ETV Bharat / bharat

25,000ಕ್ಕೂ ಹೆಚ್ಚು ಹಾಡುಗಳ ದನಿಯಾಗಿದ್ದ ಗಾನಕೋಗಿಲೆಗೆ ಈ 5 ಹಾಡುಗಳು ಬಹಳಾನೇ ಅಚ್ಚುಮೆಚ್ಚು..

ಸುಮಾರು 36 ಭಾರತೀಯ ಭಾಷೆಗಳಲ್ಲಿ 25 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದ ಲತಾ ಮಂಗೇಶ್ಕರ್ ಅವರಿಗೆ ಈ 5 ಹಾಡುಗಳು ಅಚ್ಚುಮೆಚ್ಚಿನ ಹಾಡುಗಳಾಗಿದ್ದವು.

Lata Mangeshkar favourite songs
ಲತಾ ಮಂಗೇಶ್ಕರ್ ಮೆಚ್ಚಿನ ಹಾಡುಗಳು
author img

By

Published : Feb 6, 2022, 12:07 PM IST

ಅನಾರೋಗ್ಯದಿಂದ ಬಳಲುತ್ತಿದ್ದ ಭಾರತದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಚಿಕಿತ್ಸೆ ಫಲಿಸದೆ ಇಂದು ಇಹಲೋಕ ತ್ಯಜಿಸಿದ್ದಾರೆ. ಆದರೆ ಅವರ ನೆನಪು, ಆ ದನಿ ಮಾತ್ರ ಎಲ್ಲರ ಮನಸ್ಸಿನಲ್ಲೂ ಅಚ್ಚಳಿಯದೇ ಉಳಿಯಲಿದೆ.

ಭಾರತ ಸಿನಿಮಾ ರಂಗದ ಹಿನ್ನೆಲೆ ಗಾಯನ ಕ್ಷೇತ್ರದ ಮಹಾನ್ ಸಾಧಕಿಯಾಗಿರುವ ಲತಾ ಮಂಗೇಶ್ಕರ್​ ಗಾನ ಕೋಗಿಲೆ ಎಂದೇ ಹೆಸರುವಾಸಿ. ಇವರಿಗೆ ಪ್ರತಿಸ್ಪರ್ಧಿಗಳಿಲ್ಲವೆಂದರೆ ತಪ್ಪಾಗಲ್ಲ. ಸುಮಾರು 36 ಭಾರತೀಯ ಭಾಷೆಗಳಲ್ಲಿ 25,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿ, ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ತಮ್ಮ ಹೆಸರು ದಾಖಲಾಗುವಂತೆ ಮಾಡಿದ್ದಾರೆ.

ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತಿ ಹೊಂದಿದ್ದ ಲತಾ ಮಂಗೇಶ್ಕರ್ ಸಾಧನೆ ಅಪಾರ. ಇವರ ಹಾಡುಗಳೆಲ್ಲವೂ ಇವರಿಗೆ ಅಚ್ಚುಮೆಚ್ಚು. ಆದ್ರೆ ಇವರು ಹಾಡಿದ ಹಾಡುಗಳಲ್ಲಿ 5 ಹಾಡುಗಳು ಮಾತ್ರ ಸಾರ್ವಕಾಲಿಕ ಮೆಚ್ಚಿನವುಗಳಾಗಿವೆ. ಅವುಗಳೆಂದರೆ,

1. ಖ್ವಾಬ್ ಬನ್​​ಕರ್ ಕೋಯಿ ಆಯೇಗಾ (ರಜಿಯಾ ಸುಲ್ತಾನ್)

2. ಚುನ್ರಿ ಸಂಭಾಲ್ ಗೋರಿ (ಬಾಹರೋನ್ ಕೆ ಸಪ್ನೆ)

3. ಬರ್ಸೆ ಘನ್ ಸಾರಿ ರಾತ್ (ತರಂಗ್)

4. ತು ಆಜ್ ಅಪ್ನಿ ಹಾತ್ ಸೆ ಕುಚ್ ಬಿಗ್ಡಿ ಸವಾರ್​ ದೇ (ಡಾಕು)

5. ರಾಜಾ ಬೇಟಾ ಸೋಯಾ ಮೇರಾ (ರಾಜಾ ಹರಿಶ್ಚಂದ್ರ)

ಇದನ್ನೂ ಓದಿ: ಹೀಗಿತ್ತು ಗಾಯನ ಲೋಕದ ಸಾಮ್ರಾಜ್ಞಿ ಲತಾ ಮಂಗೇಶ್ಕರ್​ರ ಜೀವನ ಮತ್ತು ಸಾಧನೆ..

ಗಾನ ಕೋಗಿಲೆ ಇಂದು ನಮ್ಮೊಂದಿಗಿಲ್ಲ. ಆದ್ರೆ ಭಾರತ ಸಿನಿಮಾ ರಂಗದ ಚರಿತ್ರೆಯ ಅತ್ಯಂತ ಪ್ರಮುಖ ಭಾಗವಾಗಿ ಲತಾ ಮಂಗೇಶ್ಕರ್ ಅವರ ಹೆಸರು ಎಂದಿಗೂ ಚಿರಸ್ಥಾಯಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.