: ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಲಿಫ್ಟ್ ಗುಂಡಿಗೆ ಬಿದ್ದು ಬಾಲಕಿ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.