ETV Bharat / bharat

'ಗರೀಬ್ ಕಲ್ಯಾಣ್ ಯೋಜನೆ ವಿಸ್ತರಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ'

ಓಎಂಎಸ್​ಎಸ್​ (ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ) ಆಹಾರ ಧಾನ್ಯಗಳ ವಿಲೇವಾರಿಯು ಈ ವರ್ಷ ನಿಧಾನವಾಗಿ ಪ್ರಗತಿಯತ್ತ ಸಾಗುತ್ತಿದೆ ಎಂದು ಕೇಂದ್ರ ಆಹಾರ ಇಲಾಖೆಯ ಕಾರ್ಯದರ್ಶಿ ಸುಧಾಂಶು ಪಾಂಡೆ ತಿಳಿಸಿದ್ದಾರೆ.

Sudhanshu Pandey,
ಆಹಾರ ಇಲಾಖೆಯ ಕಾರ್ಯದರ್ಶಿ ಸುಧಾಂಶು ಪಾಂಡೆ
author img

By

Published : Nov 5, 2021, 6:09 PM IST

ನವದೆಹಲಿ: ಪ್ರಸ್ತುತ ದೇಶದ ಆರ್ಥಿಕತೆ ಚೇತರಿಕೆ ಹಂತದಲ್ಲಿದೆ. ಹೀಗಾಗಿ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ (ಪಿಎಂಜಿಕೆಎವೈ)ಯನ್ನು ನವೆಂಬರ್ 30ರ ನಂತರ ವಿಸ್ತರಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಆಹಾರ ಇಲಾಖೆಯ ಕಾರ್ಯದರ್ಶಿ ಸುಧಾಂಶು ಪಾಂಡೆ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್-19ನಿಂದ ಬಡಜನರಿಗೆ ಉಂಟಾದ ತೊಂದರೆ ನಿವಾರಿಸಲು ಈ ಯೋಜನೆಯನ್ನು ಮಾರ್ಚ್ 2020 ರಲ್ಲಿ ಘೋಷಿಸಲಾಯಿತು. ಆರಂಭದಲ್ಲಿ, ಈ ಯೋಜನೆಯನ್ನು ಏಪ್ರಿಲ್-ಜೂನ್ 2020 ಅವಧಿಗೆ ವಿಸ್ತರಿಸಲಾಯಿತು. ನಂತರ ಅದನ್ನು ನವೆಂಬರ್ 30 ರವರೆಗೆ ಮುಂದೂಡಲಾಗಿತ್ತು ಎಂದರು.

ಆರ್ಥಿಕತೆಯು ಪುನಶ್ಚೇತನಗೊಳ್ಳುತ್ತಿದೆ ಮತ್ತು ನಮ್ಮ ಓಎಂಎಸ್​ಎಸ್​ (ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ) ಆಹಾರ ಧಾನ್ಯಗಳ ವಿಲೇವಾರಿಯು ಈ ವರ್ಷ ನಿಧಾನವಾಗಿ ಪ್ರಗತಿಯತ್ತ ಸಾಗುತ್ತಿದೆ. ಆದ್ದರಿಂದ, PMGKAY ವಿಸ್ತರಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದರು.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) ಅಡಿಯಲ್ಲಿ ಗುರುತಿಸಲಾದ 80 ಕೋಟಿ ಪಡಿತರ ಚೀಟಿದಾರರಿಗೆ ಸರ್ಕಾರವು ಉಚಿತ ಪಡಿತರ ಪೂರೈಸುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೇದಾರಧಾಮ್​ ಅಭಿವೃದ್ಧಿ ಕಾಮಗಾರಿಗಳಿಂದ ಮತ್ತೆ ಮೊದಲಿನ ರೂಪ ಪಡೆದಿದೆ: ಪ್ರಧಾನಿ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.