ETV Bharat / bharat

ಯಾವುದೇ ವ್ಯಕ್ತಿಯನ್ನು ಲಸಿಕೆ ಹಾಕಿಸಿಕೊಳ್ಳುವಂತೆ ಒತ್ತಾಯಿಸುವಂತಿಲ್ಲ: ಸುಪ್ರೀಂಕೋರ್ಟ್​ - Supereme Court

ಲಸಿಕೆ ಹಾಕಿಸಿಕೊಂಡ ಜನರಿಗಿಂತ ಲಸಿಕೆ ಹಾಕಿಸಿಕೊಳ್ಳದ ಜನರು ಹೆಚ್ಚು ವೈರಸ್ ಹರಡಲು ಕಾರಣರಾಗುತ್ತಾರೆ ಎಂಬುದನ್ನು ಸಾಬೀತುಪಡಿಸಲು ಸರ್ಕಾರಗಳು ಯಾವುದೇ ದಾಖಲೆಗಳನ್ನು ನೀಡಿಲ್ಲ. ಲಸಿಕೆ ಹಾಕಿಸಿಕೊಳ್ಳದ ಜನರನ್ನು ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಿಸದಂತೆ ನಿರ್ಬಂಧಿಸಬಾರದು ಎಂದು ಸುಪ್ರೀಂಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ.

Supereme Court
ಸುಪ್ರೀಂ ಕೋರ್ಟ್​
author img

By

Published : May 2, 2022, 12:29 PM IST

Updated : May 2, 2022, 1:28 PM IST

ನವದೆಹಲಿ: ಯಾವುದೇ ವ್ಯಕ್ತಿಯನ್ನು ಕೋವಿಡ್​ ಲಸಿಕೆ ಹಾಕಿಸಿಕೊಳ್ಳುವಂತೆ ಬಲವಂತ ಮಾಡುವ ಹಾಗಿಲ್ಲ. ಪ್ರಸ್ತುತವಿರುವ ಸರ್ಕಾರದ ಕೋವಿಡ್​-19 ಲಸಿಕೆ ನೀತಿ ಅನಿಯಂತ್ರಿತವಲ್ಲ ಎಂದು ಸೋಮವಾರ ಸುಪ್ರೀಂಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ಬಿ.ಆರ್.ಗವೈ ಅವರಿದ್ದ ದ್ವಿಸದಸ್ಯ ಪೀಠ, ವಿವಿಧ ಸಂಸ್ಥೆಗಳು ಮತ್ತು ಸರ್ಕಾರಗಳು ಲಸಿಕೆ ಹಾಕಿಸಿಕೊಳ್ಳದ ಜನರ ಮೇಲೆ ನಿರ್ಬಂಧಗಳನ್ನು ವಿಧಿಸಿರುವುದು ಸರಿಯಲ್ಲ. ಕೋವಿಡ್​ ಪಾಸಿಟಿವ್​ ಸಂಖ್ಯೆ ಕಡಿಮೆ ಇರುವವರೆಗೆ ರಾಜ್ಯ ಸರ್ಕಾರಗಳು ಅಂತಹ ನಿರ್ಬಂಧಗಳನ್ನು ತೆಗೆದುಹಾಕಬೇಕು ಎಂದು ಸೂಚಿಸಿತು.

ದೈಹಿಕ ಸ್ವಾತಂತ್ರ್ಯ/ದೈಹಿಕ ಸಮಗ್ರತೆ ಸಾಂವಿಧಾನಿಕ ಹಕ್ಕು. ಆದ್ದರಿಂದ ಯಾವುದೇ ವ್ಯಕ್ತಿಯನ್ನು ಲಸಿಕೆ ಹಾಕಿಸಿಕೊಳ್ಳುವಂತೆ ಬಲವಂತಪಡಿಸಲು ಸಾಧ್ಯವಿಲ್ಲ. ಕೋವಿಡ್ ವ್ಯಾಕ್ಸಿನೇಷನ್‌ನ ಪ್ರತಿಕೂಲ ಘಟನೆಗಳ ದತ್ತಾಂಶವನ್ನು ಸಾರ್ವಜನಿಕಗೊಳಿಸುವಂತೆಯೂ ಕೋರ್ಟ್ ಕೇಂದ್ರಕ್ಕೆ ನಿರ್ದೇಶಿಸಿದೆ.

ಲಸಿಕೆ ಹಾಕಿಸಿಕೊಂಡ ಜನರಿಗಿಂತ ಲಸಿಕೆ ಹಾಕಿಸಿಕೊಳ್ಳದ ಜನರು ಹೆಚ್ಚು ವೈರಸ್ ಹರಡಲು ಕಾರಣರಾಗುತ್ತಾರೆ ಎಂಬುದನ್ನು ಸಾಬೀತುಪಡಿಸಲು ಸರ್ಕಾರಗಳು ಯಾವುದೇ ದಾಖಲೆಗಳನ್ನು ನೀಡಿಲ್ಲ. ಲಸಿಕೆ ಹಾಕಿಸಿಕೊಳ್ಳದ ಜನರನ್ನು ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಿಸದಂತೆ ನಿರ್ಬಂಧಿಸಬಾರದು ಎಂದೂ ಕೋರ್ಟ್ ಹೇಳಿತು.

ಕೋವಿಡ್ ಲಸಿಕೆಗಳ ಕ್ಲಿನಿಕಲ್ ಪ್ರಯೋಗಗಳು ಮತ್ತು ಪ್ರತಿಕೂಲ ಪರಿಣಾಮಗಳ ಡೇಟಾವನ್ನು ಕೋರಿ ಮತ್ತು ಕೆಲವು ರಾಜ್ಯ ಸರ್ಕಾರಗಳು ಹೊರಡಿಸಿದ ಲಸಿಕೆ ಕಡ್ಡಾಯ ಆದೇಶಗಳನ್ನು ಪ್ರಶ್ನಿಸಿ ನ್ಯಾಷನಲ್​ ಟೆಕ್ನಿಕಲ್​ ಅಡ್ವೈಸರಿ ಗ್ರೂಪ್​ ಆನ್​ ಇಮ್ಯುನೈಸೇಶನ್​ನ ಮಾಜಿ ಸದಸ್ಯ ಜಾಕೋಬ್ ಪುಲಿಯೆಲ್ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್‌ ಈ ಆದೇಶ ನೀಡಿತು. ಪುಲಿಯೆಲ್ ಪರ ವಕೀಲ ಪ್ರಶಾಂತ್ ಭೂಷಣ್ ವಾದ ಮಂಡಿಸಿದ್ದರು.

ವಿಚಾರಣೆಯ ಸಂದರ್ಭದಲ್ಲಿ, ಮಾರ್ಚ್ 13ರ ವೇಳೆಗೆ 180 ಕೋಟಿ ಡೋಸ್ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. ಪ್ರತಿಕೂಲ ಘಟನೆಗಳು ಮಾರ್ಚ್ 12ರ ವೇಳೆಗೆ 77,314 ಆಗಿದ್ದು, ಒಟ್ಟು ಲಸಿಕೆ ಪಡೆದವರ ಸಂಖ್ಯೆಯ ಶೇ 0.004 ಆಗಿದೆ ಎಂದು ಕೇಂದ್ರವು ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ಸಲ್ಲಿಸುವ ನೆಪದಲ್ಲಿ ಯಾರೂ ಪ್ರತ್ಯೇಕವಾದ ಕ್ಲಿನಿಕಲ್ ಡೇಟಾವನ್ನು ಬೇಡುವಂತಿಲ್ಲ ಎಂದು ಕೇಂದ್ರವು ಒತ್ತಿಹೇಳಿದೆ. ಕೇಂದ್ರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ವಾದ ಮಂಡಿಸಿದರು.

ಇದನ್ನೂ ಓದಿ: ಲಸಿಕಾ ವಿಚಾರ: ಕರ್ನಾಟಕ ಸರ್ಕಾರದ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್ ನಿರಾಕರಣೆ

Last Updated : May 2, 2022, 1:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.