ETV Bharat / bharat

ಇನ್ಮುಂದೆ ಡಿಎಲ್​ ಡಿಜಿಟಲ್ ಮೋಡ್‌ನಲ್ಲಿ ಲಭ್ಯ: ಪಾಸ್​ or ಫೇಲ್​ ಎಂಬುದನ್ನು ತಂತ್ರಜ್ಞಾನವೇ ನಿರ್ಧರಿಸುತ್ತದೆ!

ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್‌ನಲ್ಲಿ ಈ ತಂತ್ರಜ್ಞಾನ ಅಳವಡಿಸಿರುವುದರಿಂದ ಚಾಲನಾ ಕೌಶಲ್ಯದ ಬಗ್ಗೆ ಕ್ಯಾಮರಾಗಳು, ಸೆನ್ಸರ್‌ಗಳು ಮತ್ತು ಕಂಪ್ಯೂಟರ್‌ಗಳು ಮಾಹಿತಿ ನೀಡಿ ಡಿಎಲ್​ ಕೊಡಬೇಕೋ ಬೇಡವೋ ಎಂಬ ಬಗ್ಗೆ ಅವೇ ನಿರ್ಧಾರ ಮಾಡುತ್ತವಂತೆ.

ಇನ್ಮುಂದೆ ಡಿಎಲ್​ ಡಿಜಿಟಲ್ ಮೋಡ್‌ನಲ್ಲಿ ಲಭ್ಯ
ಇನ್ಮುಂದೆ ಡಿಎಲ್​ ಡಿಜಿಟಲ್ ಮೋಡ್‌ನಲ್ಲಿ ಲಭ್ಯ
author img

By

Published : Feb 18, 2022, 7:58 PM IST

ಭುವನೇಶ್ವರ (ಒಡಿಶಾ): ಚಾಲನಾ ಪರವಾನಗಿಗಾಗಿ ಭಾರಿ ಲಂಚ ಕೊಡಬೇಕು ಎಂಬುದು ಸಾಮಾನ್ಯವಾಗಿ ಕೇಳಿ ಬರುವ ಗಂಭೀರ ಆರೋಪ. ಅದರಲ್ಲೂ ನ್ಯಾಯಯುತವಾಗಿ ಹೋದರೆ ಚಾಲನೆ ಮಾಡುವುದಕ್ಕೆ ಬರುವುದೇ ಇಲ್ಲ ಎಂದು ಹೇಳಿ ಫೇಲ್ ಮಾಡಿ ಕಳುಹಿಸುವುದೂ ಉಂಟು ಎಂದು ಹೇಳಲಾಗುತ್ತದೆ. ಆದರೆ, ಈ ನಿಯಮ ಇದಕ್ಕೆಲ್ಲಾ ಬ್ರೇಕ್​ ಹಾಕಲಿದೆ.

ಚಾಲನಾ ಪರವಾನಗಿ ಇನ್ಮುಂದೆ ಈ ರಾಜ್ಯದಲ್ಲಿ ಡಿಜಿಟಲ್ ಮೋಡ್‌ನಲ್ಲಿ ಲಭ್ಯವಾಗಲಿದೆ. ಎಲ್ಲ ಆರ್​ಟಿಒ ಪರೀಕ್ಷಾ ಕೇಂದ್ರಗಳಲ್ಲಿ ADTS ಎಂಬ ತಂತ್ರಜ್ಞಾನವನ್ನು ಅನುಷ್ಠಾನ ಮಾಡಲಾಗುತ್ತದೆ. ಮೊದಲ ಹಂತದಲ್ಲಿ ಅನುಗುಲ್, ಬರಿಪದ, ಭದ್ರಕ್, ಬಲಂಗೀರ್, ದಿಯೋಗಢ, ಧೆಂಕನಲ್, ಗಂಜಾಂ, ನಯಾಗಢ, ಫುಲ್ಬನಿ, ರಾಯರಂಗ್‌ಪುರ್, ರೂರ್ಕೆಲಾ, ಸುಂದರ್‌ಗಢ, ತಾಲ್ಚೆರ್, ಕೆಂದುಜಾರ್, ತಾಲ್ಚೆರ್, ನಬರಂಗ್‌ಪುರ್ ಮತ್ತು ಸೋನೆಪುರ್​ನಲ್ಲಿ ಈ ತಂತ್ರಜ್ಞಾನ ಅಳವಡಿಸಲಾಗಿದೆ.

ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್‌ನಲ್ಲಿ ಈ ತಂತ್ರಜ್ಞಾನ ಅಳವಡಿಸಿರುವುದರಿಂದ ಚಾಲನಾ ಕೌಶಲ್ಯದ ಬಗ್ಗೆ ಕ್ಯಾಮರಾಗಳು, ಸೆನ್ಸರ್‌ಗಳು ಮತ್ತು ಕಂಪ್ಯೂಟರ್‌ಗಳು ಈ ಬಗ್ಗೆ ಮಾಹಿತಿ ನೀಡಿ ಡಿಎಲ್​ ಕೊಡಬೇಕೋ ಬೇಡವೋ ಎಂಬ ಬಗ್ಗೆ ನಿರ್ಧಾರ ಮಾಡುತ್ತವಂತೆ.

ಇನ್ಮುಂದೆ ಡಿಎಲ್​ ಡಿಜಿಟಲ್ ಮೋಡ್‌ನಲ್ಲಿ ಲಭ್ಯ
ಇನ್ಮುಂದೆ ಡಿಎಲ್​ ಡಿಜಿಟಲ್ ಮೋಡ್‌ನಲ್ಲಿ ಲಭ್ಯ

ರಸ್ತೆ ಅಪಘಾತಗಳ ಅಪಾಯವನ್ನು ಕಡಿಮೆ ಮಾಡಲು ಮತ್ತು ಹಸ್ತಚಾಲಿತ ತಪಾಸಣೆ ಮತ್ತು ಮಾನವ ಹಸ್ತಕ್ಷೇಪವನ್ನು ಕಡಿಮೆ ಮಾಡಲು ಇಲಾಖೆಯು ರಾಜ್ಯದ ವಿವಿಧ ಭಾಗಗಳಲ್ಲಿ ಈ ಸ್ವಯಂಚಾಲಿತ ಚಾಲನಾ ಪರೀಕ್ಷಾ ವ್ಯವಸ್ಥೆಗಳನ್ನು ಸ್ಥಾಪಿಸಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಮಹಿಳೆಯರಿಗೆ ತಿಂಗಳಿಗೆ ₹1,100 ಜತೆಗೆ 8 ಸಿಲಿಂಡರ್‌ ಉಚಿತ : ಪಂಜಾಬ್​ ಚುನಾವಣೆಗೆ ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್​

ಈ ವ್ಯವಸ್ಥೆಯು ಅರ್ಜಿದಾರರ ಚಾಲನಾ ಕೌಶಲ್ಯವನ್ನು ಪರಿಶೀಲಿಸುವುದಲ್ಲದೇ, ಪರವಾನಗಿಗಳ ವಿತರಣೆಯ ಪಾರದರ್ಶಕತೆ ಖಚಿತಪಡಿಸುತ್ತದೆ. ಹೈ ಡೆಫಿನಿಷನ್ ಕ್ಯಾಮೆರಾಗಳೊಂದಿಗೆ ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾದ ಈ ವ್ಯವಸ್ಥೆಯು ಅರ್ಜಿದಾರರಿಗೆ ಅಗತ್ಯವಾದ ಚಾಲನಾ ಕೌಶಲ್ಯಗಳನ್ನು ನಿರ್ಣಯಿಸಲು ಪ್ರಮುಖ ಪಾತ್ರ ನಿರ್ವಹಿಸುತ್ತವೆ.

ಅಭ್ಯರ್ಥಿಗಳ ಕೌಶಲ್ಯ ಪರೀಕ್ಷೆಯಲ್ಲಿ ಸೀಟ್ ಬೆಲ್ಟ್, ಲೇನ್ ಬದಲಾವಣೆ, ಡ್ರೈವಿಂಗ್, ಸ್ಟಾಪ್ ಲೈನ್, ಅಪ್ ಗ್ರೇಡಿಯಂಟ್, ರಿವರ್ಸ್ - ಎಸ್ ಮತ್ತು ಟ್ರಾಫಿಕ್ ಜಂಕ್ಷನ್‌ನಂತಹ ನಿಯತಾಂಕಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಚಾಲನಾ ಪರೀಕ್ಷೆಯಲ್ಲಿ ಪಾಸ್ ಅಥವಾ ಫೇಲ್ ಎಂಬ ಬಗ್ಗೆ ಮಾಹಿತಿ ನೀಡಲು ವೇರಿಯಬಲ್ ಮೆಸೇಜಿಂಗ್ ಬೋರ್ಡ್ ಅನ್ನು ಪ್ರತಿ ಪರೀಕ್ಷಾ ಟ್ರ್ಯಾಕ್‌ನಲ್ಲಿ ಇರಿಸಲಾಗಿದೆ.

ಈ ತಂತ್ರಜ್ಞಾನದಿಂದ ಕೇವಲ 10 ಸೆಕೆಂಡುಗಳಲ್ಲಿ ಫಲಿತಾಂಶವನ್ನು ತಿಳಿಯಬಹುದಾಗಿದೆ. ಸಂಬಂಧಿತ ಪರೀಕ್ಷೆಯನ್ನು ಪೂರ್ಣಗೊಳಿಸಿದ ನಂತರ, ಅಭ್ಯರ್ಥಿಯ ಸ್ಮಾರ್ಟ್ಫೋನ್​ಗೆ ಫಲಿತಾಂಶ ರವಾನೆಯಾಗುತ್ತದೆ. ಈ ಫಲಿತಾಂಶ ನೋಡಿಕೊಂಡು ಮುಂದಿನ ಪರೀಕ್ಷೆಗೆ ಹೋಗಬೇಕೋ ಬೇಡೋ ಎಂಬ ತೀರ್ಮಾನ ಮಾಡಲಾಗುತ್ತದೆ. ಹೀಗೆ ಪ್ರತಿ ಹಂತ ಪರೀಕ್ಷೆಯಲ್ಲೂ ಫಲಿತಾಂಶ ಬರಲಿದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.