ಭುವನೇಶ್ವರ: 14 ದಿನಗಳ ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಎಲ್ಲಾ ನಗರ ಪಾಕೆಟ್‌ಗಳಲ್ಲಿ ಪ್ರಾಣಿಗಳಿಗೆ ಆಹಾರವನ್ನು ನೀಡಲು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಭಾನುವಾರ ಮಂಜೂರು ಮಾಡಿದ್ದಾರೆ.
ಸಾಂಕ್ರಾಮಿಕ ಕೊರೊನಾ ರೋಗವನ್ನು ನಿಯಂತ್ರಿಸಲು ಈಗ ರಾಜ್ಯಾದ್ಯಂತ ಲಾಕ್‌ಡೌನ್ ಹೇರಲಾಗಿದೆ. ಆದ್ದರಿಂದ ನಾಯಿಗಳು ಮತ್ತು ದನಕರುಗಳು ಆಹಾರದಿಂದ ವಂಚಿತವಾಗುತ್ತಿವೆ. ಪ್ರಾಣಿಗಳ ಆಹಾರಕ್ಕಾಗಿ ಸಿಎಂ ಪರಿಹಾರ ನಿಧಿಯಿಂದ 60 ಲಕ್ಷ ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
ಐದು ನಗರಸಭೆ, 48 ಪುರಸಭೆಗಳು ಮತ್ತು 61 ಅಧಿಸೂಚಿತ ಪ್ರದೇಶ ಮಂಡಳಿಗಳಲ್ಲಿ (ಎನ್‌ಎಸಿ) ಈ ಹಣ ಲಭ್ಯವಾಗಲಿದೆ ಎಂದು ನಗರ ಸ್ಥಳೀಯ ಸಂಸ್ಥೆಗಳು ವಿವಿಧ ಸ್ವಯಂಸೇವಾ ಸಂಸ್ಥೆಗಳ ಮೂಲಕ ಪ್ರಾಣಿಗಳಿಗೆ ಆಹಾರವನ್ನು ಒದಗಿಸಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಚಂಡಿಕೋಲೆ ಪ್ರದೇಶದ ಮಹಾ ವಿನಾಯಕ್ ದೇವಸ್ಥಾನದಲ್ಲಿ ಸ್ಥಳೀಯ ಆಡಳಿತವು ಭಾನುವಾರ ಕೋತಿಗಳು, ನಾಯಿಗಳು ಮತ್ತು ಹಸುಗಳಿಗೆ ಆಹಾರವನ್ನು ವಿತರಿಸಿದೆ ಎಂದು ಜಾಜ್‌ಪುರ ಜಿಲ್ಲೆಯ ವರದಿಯೊಂದು ತಿಳಿಸಿದೆ.
ಮೇ 5 ರಿಂದ ಪ್ರಾರಂಭವಾದ ಲಾಕ್‌ಡೌನ್ ಹಂತದಲ್ಲಿ ಪ್ರಾಣಿಗಳಿಗೆ ಆಹಾರವನ್ನು ನೀಡುವಂತೆ ಜಿಲ್ಲಾಡಳಿತ ಜನರಿಗೆ ಮನವಿ ಮಾಡಿದೆ.
ಕಳೆದ ಬಾರಿ ಲಾಕ್ ಡೌನ್ ಸಮಯದಲ್ಲಿ ಒಡಿಶಾದಲ್ಲಿ ಸಮುದಾಯ ಪ್ರಾಣಿಗಳಿಗೆ ಆಹಾರಕ್ಕಾಗಿ ಹಣವನ್ನು ಹಂಚಿಕೆ ಮಾಡಿದ್ದಕ್ಕಾಗಿ ಪಟ್ನಾಯಕ್ ಅವರಿಗೆ ಪ್ರಾಣಿ ಹಕ್ಕುಗಳ ಸಂಸ್ಥೆ ಪೆಟಾ ಇಂಡಿಯಾ ಪ್ರಶಸ್ತಿ ನೀಡಿತು.